Advertisement

“ಡ್ಯಾಜ್ಲಿಂಗ್‌ ಧಾರವಾಡ’ಬಿಡುಗಡೆ

01:37 PM Jul 01, 2020 | Suhan S |

ಹುಬ್ಬಳ್ಳಿ: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಸಿದ್ಧಪಡಿಸಿರುವ “ಡ್ಯಾಜ್ಲಿಂಗ್‌ ಧಾರವಾಡ’ ಪ್ರವಾಸಿಗರ ಮಾರ್ಗದರ್ಶಿಯಾಗಿದ್ದು, ಜಿಲ್ಲೆಯ ಸಮಗ್ರ ಮಾಹಿತಿ ಒಳಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಸರ್ಕೀಟ್‌ ಹೌಸ್‌ನಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, 150 ಪುಟಗಳ ಪುಸ್ತಕದಲ್ಲಿ ಜಿಲ್ಲೆಯ ಸಾಹಿತ್ಯ, ಸಂಗೀತ, ಜೀವನ ಶೈಲಿ, ಆರ್ಥಿಕ, ಧಾರ್ಮಿಕ ಮಾಹಿತಿಯೊಂದಿಗೆ ಪ್ರವಾಸಿ ಕ್ಷೇತ್ರಗಳ ಬಗ್ಗೆ ಮಾಹಿತಿಯಿದೆ. ಸಾವಿರಾರು ಪುಟಗಳ ಪುಸ್ತಕ ನೀಡುವ ಜಿಲ್ಲೆಯ ಪರಿಚಯವನ್ನು ಈ ಪುಸ್ತಕ ನೀಡಲಿದೆ.

ಬಯಲು ಸೀಮೆ ಹಾಗೂ ಮಲೆನಾಡಿನ ಪರಿಚಯ ಇಲ್ಲಿದೆ ಎಂದು ಹೇಳಿದರು. ಪ್ರಸುತ ಇಂಗ್ಲಿಷ್‌ ಭಾಷೆಯಲ್ಲಿ ಪುಸ್ತಕ ಹೊರತಂದಿದ್ದು, ಶೀಘ್ರದಲ್ಲಿ ಕನ್ನಡ ಭಾಷೆಯಲ್ಲೂ ದೊರೆಯಲಿದೆ. ಫೆಬ್ರವರಿ ತಿಂಗಳಲ್ಲಿ ನಗರದಲ್ಲಿ ನಡೆದ ಹೂಡಿಕೆದಾರರ ಸಮಾವೇಶ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆಯಾಗಿದ್ದರೆ ಹೊರಗಡೆಯಿಂದ ಆಗಮಿಸಿದವರಿಗೆ ಜಿಲ್ಲೆಯ ಪ್ರಾಮುಖ್ಯತೆ ಕುರಿತು ಮಾಹಿತಿ ದೊರೆಯುತ್ತಿತ್ತು. ಪ್ರತಿಯೊಂದು ಮಾಹಿತಿ ಹಾಗೂ ಛಾಯಾಚಿತ್ರಗಳು ಬಹು ಆಕರ್ಷಣೀಯವಾಗಿವೆ. ಈ ಪುಸ್ತಕಗಳನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಇರಿಸಲಾಗುವುದು ಎಂದರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ಜಿಲ್ಲೆಯ ಸಮಗ್ರ ಚಿತ್ರಣ ಪುಸ್ತಕದ ಮೂಲಕ ಕಟ್ಟಿಕೊಡಬೇಕು ಎನ್ನುವ ಕಾರಣದಿಂದ ಪ್ರವಾಸಿಗರ ಅನುಕೂಲಕ್ಕಾಗಿ ಪುಸ್ತಕ ತಯಾರಿಸಲಾಗಿದೆ.

ಜಿಲ್ಲೆಯ ಹಿರಿಯ ಸಾಹಿತಿ, ಲೇಖಕರ ಮಾರ್ಗದರ್ಶನ ಹಾಗೂ ಸಲಹೆ ಪಡೆಯಲಾಗಿದೆ. ಒಂದು ವರ್ಷದ ಫಲವಾಗಿ ಈ ಪುಸ್ತಕ ಹೊರಬರಲು ಸಾಧ್ಯವಾಗಿದೆ. ಪುಸ್ತಕದ ಪ್ರತಿಯೊಂದು ಕಾರ್ಯವನ್ನು ಟೆಂಡರ್‌ ಮೂಲಕವೇ ಮಾಡಲಾಗಿದೆ ಎಂದು ಹೇಳಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಎಂ.ಡಿ. ಶಕೀಲ್‌ ಅಹ್ಮದ್‌, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಸಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next