Advertisement
ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಕೆ. ರಾಜೇಂದ್ರ,ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಯಂತ್ರೋಪಕರಣಗಳ ಖರೀದಿ, ಬೆಡ್, ಕಾಟಾ,ಪಿಪಿಇ ಕಿಟ್, ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯಸಲಕರಣೆ, ಊಟದ ವ್ಯವಸ್ಥೆ ಹಾಗೂ ಇತರೆಸೇರಿ ಇಲ್ಲಿಯವರೆಗೆ ಒಟ್ಟು 8.72 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಬಗ್ಗೆ ಅಡಿಟ್ ಸಹ ಆಗಿದೆ ಎಂದು ತಿಳಿಸಿದರು.
Related Articles
Advertisement
ಜಿಲ್ಲೆಯಲ್ಲಿ ಮಾ. 24 ರಂದು ಒಂದೇ ದಿನ 20 ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 17ಪ್ರಕರಣಗಳು ಬಾಗಲಕೋಟೆಯ ಮಾರವಾಡಿ ಗಲ್ಲಿ ಹಾಗೂ ಸಿಮೆಂಟ್ ಕಾರ್ಖಾನೆ ಹತ್ತಿರ ಹಾಗೂ2 ಹುನಗುಂದ ಮತ್ತು 1 ಪ್ರಕರಣ ಮುಧೋಳದಲ್ಲಿ ಕಂಡುಬಂದಿರುತ್ತದೆ. ಕಳೆದ 7 ದಿನಗಳಲ್ಲಿ15290 ಮಾದರಿ ಪರೀಕ್ಷಿಸಲಾಗಿ ಅದರಲ್ಲಿ 50 ಕೋವಿಡ್ ಪ್ರಕರಣಗಳು ಕಂಡುಬಂದಿವೆ. 18 ಜನ ಮಾತ್ರ ಗುಣಮುಖರಾಗಿದ್ದು, ಯಾವುದೇ ಮರಣ ವರದಿಗಳು ಕಂಡುಬಂದಿರುವುದಿಲ್ಲ. ಫೆಬ್ರವರಿಯಲ್ಲಿ 18 ಹಾಗೂ ಮಾರ್ಚ್‌ನಲ್ಲಿ 81 ಕೋವಿಡ್ ಪ್ರಕರಣಗಳು ಕಂಡುಬಂದಿರುತ್ತದೆ ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಆಗಮನ; ಮಾಹಿತಿ ಕೊಡಿ: ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವ
ಸಾರ್ವಜನಿಕರಿಗೆ ನೆಗೆಟಿವ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಜರುಗಿಸಲಾಗುತ್ತಿದೆ. ಎನ್.ಡಬ್ಲೂ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೂ ಸಹ ಕೋವಿಡ್‌ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರಿಗೆಕೋವಿಡ್ ಲಸಿಕೆ ನೀಡುವುದು ಹಾಗೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕುರಿತುಸರಕಾರ ನಿಗದಿಪಡಿಸಿದ ಗುರಿಯನ್ನು ತಲುಪಲುಕ್ರಮವಹಿಸಲಾಗಿದೆ. ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ರೀತಿಯಿಂದಸಜ್ಜಾಗಿದೆ. ಅಲ್ಲದೇ ವಸತಿ ನಿಲಯಗಳನ್ನುಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಪ್ರಕರಣಗಳು ಹೆಚ್ಚಾದ ಪ್ರದೇಶಗಳಲ್ಲಿ ಸರಕಾರ ಮಾರ್ಗಸೂಚಿಯಂತೆಕಂಟೈನ್‌ಮೆಂಟ್ ಜೋನ್ ರಚಿಸಿ ಸದರಿ ಪ್ರದೇಶದಮೇಲುಸ್ತುವಾರಿಯಾಗಿ ಇನ್ಸಿಡೆಂಟ್ ಕಮಾಂಡರ್ ಗಳನ್ನು ನೇಮಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್. ದೇಸಾಯಿ ಉಪಸ್ಥಿತರಿದ್ದರು.