Advertisement

ಸರಕಾರದ ತಾರತಮ್ಯ ನೀತಿ : ದಯಾಮರಣ ಕೋರಿ ನಿವೃತ್ತ ಶಿಕ್ಷಕನಿಂದ ರಾಷ್ಟ್ರಪತಿಗೆ ಪತ್ರ

11:53 AM Sep 07, 2020 | sudhir |

ರಾಯಚೂರು: ಸರಕಾರದ ತಾರತಮ್ಯ ನೀತಿಗಳಿಂದ ನೊಂದ ಅನುದಾನಿತ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

Advertisement

ಇಲ್ಲಿನ ಸರಕಾರಿ ನೌಕರರ ಗೃಹ ನಿರ್ಮಾಣ ಮಂಡಳಿ ಸಹಕಾರ ಸಂಘದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ಸಂಗಯ್ಯಸ್ವಾಮಿ ಸೊಪ್ಪಿಮಠ ದಯಾಮರಣ ಕೋರಿದವರು. 2006ರ ಬಳಿಕ ಸರಕಾರದ ಅನುದಾನಕ್ಕೆ ಒಳಪಟ್ಟ ಶಾಲೆಗಳ ಶಿಕ್ಷಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಿವೃತ್ತಿಯಾಗಿ ವರ್ಷ ಕಳೆದರೂ ಅನುದಾನಿತ ಶಾಲೆಗಳ ಶಿಕ್ಷಕರ ಗಳಿಕೆ ರಜೆಯನ್ನು ನಗದೀಕರಿಸಲು ಆಗುತ್ತಿಲ್ಲ. ಆದರೆ, ಸರಕಾರಿ ಶಾಲೆಗಳ ಶಿಕ್ಷಕರು ಕೇವಲ 10 ದಿನಗಳೊಳಗೆ ಗಳಿಕೆ ರಜೆಯನ್ನು ನಗದೀಕರಿಸಿಕೊಂಡಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ್‌ ಅವರಿಗೆ ಜೂ. 14, 2020ರಂದು ಪತ್ರ ಬರೆದಿದ್ದು, ಸಮಸ್ಯೆಯನ್ನು ಪರಿಹರಿಸುವ ಭರವಸೆ ಸಚಿವರಿಂದ ಸಿಕ್ಕಿತ್ತು. ಆದರೆ, ಈವರೆಗೂ ಸ್ಪಂದಿಸಿಲ್ಲವಾದ್ದರಿಂದ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ.

ರೈತನಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ
ಮುಳಗುಂದ: ಸಮೀಪದ ಬಸಾಪುರ ಗ್ರಾಮದ ಸುರೇಶ ಆದರಹಳ್ಳಿ ಎಂಬವರು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ತನಗೆ ಹಾಗೂ ತನ್ನ ಕುಟುಂಬಕ್ಕೆ ಪ. ಪಂ. ವತಿಯಿಂದ ನಿವೇಶನ ಪ್ರಮಾಣ ಪತ್ರ ನೀಡದಿರುವುದರಿಂದ ತಾನು ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸ್ಥಳಕ್ಕೆ ಪೊಲೀಸರು ಹಾಗೂ ಪ.ಪಂ. ಸಿಬಂದಿ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next