Advertisement

ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಡಿಸಿ

10:25 AM Jun 29, 2019 | Suhan S |

ಜೋಯಿಡಾ: ಸಾರ್ವಜನಿಕರ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ. ಜೋಯಿಡಾ ತಾಲೂಕಿನ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು.

Advertisement

ಪಿಎಂಜಿಎಸ್‌ವೈ ಹಾಗೂ ಡಿಯುಡಿಸಿ ಮತ್ತು ಪಿಡಬ್ಲೂಡಿ ಇಂಜನೀಯರ್‌ಗಳ ತಂಡ ಹಾಗೂ ರಸ್ತೆ ಗುಣಮಟ್ಟ ಯಂತ್ರದೊಂದಿಗೆ ತೆರಳಿದ ಜಿಲ್ಲಾಧಿಕಾರಿ, ಜೋಯಿಡಾ ಗ್ರಾಪಂ ವ್ಯಾಪ್ತಿಯ ದಿಗಲಂಬಾ-ಕಳಸಾಯಿ ರಸ್ತೆ ಮತ್ತು ಸೇತುವೆ ಕಾಮಗಾರಿ, ಮೆಸ್ತ-ಬಿರೋಡಾ ರಸ್ತೆ ಮತ್ತು ಚರಂಡಿ ಕಾಮಗಾರಿ, ಕಾತೇಲಿ ಗ್ರಾಪಂ ವ್ಯಾಪ್ತಿಯ ಶೆಂಡಿಲ್ ಮಹಾರಾಜ ರಸ್ತೆ ಮತ್ತು ಸೇತುವೆ, ಕುಂಡಲ ಹಾಗೂ ತೇರಾಳಿ ರಸ್ತೆ, ಅಣಶಿ ಗ್ರಾಪಂ ವ್ಯಾಪ್ತಿಯ ಡೊಕರಪ್ಪಾ, ನಿಗುಂಡಿ ಹಾಗೂ ದೂದ್‌ಗಾಲಿ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.

ಇದರಲ್ಲಿ ನ್ಯೂನತೆ ಕಂಡುಬಂದಂತಹ ಕಾಮಗಾರಿಗಳ ಅನುದಾನವನ್ನು ಕಾಮಗಾರಿ ಸರಿಪಡಿಸುವವರೆಗೂ ತಡೆ ಹಿಡಿಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಿಇಒ, ತಹಶೀಲ್ದಾರ್‌ ಸಂಜಯ ಕಾಂಬ್ಳೆ, ಲೋಕೋಪಯೋಗಿ ಇಲಾಖೆಯ ಸ.ಕಾ. ಅಭಿಯಂತರ ಛಬ್ಬಿ, ಸಹಾಯಕ ಇಂಜನೀಯರ ಸತೀಶ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next