Advertisement
ಇಲ್ಲಿ ಯಾವುದಕ್ಕೆ ಕತೆ ಇಲ್ಲ, ಯಾವುದಕ್ಕೆ ಇತಿಹಾಸ ಇಲ್ಲ ಹೇಳಿ? ಚಳಿಗಾಲದ ಆರಂಭದ ಅಕ್ಟೋಬರ್ ತಿಂಗಳ ಕೊನೆಯ ಆದಿತ್ಯವಾರ ಹೀಗೆ ಸಮಯವನ್ನು ಹಿಂದಿಡುವ ಮೊದಲು ಅಂದರೆ ಈ ಬೇಸಿಗೆಯ ಶುರು ಶುರುವಿನ ತಿಂಗಳಾದ ಮಾರ್ಚ್ ನ ಕೊನೆಯ ಆದಿತ್ಯವಾರ, ಸಮಯವನ್ನು ಒಂದು ಗಂಟೆ ಮುಂದಿಟ್ಟಿರುತ್ತಾರೆ. ವರ್ಷದಲ್ಲಿ ಹೀಗೆ ಎರಡು ಬಾರಿ, ಗಂಟೆಯನ್ನು ಮೊದಲು ಮುಂದಿಡುವುದು ಮತ್ತೆ ಹಿಂದಿಡುವುದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡ ಒಂದು ಸಿದ್ಧಾಂತ. ಕರಾರುವಕ್ಕಾಗಿ ಹೇಳುವುದಾದರೆ 1916ರಿಂದ ಬ್ರಿಟನ್‌ನಲ್ಲಿ ನಡೆದು ಬಂದ ಪದ್ಧತಿ. ಮುಂದಿಟ್ಟದ್ದಕ್ಕೆ ಹಿಂದಿಡುವುದೋ ಅಥವಾ ಹಿಂದಿಟ್ಟದ್ದಕ್ಕೆ ಮುಂದಿಡು ವುದೋ ಎನ್ನುವುದನ್ನು ತಿಳಿಯುವುದು ಮೊಟ್ಟೆಯಿಂದ ಮರಿಯೋ ಮರಿಯಿಂದ ಮೊಟ್ಟೆಯೋ ಎನ್ನುವಷ್ಟು ಕ್ಲಿಷ್ಟ ಅಲ್ಲ.
Related Articles
Advertisement
ಅದು ಮೊದಲ ಮಹಾಯುದ್ಧ ನಡೆಯುತ್ತಿದ್ದ ಕಾಲ. ಬ್ರಿಟನ್ ಮತ್ತು ಜರ್ಮನಿಗಳು ತೀವ್ರ ಯುದ್ಧದಲ್ಲಿ ನಿರತವಾಗಿದ್ದ ಸಮಯ. ಎರಡೂ ದೇಶಗಳು ವಿಲಿಯಮ…ನ ಸಲಹೆಯಂತೆ ಬೇಸಿಗೆಯಲ್ಲಿ ಕೃತಕವಾಗಿ ಸಮಯ ಮುಂದಿಡುವ ಯೋಜನೆ ವಾಡಿಕೆಯಲ್ಲಿ ಬಂದಿತು. ಸೂರ್ಯ ಮುಳುಗುವ ಹೊತ್ತಿಗೆ ಜನರು ಮಲಗುವ ಸಮಯ. ಆದ್ದರಿಂದ ಕತ್ತಲಾದ ಮೇಲೆ ಬಳಸುವ ವಿದ್ಯುತ್ ಅಥವಾ ಇಂಧನ ಮೂಲದ ಬೆಳಕುಗಳನ್ನು ಬಳಸುವುದು ಕಡಿಮೆ ಆಯಿತು. ದೇಶದ ಸಚಿವಾಲಯಗಳು ಜನಸಾಮಾನ್ಯರಿಗೆ ಸಮಯವನ್ನು ಬೇಸಿಗೆಯಲ್ಲಿ ಯಾಕೆ ಮುಂದಿಡಬೇಕು ಎಂದು ತಿಳಿಸಿಹೇಳುವ ಕರಪತ್ರಗಳನ್ನು ಹಂಚಿದರು. ಹಗಲು ಬೆಳಕಿನ ಉಳಿತಾಯ ಕಾನೂನಾಯಿತು; ಬೇಸಿಗೆಯ ಆರಂಭಕ್ಕೆ ಗಂಟೆ ಮುಂದಿಡುವುದು, ಚಳಿಗಾಲದ ಆರಂಭಕ್ಕೆ ಒಂದು ತಾಸು ಹಿಂದಿಡುವುದು ಚಾಚೂತಪ್ಪದೆ ಪಾಲನೆಯಾಯಿತು.
1906ರಲ್ಲಿ ಬ್ರಿಟನ್‌ನ ವಿಲಿಯಂ ವಿÇÉೆಟ… ತನ್ನ ಕಲ್ಪನೆಯನ್ನು ಜನರಿಗೆ ತಿಳಿಸುವ ಮೊದಲೇ, 1784ರಲ್ಲಿ ಅಮೆರಿಕದ ಬೆಂಜಮಿನ್ ಫ್ರಾಂಕ್ಲಿನ್ ಬೇಸಿಗೆಯಲ್ಲಿ ಸಮಯ ಮುಂದಿಟ್ಟಿದ್ದರಿಂದ ಆಗುವ ಆರ್ಥಿಕ ಲಾಭದ ಕುರಿತು ಪ್ರಬಂಧ ಬರೆದಿದ್ದ. ಅಂದು ಜನಪ್ರಿಯವಾಗಿರದ ಫ್ರಾಂಕ್ಲಿನ್‌ನ ಕಲ್ಪನೆ ಮುಂದೆ ಯುರೋಪ್‌ನ ದೇಶಗಳು 1916ರಲ್ಲಿ ಹಗಲು ಬೆಳಕಿನ ಉಳಿತಾಯವನ್ನು ಕಾನೂನಾಗಿ ಅನುಸರಿಸಿದ ಮೇಲೆ ಅಮೆರಿಕದಲ್ಲಿ ಕೂಡ ಅನುಷ್ಠಾನಕ್ಕೆ ಬಂದಿತು.
ಶತಮಾನದ ಹಿಂದೆ ಆರಂಭಗೊಂಡ ಬೇಸಿಗೆಯ ಆರಂಭಕ್ಕೆ ಸಮಯ ಮುಂದಿಡುವ, ಚಳಿಗಾಲದ ಆರಂಭಕ್ಕೆ ಸಮಯ ಹಿಂದಿಡುವ ಪದ್ಧತಿ ಇಂದಿಗೂ ಮುಂದುವರಿದು, ಇವತ್ತು ನಾವು ಸಮಯವನ್ನು ಒಂದು ತಾಸು ಹಿಂದಿಟ್ಟಿದ್ದೇವೆ. ಈ ಕ್ರಮ ಶುರು ಆದಾಗಿನಿಂದ ಇಲ್ಲಿಯವರೆಗೂ ಏಕಪಕ್ಷೀಯವಾಗಿ ಜನಸಾಮಾನ್ಯರ, ವಿಜ್ಞಾನಿಗಳ, ಪಂಡಿತರ ಪೂರ್ತಿ ಅನುಮೋದನೆಯಿಂದಲೇ ನಡೆಯುತ್ತಿದೆ ಎಂದಲ್ಲ , ಹಗಲು ಬೆಳಕಿನ ಉಳಿತಾಯ ನಿಜವಾಗಿಯೂ ಉಳಿತಾಯ ಹೌದೋ ಅಲ್ಲವೋ ಎಂಬ ಬಗ್ಗೆ ಜಿಜ್ಞಾಸೆ ಇದೆ, ಸಂದೇಹ ಇದೆ. ಈ ಕಲ್ಪನೆಯಿಂದ ನಿಜವಾಗಿ ಎಷ್ಟು ವಿದ್ಯುತ್ ಉಳಿಯಿತು, ಎಷ್ಟು ಇಂಧನ ಉಳಿಯಿತು ಎಂದು ಸರಿಯಾಗಿ ಲೆಕ್ಕ ಇಟ್ಟವರಿಲ್ಲ ಎನ್ನುತ್ತಾರೆ. ಆದರೆ ವಿಲಿಯಂ ವಿÇÉೆಟ…ನಂತಹ ಒಬ್ಬ ಕಟ್ಟಡ ಕಟ್ಟುವ ಸಾಮಾನ್ಯನಿಂದ ಹಿಡಿದು ವಿನ್ಸrನ್ ಚರ್ಚಿಲ…ನಂತಹ ಪ್ರಧಾನಿಯವರೆಗೆ ಈ day light saving ಅನ್ನು ಬೆಂಬಲಿಸಿದವರಿ¨ªಾರೆ. ಮತ್ತೆ ಬೆಂಬಲಿಸಿದವರಲ್ಲಿ ಹೆಚ್ಚು ಜನ ಪಟ್ಟಣದಲ್ಲಿರುವವರು, ಕ್ರೀಡಾಪಟುಗಳು ಅಥವಾ ಬೇಸಿಗೆಯಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಆಸಕ್ತರು. ಇನ್ನು ಇಲ್ಲಿನ ಹೆಚ್ಚಿನ ರೈತರು, ಗಡಿಯಾರ ನೋಡದ, ಸೂರ್ಯೋದಯ, ಸೂರ್ಯಾಸ್ತಕ್ಕೆ ಹೊಂದಿಕೊಂಡೇ ಬದುಕುವ ಪ್ರಾಣಿಗಳನ್ನು ಸಾಕಿಕೊಂಡ ಕೃಷಿಕರು ಮತ್ತು ಆರೋಗ್ಯ ಶಾಸ್ತ್ರಜ್ಞರು ಈ ಕಲ್ಪನೆಯನ್ನು ವಿರೋಧಿಸುತ್ತಲೇ ಬಂದಿ¨ªಾರೆ; ವರ್ಷಕ್ಕೆರಡು ಬಾರಿ ನಮ್ಮ ದೇಹದ, ಮನಸ್ಸಿನ ಅಥವಾ ನಮ್ಮೊಳಗಿನ ಜೈವಿಕ ಗಂಟೆಯನ್ನು ಹೀಗೆ ಬದಲಾಯಿಸುವುದು ಸರಿಯಲ್ಲ ಎಂದೂ ವಾದಿಸುತ್ತಾರೆ.
ಗಡಿಯಾರದ ಮುಳ್ಳನ್ನು ನಾವು ಸುಲಭವಾಗಿ ತಿರುಗಿಸಿದರೂ ದೇಹದೊಳಗಿನ ಜೈವಿಕ ಗಂಟೆ ಈ ಬದಲಾವಣೆಗೆ ಒಗ್ಗಿಕೊಳ್ಳಲು ಸ್ವಲ್ಪಪರದಾಡುತ್ತದೆ. ಇನ್ನು ಇಂಗ್ಲೆಂಡ್‌ನ ಮಹಾರಾಣಿಯ ಅರಮನೆಗಳಲ್ಲಿ ಇರುವ ಹಳೆ ಕಾಲದ ಒಂದು ಸಾವಿರ ಗಡಿಯಾರಗಳ ಮುಳ್ಳುಗಳನ್ನು ತಿರುಗಿಸಿ ಹಿಂದೋ ಮುಂದೋ ಇಡುವುದು ಬರೋಬ್ಬರಿ ಐವತ್ತು ತಾಸುಗಳ ಕೆಲಸವಂತೆ! ಅರಮನೆಯಲ್ಲಿ ಈ ಕೆಲಸ ಮಾಡುವವರಿಗೆ ಇದು ಖುಷಿಯೋ ಹೆಮ್ಮೆಯೋ ರಗಳೆಯೋ ಗೊತ್ತಿಲ್ಲ, ಬಿಡಿ. ಹಗಲು ಬೆಳಕಿನ ಉಳಿತಾಯ ಒಳ್ಳೆಯದೋ ಕೆಟ್ಟ¨ªೋ ತಿಳಿಯುವುದು ಕಷ್ಟವೇ ಆದರೂ ಪಾಲಿಸಲೇಬೇಕಾದ ಒಂದು ಕ್ರಮ, ಕಾನೂನಂತೂ ಹೌದು. ಮತ್ತೆ ಇವತ್ತು ಬ್ರಿಟನ್ನಿನ ಸಮಯ ಒಂದು ತಾಸು ಹಿಂದೆ ಹೋದ್ದರಿಂದ ನಿದ್ರೆಯನ್ನು ಇಷ್ಟ ಪಡುವವರಿಗೆಲ್ಲ ಒಂದು ತಾಸು ಹೆಚ್ಚು ಮಲಗಲು ದೊರೆತದ್ದೂ ಹೌದು; ಇನ್ನು ಇವರ ಬೆಳಕಿನ ಉಳಿತಾಯ ಲಾಭವೋ ನಷ್ಟವೋ ಎಂದು ಅರಿಯಬೇಕಿದ್ದರೆ ವರ್ಷದÇÉೊಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ ಹೋಗುವ ಸಮಯವನ್ನೇ ಕೇಳಬೇಕು.
– ಯೋಗೀಂದ್ರ ಮರವಂತೆ, ಬ್ರಿಸ್ಟಲ್, ಇಂಗ್ಲೆಂಡ್