ಜಗಳೂರು: ದಿನಪತ್ರಿಕೆಗಳು ತಲುಪದ, ಗ್ರಂಥಾಲಯ ಸೌಲಭ್ಯ ಇಲ್ಲದ ಗ್ರಾಮಗಳ ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಹೊಂದಿ ಇತರರಿಗೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ತಾಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸನಹಳ್ಳಿ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ “ಜಿಲ್ಲಾ ಧಿಕಾರಿಗಳ ನಡೆ ಗ್ರಾಮಗಳ ಕಡೆ’ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದು ಕುಗ್ರಾಮವಲ್ಲ, ಅತ್ಯಂತ ಶಕ್ತಿ ಇರುವ ಇರುವ ಸುಬ್ರಹ್ಮಣ್ಯಸ್ವಾಮಿ ನಲೆಸಿರುವ ಗ್ರಾಮವಾಗಿದೆ. ಸ್ವಾಮಿಯೇ ಇಡೀ ಜಿಲ್ಲಾಡಳಿತವನ್ನೇ ತನ್ನ ಸನ್ನಿಧಾನಕ್ಕೆ ಕರೆತಂದಿದ್ದಾನೆ ಎಂದರು. ಗ್ರಾಮದ ಪ್ರತಿಯೊಂದು ಕೇರಿಗಳಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಮಾತ ನಾಡಿಸುವುದರಿಂದ ಅವರ ಸಮಸ್ಯೆಗಳನ್ನು ಆಲಿಸಲು ಸಹಕಾರಿಯಾಗಲಿದೆ. ಸಂಸದರು ಮತ್ತು ಶಾಸಕರ ಸಹಕಾರದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಬರೀ ಮಾತನಾಡಿ ಹೋಗುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೆಲಸಗಳನ್ನು ಮಾಡಿ ತೋರಿಸುತ್ತೇವೆ ಎಂದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ಶಿಕ್ಷಣ ಕೊಡಿಸಿ. ಆದರೆ ಬಾಲ್ಯವಿವಾಹ ಮಾಡಬೇಡಿ. ಮಾಡಿದರೆ ಶಿಕ್ಷೆಗೆ ಗುರಿಯಾಗಲಿದ್ದೀರಿ ಎಂದು ಎಚ್ಚರಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಆಸಗೋಡು ಜಯಸಿಂಹ , ಜಿಪಂ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ, ತಾಪಂ ಇಒ ಮಲ್ಲಾ ನಾಯ್ಕ, ಸಿಪಿಐ ದುರುಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮ ಮುಗಿದ ತಕ್ಷಣ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳುಮುಗಿ ಬಿದ್ದು ಸನ್ಮಾನ ಮಾಡಿದರೆ, ಮತ್ತೆ ಕೆಲವರು ಸೆಲ್ಫಿà ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ದೇವಸ್ಥಾನದಲ್ಲಿ ಗ್ರಾಮಸ್ಥರೊಂದಿಗೆ ಜಿಲ್ಲಾ ಧಿಕಾರಿ, ಜಿಪಂ ಸಿಇಒ ಹಾಗೂ ಅಧಿಕಾರಿಗಳು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಧಿಕಾರಿಗಳು ಸ್ವತಃ ಭಜನೆ ಪದಗಳನ್ನು ಹಾಡಿ ಗಮನ ಸೆಳೆದರು.