Advertisement

ಕ್ವಾರಂಟೈನ್‌ ಕೇಂದ್ರಕ್ಕೆ ಡಿಸಿ ಕೂರ್ಮಾರಾವ್‌ ಭೇಟಿ

05:47 AM May 16, 2020 | Suhan S |

ಶಹಾಪುರ: ಯಾದಗಿರಿ ಜಿಲ್ಲಾದ್ಯಂತ ಹೊರ ರಾಜ್ಯ ಜಿಲ್ಲೆಗಳಿಂದ 6 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆ ಜಿಲ್ಲೆಯ ವಸತಿ ಹಾಗೂ ಇತರೆ ಸೌಕರ್ಯಗಳ ಸ್ಥಳಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಸ್ಥಾಪಿಸಿದ್ದ ಕ್ವಾರಂಟೈನ್‌ ಕೇಂದ್ರಕ್ಕೆ ಭೇಟಿ ನೀಡಿ ವಲಸಿಗರ ಆರೋಗ್ಯ ಮತ್ತು ಸಮಸ್ಯೆ ಆಲಿಸಿ ಅವರು ಮಾತನಾಡಿ, ಕ್ವಾರಂಟೈನ್‌ನಲ್ಲಿರುವ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ನಿಗಾ ವಹಿಸಲಾಗುತ್ತಿದೆ. ಪ್ರತಿ ಕ್ವಾರಂಟೈನರಿಗೂ ಮಾಸ್ಕ್ ವಿತರಿಸಲು ಸೂಚಿಸಿದ್ದೇನೆ. ಶುದ್ದ ಕುಡಿಯುವ ನೀರು, ಊಟದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಮೊರಾರ್ಜಿ ವಸತಿ ಶಾಲೆಯ ವಿವಿಧ ಕಟ್ಟಡಗಳಲ್ಲಿ ಒಟ್ಟು 524 ಜನರನ್ನು ಇರಿಸಲಾಗಿದ್ದು, ಗರಿಷ್ಠತೆ ಮೀರಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಜನರಿಗಿಂತ ಹೆಚ್ಚು ಜನ ವಲಸೆ ಕಾರ್ಮಿಕರನ್ನು ಇಡಲಾಗಿದೆ. ಇದರಲ್ಲಿ ನಿಗದಿತ ಜನರನ್ನು ಇರುವ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಇದರಲ್ಲಿ ಕೆಲವರನ್ನು ಮೊರಾರ್ಜಿ ಹೊಸ ಕಟ್ಟಡಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದರು.

ತಹಶೀಲ್ದಾರ್‌ ಜಗನ್ನಾಥರಡ್ಡಿ, ವಸತಿ ನಿಲಯದ ಪ್ರಾಂಶುಪಾಲ ಬಿ.ಎಸ್‌. ಪಾಟೀಲ್‌, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next