Advertisement

ಎಟಿಎಸ್‌ಗೆ ಕನ್ನಡಿಗ ದಯಾ ನಾಯಕ್‌

10:38 PM Sep 24, 2019 | Team Udayavani |

ಕಾರ್ಕಳ: ಮಹಾರಾಷ್ಟ್ರದ ಖಾರ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮೂಲದ ದಯಾ ನಾಯಕ್‌ ಅವರು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳಕ್ಕೆ (ಎಟಿಎಸ್‌) ಬಡ್ತಿ ಹೊಂದಿದ್ದಾರೆ. ಈ ಮೂಲಕ ಮುಂಬಯಿ ಎಟಿಎಸ್‌ ಘಟಕಕ್ಕೆ ಬಡ್ತಿ ಹೊಂದಿದ ಹಿರಿಯ ತುಳು-ಕನ್ನಡಿಗ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Advertisement

ತೊಂಬತ್ತರ ದಶಕದಲ್ಲಿ ಮುಂಬಯಿಯಲ್ಲಿ ಭೂಗತ ಪಾತಕಿಗಳ ಹಾವಳಿ ಮಿತಿಮೀರಿದ್ದಾಗ ಪೊಲೀಸ್‌ ಇಲಾಖೆಗೆ ಸೇರಿದ ದಯಾ ನಾಯಕ್‌ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 80ಕ್ಕೂ ಅಧಿಕ ಭೂಗತ ಪಾತಕಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ  “ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌’ ಎಂದೇ ಪ್ರಸಿದ್ಧರಾಗಿದ್ದರು. ಕಾರ್ಯನಿರತರಾಗಿದ್ದ ಅವರಿಗೆ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರ ಜೀವನ ಸಾಧನೆಗಳ ಮೇಲೆ ಬಾಲಿವುಡ್‌ನ‌ಲ್ಲಿ ಹಲವು ಸಿನೆಮಾಗಳು ಮೂಡಿಬಂದಿವೆ.

ನನ್ನ ಜೀವನದ ಬಹುಕಾಲದ ಕನಸೊಂದು ಇಂದು ನನಸಾಗಿದೆ. ಪ್ರಾಮಾಣಿಕತೆ, ಶ್ರದ್ಧೆ, ಪರಿಶ್ರಮ, ಕರ್ತವ್ಯ ನಿಷ್ಠೆ, ಸ್ನೇಹ ಪರತೆ ಇಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎನ್ನಲು ಸಂತೋಷವಾಗುತ್ತಿದೆ. ಮುಂಬಯಿಯನ್ನು ಅಪರಾಧ ಮುಕ್ತಗೊಳಿಸುವಲ್ಲಿ ನನ್ನ ಹೋರಾಟ ಮುಂದುವರಿಯಲಿದೆ.
-ದಯಾ ನಾಯಕ್‌, ಪೊಲೀಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next