Advertisement

ಹರಾಜು: ಅಸಿಂಧುಗೊಳಿಸಲು ಶಿಫಾರಸು

04:38 PM Dec 16, 2020 | Suhan S |

ಚಿಕ್ಕಬಳ್ಳಾಪುರ: ಹಣ ಅಥವಾ ಆಮಿಷೆಗಳಿಗೆ ಒಳಗಾಗಿ ಗ್ರಾಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜತೆಗೆ ಸದಸ್ಯ ಸ್ಥಾನಗಳನ್ನು ಅಸಿಂಧುಗೊಳಿಸಲು ಚುನಾವಣಾ ಆಯೋ ಗಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಎಚ್ಚರಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಪಂ ಚುನಾವಣೆ ಪೂರ್ವ ಸಿದ್ಧತೆ ಬಗ್ಗೆ ನಡೆದ ವಿಡಿಯೋ ಸಂವಾದದ ಬಳಿಕ ಚುನಾವಣಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ನಡೆಸಿದಸಭೆಯಲ್ಲಿ ಮಾತನಾಡಿದರು. ರಾಜ್ಯದಕೆಲವುಕಡೆ ಗ್ರಾಪಂ ಸದಸ್ಯ ಸ್ಥಾನಗಳನ್ನು ಹರಾಜುಮೂಲಕ ಆಯ್ಕೆ ಮಾಡುವುದು ಕಂಡುಬಂದಿದೆ.ಇದುಕಾನೂನುಬಾಹಿರವಾದುದು. ಇಂತಹ ಪ್ರಕರಣಗಳು ಕಂಡುಬಂದಲ್ಲಿಆರ್‌ಪಿ ಆಕ್ಟ್ ಪ್ರಕಾರ ಕಾನೂನು ಕ್ರಮ ಜರುಗಿಸುವ ಜತೆಗೆ ವ್ಯಕ್ತಿಯ ಸ್ಥಾನವನ್ನು ಅಸಿಂಧುಗೊಳಿಸಲು ಚುನಾವಣಾಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಹರಾಜು ಪ್ರಕ್ರಿಯೆ ನಡೆಯದಂತೆ ಎಚ್ಚರಿಕೆವಹಿಸಿ ಎಂದು ಎಲ್ಲಾ ತಹಶೀಲ್ದಾರ್‌ರಿಗೂ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ನಗರ, ಪಟ್ಟಣ ಪ್ರದೇಶಹೊರೆತುಪಡಿಸಿ ಉಳಿದಂತೆ ನೀತಿ ಸಂಹಿತಿಜಾರಿಯಲ್ಲಿದೆ. ಜಿಲ್ಲೆಯಲ್ಲಿ ಪ್ರಸ್ತುತ ಪ್ರಥಮಹಂತದ ಗ್ರಾಪಂ ಚುನಾವಣೆಯಲ್ಲಿ ಒಟ್ಟು 84ಗ್ರಾಪಂಗಳ 1348 ಸ್ಥಾನಗಳ ಪೈಕಿ ಒಟ್ಟು 60ಅಭ್ಯರ್ಥಿ (ಸ್ಥಾನ)ಗಳು ಅವಿರೋಧವಾಗಿಆಯ್ಕೆಯಾಗಿದ್ದಾರೆ. ಈ ಪೈಕಿ ಬಾಗೇಪಲ್ಲಿತಾಲೂಕಿನಲ್ಲಿ 22, ಶಿಡ್ಲಘಟ್ಟ ತಾಲೂಕಿನಲ್ಲಿ22ಮತ್ತು ಚಿಂತಾಮಣಿ ತಾಲೂಕಿನಲ್ಲಿ 16ಮಂದಿ ಅಭ್ಯರ್ಥಿಗಳು ಅವಿರೋಧವಾಗಿಆಯ್ಕೆಯಾಗಿದ್ದು, ಅವಿರೋಧವಾಗಿ ಆಯ್ಕೆಯಾದ ಸದಸ್ಯ ಸ್ಥಾನಗಳು ಕ್ರಮಬದ್ಧವಾಗಿಆಗಿವೆಯೇ ಎಂಬುದರ ಬಗ್ಗೆ ಉಪವಿಭಾಗಾಕಾರಿಗಳಿಂದ ಪರಿಶೀಲನೆ ಮಾಡಿ ದೃಢಪಡಿಸಲಾಗಿದೆ. ಎಲ್ಲಾ ಅವಿರೋಧಗಳು ಕ್ರಮ ಬದ್ಧವಾಗಿಯೇ ಆಗಿದ್ದು, ಮುಂದಿನ ಹಂತದ ಚುನಾವಣೆಯಲ್ಲೂ ಯಾವುದೇ ಹರಾಜು ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಆಗದಂತೆ ಅಗತ್ಯಕ್ರಮಕೈಗೊಳ್ಳಬೇಕುಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಮುಖವಾಗಿ ಜಿಲ್ಲೆಯಲ್ಲಿ ಕೋವಿಡ್  ಲಕ್ಷಣಗಳು ಇರುವ ವ್ಯಕ್ತಿಗಳು ಮತದಾನದದಿನ ಮತದಾನ ಮುಗಿಯುವ ಒಂದು ಗಂಟೆಮುಂಚಿತವಾಗಿ ಮತಗಟ್ಟೆಗೆ ಬಂದು ಮತ ಹಾಕಬಹುದು. ಇದಕ್ಕೂ ಮುನ್ನ ಕೊರೊನಾಪೀಡಿತ ವ್ಯಕ್ತಿ ಲಿಖೀತ ರೂಪದಲ್ಲಿ ಅರ್ಜಿಯಮೂಲಕ ಆಯಾ ಭಾಗದ ಆರ್‌ಒಗಳ ಗಮನಕ್ಕೆ ತರಬೇಕು ಎಂದರು.

ಗ್ರಾಪಂ ಚುನಾವಣೆ ಸಂಬಂಧ ಜಿಲ್ಲಾದ್ಯಂತ ಅಗತ್ಯ ಪೊಲೀಸ್‌ ಬಂದೋಬಸ್ತ್ ಸೇರಿದಂತೆ ಸೂಕ್ಷ್ಮ,ಅತಿ ಸೂಕ್ಷ್ಮಮತಗಟ್ಟೆಗಳಿಗೆ ಅಗತ್ಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿ ಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಪೊಲೀಸ್‌ ವರಿಷ್ಠಾಕಾರಿ  ವಿವರಿಸಿದರು.ಜಿಪಂಸಿಇಒ ಪಿ.ಶಿವಶಂಕರ್‌, ಅಪರ ಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಆಧಿಕಾರಿಗಳಿದ್ದರು.

Advertisement

144 ಪ್ರಕರಣಗಳು ದಾಖಲು,730 ಲೀ ಮದ್ಯ ವಶ :  ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಅಬಕಾರಿ ಅಧಿಕಾರಿಗಳಿಂದ ಹಲವುಕಡೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಮತ್ತು ದಾಸ್ತಾನು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಟ್ಟು144 ಪ್ರಕರಣದಾಖಲಿಸಲಾಗಿದ್ದು, ಈ ಪೈಕಿ ಅಬಕಾರಿಇಲಾಖೆ ವತಿಯಿಂದ 64 ಪ್ರಕರಣಹಾಗೂ ಇಲಾಖೆ ಯಿಂದ 80 ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ 730 ಲೀ. ಮದ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿಗಳಾದ ಜಿ.ಕೆ. ಮಿಥುನ್‌ಕುಮಾರ್‌ ತಿಳಿಸಿದರು.

ಆಮಿಷಗಳಿಗೆ ಒಳಗಾಗದಿರಿ: ಜಿಲ್ಲಾಧಿಕಾರಿ ಮನವಿ :  ಜಿಲ್ಲೆಯಲ್ಲಿ ಡಿ.22 ರಂದು ಮೊದಲನೇ ಹಂತ ಹಾಗೂ ಡಿ.27 ರಂದು ಎರಡನೇ ಹಂತದ ಗ್ರಾಪಂ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಲಾಗಿದ್ದು, ನಿರ್ಭಯದಿಂದ ಬಂದು ಮತ ಚಲಾಯಿಸಬೇಕು. ಹಣ, ಮದ್ಯ ಸೇರಿದಂತೆ ಯಾವುದೇ ಆಸೆ, ಆಮಿಷೆಗಳಿಗೆ ಒಳಗಾಗಬಾರದು ಎಂದು ಡೀಸಿ ಮತದಾರರಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next