Advertisement

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : ಗ್ರಾಮಸ್ಥರಿಗೆ ಭಾರೀ ನಿರೀಕ್ಷೆ

10:34 PM Mar 18, 2021 | Team Udayavani |

ವಿಟ್ಲ: ದ.ಕ.ಜಿಲ್ಲಾ ಧಿಕಾರಿ ರಾಜೇಂದ್ರ ಅವರು ಮಾ.20ರಂದು ವಿಟ್ಲಪಟ್ನೂರು ಗ್ರಾಮದ ಕೊಡಂಗಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಬೆಳಗ್ಗೆ ಗಂಟೆ 11ರಿಂದ ಸಂಜೆ ಗಂಟೆ 5.30ರ ವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. 34 ಇಲಾಖೆಗಳ ಅಧಿಕಾರಿಗಳು ಆಗಮಿಸಲಿದ್ದು 8 ಸ್ಟಾಲ್‌ಗ‌ಳನ್ನು ಹಾಕಲಾಗುತ್ತದೆ. ಕೆಲ ವೊಂದು ಸಮಸ್ಯೆಗಳು ಸ್ಥಳದಲ್ಲೇ ಇತ್ಯರ್ಥ ವಾಗಲಿದ್ದು, ಮತ್ತೆ ಕೆಲವು ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಗಣಕಯಂತ್ರಗಳನ್ನು ಬಳಸಿ, ಸ್ಥಳೀಯ ಗ್ರಾಮಸ್ಥರ ಸಮಸ್ಯೆ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾಗಬಹುದು ಮತ್ತು ಈ ಎಲ್ಲ ವಿಚಾರಗಳು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದ್ದು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

Advertisement

ಅರಣ್ಯ ಇಲಾಖೆಯ ವ್ಯಾಪ್ತಿಯ ಕೋಟಿಮೂಲೆಯಲ್ಲಿ 9 ಮಂದಿಗೆ ಹಕ್ಕುಪತ್ರ ವಿತರಣೆಯಾಗದೆ ಇರುವ ಸಮಸ್ಯೆ ಪರಿಹಾರವಾಗಬಹುದೆಂಬ ನಿರೀಕ್ಷೆಯನ್ನಿಡಲಾಗಿದೆ.

ಗ್ರಾಮದ ಗಡಿ ಭಾಗದಿಂದ 3 ಕಿಮೀ ದೂರದಕೃಷಿಕರಿಗೆ ಕುಮ್ಕಿ ಹಕ್ಕು ಸಕ್ರಮವಾಗುತ್ತಿಲ್ಲ. ಶೇ.90 ರಷ್ಟು ಫಲಾನುಭವಿಗಳು ಈ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆ ನಿವಾರಣೆಯಾಗಬಹುದೆಂಬ ನಿರೀಕ್ಷೆಯೂ ಇದೆ. ಬಿಎಸ್ಸೆನ್ನೆಲ್‌ ಅಥವಾ ಇನ್ನಾವುದೇ ನೆಟÌರ್ಕ್‌ ಸಿಗ್ನಲ್‌ ಸರಿಯಿಲ್ಲದೇ ಗ್ರಾಮಸ್ಥರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.

ವಿದ್ಯುತ್‌ ಕಡಿತ, ಅಪಾಯಕಾರಿ ವಿದ್ಯುತ್‌ ಕಂಬಗಳ ಬದಲಾವಣೆ ಇತ್ಯಾದಿ ಸಂಕಷ್ಟಕ್ಕೆ ಪರಿಹಾರ ಸಿಕ್ಕಿಲ್ಲ.

ಆಧಾರ ಸಮಸ್ಯೆ
ಆಧಾರ್‌ ಕಾರ್ಡ್‌ ಸಿಗದಿರುವವರಿಗೆ ಒದಗಿಸುವ ವ್ಯವಸ್ಥೆಯಾಗಬಹುದು. ಪಡಿತರ ಚೀಟಿ, ನ್ಯಾಯಬೆಲೆ ಅಂಗಡಿ ಯಲ್ಲಿ ಪಡಿತರ ಸಾಮಗ್ರಿ ವಿತರಣೆಯನ್ನು ಸಮರ್ಪಕವಾಗಿಸುವ ನಿಟ್ಟಿನಲ್ಲಿ ಪ್ರಯೋಜನ ವಾಗಬಹುದೆಂಬ ನಿರೀಕ್ಷೆಯಿದೆ.

Advertisement

ತೀರಾ ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು ಇತ್ಯಾದಿ ಮೂಲಭೂತ ಆವಶ್ಯಕತೆಗಳನ್ನು ಒದಗಿಸಲು ಸೂಕ್ತ ಕ್ರಕೈಗೊಳ್ಳಲು ಜಿಲ್ಲಾಧಿಕಾರಿ ಕ್ರಮಕೈಗೊಳ್ಳುವ ಬಗ್ಗೆ ಜನತೆ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇದಲ್ಲದೇ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಇತ್ಯಾದಿ ಅನುಕೂಲಗಳನ್ನು ಸ್ಥಳದಲ್ಲೇ ನೀಡುವ ಸಾಧ್ಯತೆಯಿದೆ.

ವಿಸ್ತೃತ ರೂಪ
ಹಿಂದೆ ಕಂದಾಯ ಅದಾಲತ್‌ ನಡೆಯುತ್ತಿತ್ತು. ಅದರ ವಿಸ್ತೃತ ರೂಪವಾಗಿರುವ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯವು ನಾಗರಿಕರ ಮನೆಬಾಗಿಲಿಗೆ ತಲುಪುವಂತಾಗಿದೆ. ಅದರ ಸ್ವರೂಪ ಇನ್ನಷ್ಟು ಗಟ್ಟಿಯಾಗಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next