ಮಂಗಳೂರು: ಸುಡು ಮದ್ದು ದಾಸ್ತಾನು ಮತ್ತು ಮಾರಾಟಕ್ಕೆ ಸ್ಫೋಟಕ ಕಾಯ್ದೆ- 2008ರ ನಿಯಮ 112(3) ದಂತೆ ನಮೂನೆ ಎಲ್‌ಇ-1 ಮತ್ತು ಎಲ್‌ಇ-5ರ ಖಾಯಂ ಪರವಾ ನಿಗೆಗಳನ್ನು ಪಾಲಿಸಲಾಗಿದೆಯೇ ಎಂಬು ದನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಹಾಯಕ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಡುಮದ್ದು ತಯಾರಿಕ ಘಟಕ ಮತ್ತು ದಾಸ್ತಾನು ಮಾರಾಟ ಮಳಿಗೆಗಳ ಸ್ಥಳ ಪರಿಶೀಲನೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರವಾನಿಗೆ ಷರತ್ತು ಪಾಲಿಸ ಲಾಗಿದೆಯೇ? ಅಗ್ನಿಶಾಮಕ ಇಲಾಖೆಯಿಂದ ವರದಿ ಪಡೆಯುವ ಬದಲಾಗಿ ಪರವಾನಿಗೆಗಳ ಮಂಜೂರಾತಿ ಆದೇಶದ ಷರತ್ತುಗಳನ್ನು ಪೂರೈಸಲಾಗಿದೆಯೇ ಎಂಬು ದನ್ನು ಪರಿಶೀಲಿಸಿ ನವೀಕರಿಸುವ ಬಗ್ಗೆ ತೀರ್ಮಾನಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಪರವಾನಿಗೆ ಪಡೆದ 39 ಮಳಿಗೆಗಳಲ್ಲಿ ಅನುಮ ತಿಸಿರುವ ಪಟಾಕಿಗಳನ್ನು ಮಾತ್ರ ಮಾರಬೇಕು. ಲೇಖನ ಸಾಮಗ್ರಿ ಸೇರಿ ದಂತೆ ಯಾವುದೇ ವಸ್ತು ಗಳನ್ನು ಮಾರಕೂಡದು ಎಂದರು.
ಜಿ. ಪಂ. ಸಿಇಒ ಡಾ| ಆನಂದ್, ಜಿಲ್ಲಾ ಎಸ್‌ಪಿ ರಿಷ್ಯಂತ್ ಸಿ.ಬಿ., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ ಕುಮಾರ್, ಸಹಾಯಕ ಆಯುಕ್ತ ಹರ್ಷವರ್ಧನ್, ಜುಬಿನ್ ಮೊಹಾಪಾತ್ರ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ-ಕದ್ರಿ ವಿಭಾಗದ ಮಹಮದ್ ಜುಲ್ಫೀಕರ್ ನವಾಜ್ ಉಪಸ್ಥಿತರಿದ್ದರು.