ಅಮೆರಿಕ : ಟಿಕ್ ಟಾಕ್ ನಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಅಮೆರಿಕದ 18 ವಯಸ್ಸಿನ ಡಜಾರಿಯಾ ಕ್ವಿಂಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಿನ್ನ-ವಿಭಿನ್ನ ವಿಡಿಯೋ ಪೋಸ್ಟ್ ಮಾಡಿ, ಲಕ್ಷಾಂತರ ಜನ ಫ್ಯಾನ್ ಹೊಂದಿ ಟಿಕ್ ಟಾಕ್ ಸ್ಟಾರ ಪಟ್ಟ ಪಡೆದಿದ್ದ ಕ್ವಿಂಟ್ ಸಾವು ಆಕೆಯ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.
ಆತ್ಮಹತ್ಯೆಗೆ ಮುನ್ನ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಕ್ವಿಂಟ್, ಸ್ವಾರಿ, ನನ್ನಿಂದ ನಿಮಗೆ ಕಿರಿಕಿರಿಯಾಗುತ್ತಿದೆ ಅಲ್ಲವೆ ? ಇದು ನನ್ನ ಕೊನೆಯ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಕ್ವಿಂಟ್ ಸಾಯೋ ಮುನ್ನ ಹಂಚಿಕೊಂಡಿರುವ ವಿಡಿಯೋದಲ್ಲಿ ಖುಷಿ ಖುಷಿಯಾಗಿ ಹಾಡು ಹೇಳಿದ್ದಾರೆ, ಡಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ :ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ರ ಮನಗೆದ್ದ ಕಬ್ಬಿನ ಗದ್ದೆ ಡ್ಯಾನ್ಸ್
ಇನ್ಸ್ಟಾ ಪೋಸ್ಟ್ ಬಳಿಕ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾವಿನ ಹಾದಿ ತುಳಿದ ತಮ್ಮ ಮಗಳ ಬಗ್ಗೆ ಆಕೆಯ ತಂದೆ-ತಾಯಿ ಕಂಬಿನಿ ಮಿಡಿದಿದ್ದಾರೆ. ಫೇಸ್ ಬುಕ್ ನಲ್ಲಿ ಮಗಳ ಸಾವಿನ ಸುದ್ದಿ ಖಚಿತ ಪಡಿಸಿದ್ದಾರೆ.
ಇನ್ನು ಕ್ವಿಂಟ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಟಿಕ್ ಟಾಕ್ ಬ್ಯಾನ್ ಆಗಿದ್ದರಿಂದ ಆಕೆ ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದೆ.