Advertisement

ಆನೆಗೊಂದಿ ಬಳಿ ಚಿರತೆ ಹಾವಳಿ ತಡೆಗೆ ಡಿಸಿ ಸೂಚನೆ

07:42 PM Nov 18, 2020 | Suhan S |

ಗಂಗಾವತಿ: ಆನೆಗೊಂದಿ ಭಾಗದ ಬೆಟ್ಟಪ್ರದೇಶದಲ್ಲಿ ಮೂರು ತಿಂಗಳಿಂದ ಚಿರತೆ, ಕರಡಿಗಳ ಹಾವಳಿ ಹೆಚ್ಚಾಗಿದ್ದು ಜನ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಕೂಡಲೇ ಅಗತ್ಯ ಕ್ರಮಕೈಗೊಂಡು ಚಿರತೆಗಳನ್ನು ಸೆರೆ ಹಿಡಿಯಬೇಕೆ ಎಂದು ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ ಕಿಶೋರ್‌ ಸೂಚನೆ ನೀಡಿದರು.

Advertisement

ಅವರು ತಾಲೂಕಿನ ಆನೆಗೊಂದಿಯಲ್ಲಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಅಂಜನಾದ್ರಿ ಹಾಗೂ ಏಳು ಗುಡ್ಡದಪ್ರದೇಶದಲ್ಲಿ ಇತ್ತೀಚೆಗೆ ಚಿರತೆ, ಕರಡಿಗಳ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಜನ ಜಾನುವಾರುಗಳಿಗೆತೊಂದರೆ ಕೊಡುತ್ತಿವೆ. ಆದಿಶಕ್ತಿ ದೇಗುಲದ ಹತ್ತಿರ ಯುವಕ ಮತ್ತು ಹಸುವನ್ನು ಕೊಂದು ಹಾಕಿದ್ದು, ಬಾಲಕನಿಗೆಚಿರತೆ ಗಾಯಗೊಳಿಸಿದೆ. ಆದ್ದರಿಂದ 15 ದಿನಗಳ ಕಾಲ ಅಂಜನಾದ್ರಿ ಮತ್ತು ಆದಿಶಕ್ತಿದೇಗುಲಕ್ಕೆ ಜನರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಆನೆಗೊಂದಿ, ಹನುಮನಹಳ್ಳಿ, ಸಾಣಾಪೂರ, ಜಂಗ್ಲಿ ರಂಗಾಪೂರ, ಚಿಕ್ಕರಾಂಪೂರ ಗ್ರಾಮಗಳಲ್ಲಿರುವ ಬೆಟ್ಟ ಪ್ರದೇಶದಲ್ಲಿ ಹೆಚ್ಚಿನ ಡ್ರೋನ್‌, ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಇನ್ನೂ ಬೋನ್‌ಗಳನ್ನಿಟ್ಟು ಚಿರತೆ, ಕರಡಿಗಳನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಚಿರತೆ, ಕರಡಿಗಳ ಹಾವಳಿಯಿಂದ ಸ್ಥಳೀಯಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ, ಕರಡಿಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸೆರೆ ಹಿಡಿಯುವಂತೆ ಸೂಚನೆ ನೀಡಿದರು.

ಜಿಲ್ಲಾ ಅರಣ್ಯಾಧಿಕಾರಿ ಹರ್ಷಾಭಾನು, ತಾಲೂಕು ಅರಣ್ಯಾಧಿಕಾರಿ ಶಿವಾನಂದ ಮೇಟಿ, ತಹಶೀಲ್ದಾರ್‌ ಎಂ. ರೇಣುಕಾ ಸೇರಿ ಆನೆಗೊಂದಿ ಸುತ್ತಲಿನ ಗ್ರಾಮಸ್ಥರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next