Advertisement
ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮು ಸಿದ್ಧತೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲ ಮಾಡುವ ನಿಟ್ಟಿನಲ್ಲಿ ಆಧಾರ್ ಜೋಡಣೆ ಮಾಡಬೇಕಿದೆ. ಈವರೆಗೆ ಮಾಡಿಕೊಳ್ಳದ ರೈತರು ತಕ್ಷಣ ಆಧಾರ್-ಪಹಣಿ ಜೋಡಣೆ ಮಾಡಿಕೊಳ್ಳಬೇಕು. ಆಧಾರ್ ಜೋಡಣೆ ಆದರೆ ಸರ್ಕಾರದ ಸೌಲಭ್ಯಗಳು ಹಾಗೂ ಶೀಘ್ರದಲ್ಲಿ ಪರಿಹಾರ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು.
Related Articles
Advertisement
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಕಳಪೆ ಮಾದರಿಗಳನ್ನು ಮಾರಾಟ ಮಾಡಿದವರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅ ಧಿಕಾರಿಗಳಿಗೆ ಜಿಲ್ಲಾ ಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿದವರ ವಿರುದ್ಧ ಮೊಕದ್ದಮೆ ಹೂಡಿ, ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾತನಾಡಿ, ಆಧಾರ್-ಪಹಣಿ ಜೋಡಣಿ ಆಂದೋಲನ ಕುರಿತು ವ್ಯಾಪಕ ಪ್ರಚಾರದ ಮೂಲಕ ರೈತರಿಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಆಧಾರ್-ಪಹಣಿ ಜೋಡಣಿ ಬಹಳ ಕಡಿಮೆ ಇದೆ. ಹಾಗಾಗಿ ಹೆಚ್ಚು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ 2020-21ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ 51,827 ಟನ್ ರಸಗೊಬ್ಬರ ವಿತರಿಸಲಾಗಿದೆ. ಇದರಲ್ಲಿ ಯೂರಿಯಾ 18 ಸಾವಿರ ಟನ್, ಡಿಎಪಿ 10 ಸಾವಿರ ಟನ್ ಗೊಬ್ಬರ ವಿತರಿಸಲಾಗಿದ್ದು, ಅದರಲ್ಲಿ, ಚಳ್ಳಕೆರೆ ತಾಲೂಕಿನಲ್ಲಿ 15 ಸಾವಿರ ಟನ್ ಮತ್ತು ಚಿತ್ರದುರ್ಗ ತಾಲೂಕಿನಲ್ಲಿ 18 ಸಾವಿರ ಟನ್ ರಸಗೊಬ್ಬರ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ :5 ಜಿಪಂ ಸ್ಥಾನ ಹೆಚ್ಚಳ-17 ತಾಪಂ ಕ್ಷೇತ್ರ ಕಡಿಮೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ ನೀರಾವರಿ ಬೆಳೆ ನೋಂದಣಿಗೆ ಮಾರ್ಚ್ 1 ಕೊನೆಯ ದಿನವಾಗಿದೆ. ನೀರಾವರಿ ಬೆಳೆಗಳಾದ ಭತ್ತ, ರಾಗಿ, ಶೇಂಗಾ ಮತ್ತು ಸೂರ್ಯ ಕಾಂತಿ ಬೆಳೆಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಉಪವಿಭಾಗಾ ಧಿಕಾರಿ ಪ್ರಸನ್ನ, ಕೃಷಿ ಉಪನಿರ್ದೇಶರಾದ ಹುಲಿರಾಜ್, ಪ್ರಭಾಕರ್, ಕೃಷಿ ಸಂಬಂಧಿ ತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಪರಿಕರ ಮಾರಾಟಗಾರರ ಅಧ್ಯಕ್ಷರು, ಬಿತ್ತನೆ ಬೀಜ ಸರಬರಾಜುದಾರರು,
ಕೆಎಸ್‌ಎಸ್‌ಸಿ, ಕೆಒಎಫ್, ಎನ್‌ಎಸ್‌ಸಿ ಮತ್ತು ಖಾಸಗಿ ಮಾರಾಟಗಾರರು ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.