Advertisement

ಡಿಬಿಟಿ ಎಫೆಕ್ಟ್!

04:39 PM Jul 13, 2020 | Suhan S |

ಸರ್ಕಾರದ ‘ಡೈರೆಕ್ಟ್ ಬೆನಿಫಿಟ್‌ ಟ್ರಾನ್ಸ್‌ ಫರ್‌'(ಡಿಬಿಟಿ) ಯೋಜನೆಯಡಿ, ಎಲ್‌ ಪಿ ಜಿ ಗ್ಯಾಸ್‌ ಸಿಲಿಂಡರ್‌ ಗೆ ಒದಗಿಸ ಲಾಗುತ್ತಿರುವ ಸಬ್ಸಿಡಿ ಹಣದ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾ ಯಿಸಲಾಗುತ್ತಿದೆ. ಅದಕ್ಕಾಗಿ ಎಲ್‌ ಪಿ ಜಿ ಗ್ರಾಹಕರು ಮಾಡಬೇಕಿರುವುದಿಷ್ಟೆ: ಎಲ್‌ ಪಿ ಜಿ ಸಂಪರ್ಕವನ್ನು ಆಧಾರ್‌ ಕಾರ್ಡ್‌ ಜೊತೆ ಲಿಂಕ್‌ ಮಾಡಬೇಕು. ಆಗ ಮಾತ್ರ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಸೇರುವುದು. ಗ್ಯಾಸ್‌ ಸಂಪರ್ಕ ಮತ್ತು ಆಧಾರ್‌ ಕಾರ್ಡನ್ನು ಲಿಂಕ್‌ ಮಾಡಲು ಹಲವು ಮಾರ್ಗಗಳಿವೆ. ಜಾಲತಾಣದ ಮೂಲಕ ಮಾಡಬಹುದು, ಡಿಸ್ಟ್ರಿಬ್ಯೂಟರ್‌ ನೆರವಿನಿಂದ ಮಾಡ ಬಹುದು, ಕಾಲ್‌ ಮಾಡುವ ಮೂಲಕ, ಎಸ್ಸೆಮ್ಮೆಸ್‌ ಕಳಿಸುವ ಮೂಲಕ ಹಾಗೂ ಐ.ವಿ.ಆರ್‌.ಎಸ್‌ ಮೂಲಕವೂ ಆಧಾರ್‌ ಲಿಂಕ್‌ ಮಾಡಬಹು ದಾಗಿದೆ. ಆಧಾರ್‌ ಕಾರ್ಡ್‌ ಅನ್ನು ಗ್ಯಾಸ್‌ ಕನೆಕ್ಷನ್‌ ಜೊತೆ ಲಿಂಕ್‌ ಮಾಡುವ ಬಗೆಗಳನ್ನು ಕೆಳಗೆ ನೀಡಲಾಗಿದೆ.

Advertisement

ಡಿಸ್ಟ್ರಿಬ್ಯೂಟರ್‌ ಸಬ್ಸಿಡಿ ಅಪ್ಲಿಕೇಷನ್‌ ಅರ್ಜಿಯನ್ನು ಆಯಾ ಗ್ಯಾಸ್‌ ಸಂಸ್ಥೆಗಳ ಜಾಲತಾಣದಿಂದ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ನಂತರ ಪ್ರಿಂಟ್‌ ಔಟ್‌ ತೆಗೆದು, ಅದರಲ್ಲಿ ಸೂಕ್ತ ವಿವರಗಳೆಲ್ಲವನ್ನೂ ತುಂಬಬೇಕು. ಮುಂದೆ ಹತ್ತಿರದ ಎಲ್‌ ಪಿ ಜಿ ಡಿಸ್ಟ್ರಿಬ್ಯೂ ಟರ್‌ ಕಚೇರಿಗೆ ತೆರಳಿ ಅರ್ಜಿಯನ್ನು ಹಸ್ತಾಂತರಿಸಿ. ಕಾಲ್‌ ಸೆಂಟರ್‌ ಎಲ್‌ ಪಿ ಜಿ ಕನೆಕ್ಷನ್‌ ಮತ್ತು ಆಧಾರ್‌ ಕಾರ್ಡ್‌ ಸಂಪರ್ಕ ಸಾಧಿಸಲು ಕಾಲ್‌ ಸೆಂಟರ್‌ ನೆರವನ್ನೂ ಪಡೆದುಕೊಳ್ಳಬಹುದು. 1800- 2333- 555 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಆಪರೇಟರ್‌ ಜೊತೆ ಮಾತನಾಡಿ, ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಮುಂದುವರಿ ಯ ಬಹುದು. ಪೋಸ್ಟ್‌ ಅಪ್ಲಿಕೇಷನ್‌ ಫಾರ್ಮ್ ಅನ್ನು ಆಯಾ ಗ್ಯಾಸ್‌ ಸಂಸ್ಥೆಗಳ ಜಾಲ ತಾಣ ದಿಂದ ಡೌನ್‌ ಲೋಡ್‌ ಮಾಡಿ ಕೊಳ್ಳಬೇಕು. ನಂತರ ಅದರ ಪ್ರಿಂಟ್‌ ಔಟ್‌ ತೆಗೆದುಕೊಂಡು, ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ತುಂಬಬೇಕು. ನಂತರ ಫಾರ್ಮ್ ನಲ್ಲಿ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್‌ ಮೂಲಕ ಕಳಿಸಬೇಕು.

ಐವಿಆರ್‌ ಎಸ್‌ ಎಲ್‌ ಪಿ ಜಿ ಸಂಸ್ಥೆ ಗಳು ಗ್ರಾಹಕರಿಗೆ ನೆರವಾಗುವ ಉದ್ದೇಶ ದಿಂದ ‘ಐವಿಆರ್‌ ಎಸ್‌’ (ಇಂಟರಾಕ್ಟಿವ್‌ ವಾಯ್ಸ ರೆಸ್ಪಾನ್ಸ್‌ ಸಿಸ್ಟಮ್‌) ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಅದರ ಸಹಾಯದಿಂದ ಗ್ರಾಹಕರು, ಗ್ಯಾಸ್‌ ಸಂಪರ್ಕವನ್ನು ಆಧಾರ್‌ ಜೊತೆ ಲಿಂಕ್‌ ಮಾಡಿ ಡಿಬಿಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ಜಿಲ್ಲೆಯೂ ಒಂದೊಂದು ಐವಿಆರ್‌ ಎಸ್‌ ಸಂಖ್ಯೆಯನ್ನು ಹೊಂದಿ ರುತ್ತವೆ. ಇಂಡೇನ್‌, ಭಾರತ್‌ ಮತ್ತು ಎಚ್‌ ಪಿ. ಗ್ರಾಹಕರು ಸಂಸ್ಥೆಯ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಜಿಲ್ಲೆಯ ಐವಿಆರ್‌ ಎಸ್‌ ಸಂಖ್ಯೆಯನ್ನು ಪಡೆಯಬಹುದು. ಆ ಸಂಖ್ಯೆಗೆ ಕರೆ ಮಾಡುವ ಮೂಲಕ, ಸಂಸ್ಥೆಯ ಸಿಬ್ಬಂದಿ ನೀಡುವಸೂಚನೆಗಳನ್ನು ಪಾಲಿಸುವ ಮೂಲಕ ಡಿಬಿಟಿ ಯೋಜನೆಗೆ ಒಳಪಡಬಹುದು. ­

Advertisement

Udayavani is now on Telegram. Click here to join our channel and stay updated with the latest news.

Next