Advertisement

ಆಡಳಿತಾಧಿಕಾರಿ ಆಗಿ ಡೀಸಿ ಲತಾ ಅಧಿಕಾರ ಸ್ವೀಕಾರ

05:46 PM Jun 24, 2022 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಚಿಮುಲ್‌)ದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಆರ್‌. ಲತಾ ಅಧಿಕಾರ ಸ್ವೀಕರಿಸಿದರು.

Advertisement

ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಲತಾ, ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ. ಜಿಲ್ಲೆಯಲ್ಲಿ ಚಿಮುಲ್‌ ಸ್ಥಾಪನೆ ಮೈಲಿಗಲ್ಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಒಕ್ಕೂಟದ ಆಡಳಿತ ವ್ಯವಸ್ಥೆಗಾಗಿ ನನ್ನನ್ನು ಸರ್ಕಾರ ಆಡಳಿತಾಧಿ ಕಾರಿಯಾಗಿ ನೇಮಿಸಿದೆ. ಅದರಂತೆ ಮೂರು ತಿಂಗಳ ಒಳಗೆ ಚಿಮುಲ್‌ ಆಡಳಿತ ಮಂಡಳಿಗೆ ಕ್ರಮಬದ್ಧವಾಗಿ ಚುನಾವಣೆ ನಡೆಸಿ, ಆಯ್ಕೆ ಆದ ಮಂಡಳಿಗೆ ಅಧಿ ಕಾರ ಹಸ್ತಾಂತರಿಸುತ್ತೇನೆ. ಅಲ್ಲಿಯವರೆಗೆ ಒಕ್ಕೂಟದ ಕೆಲಸ ಕಾರ್ಯಗಳಿಗೆ ತೊಡಕಾಗದಂತೆ ಸಕ್ರಿಯವಾಗಿ
ಕಾರ್ಯನಿರ್ವಹಿಸುವುದಾಗಿ ಡೀಸಿ ತಿಳಿಸಿದರು.

ಶೀತಲ ಘಟಕಗಳ ನಿರ್ಮಾಣ: ಮೆಗಾ ಡೇರಿ ಪ್ರಧಾನ ವ್ಯವಸ್ಥಾಪಕಿ ಜಿ.ಬಿ.ವಿಜಯಲಕ್ಷಿ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿನಿತ್ಯ ಬಿಎಂಸಿ 19ರ ಮಾರ್ಗದಲ್ಲಿ 2.7 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಅದರಲ್ಲಿ 1.5 ಲಕ್ಷ ಲೀಟರ್‌ ಯುಎಸ್‌ಟಿ ಉತ್ಪನ್ನಕ್ಕೆ ಹಾಗೂ 3 ತಿಂಗಳವರೆಗೂ ಸಂರಕ್ಷಿಸ ಬಹುದಾದ ಫ್ಲೆಕ್ಸಿ ಹಾಲಿನ ಉತ್ಪನ್ನಕ್ಕೆ 50 ಸಾವಿರ ಲೀಟರ್‌ ಅನ್ನು ಬಳಸಿಕೊಳ್ಳಲಾಗುತ್ತದೆ. 1 ಟನ್‌ ಸಾಮರ್ಥ್ಯದ ಬೆಣ್ಣೆ, ತುಪ್ಪ ಉತ್ಪಾದನಾ ಘಟಕವಿದೆ. 450 ಟನ್‌ ತುಪ್ಪ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ ಶೀತಲ (ಕೋಲ್ಡ್‌ ಸ್ಟೋರೇಜ್‌) ಘಟಕಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ ಜಿ.ಬಿ.ಮಂಜುಳಾ ಮಾತನಾಡಿ, ಜಿಲ್ಲೆಗೆ ಹಾಲು ಒಕ್ಕೂಟ ರಚನೆಯಾಗಿದ್ದು, ಆರೋಗ್ಯ ಸಚಿವರ ಪರಿಶ್ರಮದಿಂದಾಗಿ ಹಾಲು ಉತ್ಪಾದಕ ರೈತರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು.

ಡೀಸಿ ನಿರ್ದೇಶನದಂತೆ ಕಾರ್ಯನಿರ್ವಹಣೆ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೋಂದಣಿಯಾಗಿ ಡೀಸಿ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತೋಷವಾಗಿದೆ. ಶೀಘ್ರಗತಿಯಲ್ಲಿ ನೂತನ ಒಕ್ಕೂಟದ ಆಡಳಿತ ಮಂಡಳಿ ರಚನೆಯಾಗಿ, ಕೆಲಸ ಕಾರ್ಯಗಳು ಸುಸೂತ್ರವಾಗಿ ನಿರ್ವಹಣೆ
ಆಗಲಿವೆ. ಈ ನಿಟ್ಟಿನಲ್ಲಿ ಡೀಸಿ ನಿರ್ದೇಶನಗಳಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

Advertisement

ಅಧಿಕಾರಿ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳು ಹಾಲು ಸಂಗ್ರಹಣೆ ಘಟಕ, ಪ್ರಯೋಗಾಲಯ, ಪ್ಯಾಕಿಂಗ್‌ ಘಟಕ, ಬೆಣ್ಣೆ ಹಾಗೂ ತುಪ್ಪ ತಯಾರಿಸುವ ಘಟಕ ಸೇರಿ ವಿವಿಧ ಘಟಕಗಳ ಕಾರ್ಯ ವೈಖರಿ ಖುದ್ದಾಗಿ ಪರಿಶೀಲಿಸಿದರು. ಮೆಗಾ ಡೇರಿಯ ಹೊರಾಂಗಣ ಆವರಣವನ್ನು ಒಂದು ಸುತ್ತು ವೀಕ್ಷಿಸಿ ಅವಲೋಕಿಸಿದರು.

ಮೆಗಾ ಡೇರಿಯ ಸಹಾಯಕ ವ್ಯವಸ್ಥಾಪಕರಾದ ಜಿ.ಎಲ್‌.ಅಶ್ವತ್ಥನಾರಾಯಣ, ಎಂ.ಕೆ.ಉಮಾ, ನಟರಾಜು, ಮಾರುಕಟ್ಟೆ ಅಧೀಕ್ಷಕರಾದ ಎಸ್‌.ಎಲ್‌.ಮಧುಸೂದನ್‌ ರೆಡ್ಡಿ, ಆಡಳಿತ ಅಧಿಧೀಕ್ಷಕರಾದ ರಮೇಶ್‌ಬಾಬು, ಇತರೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next