Advertisement

ಡೇ-ನೈಟ್‌ ಪಂದ್ಯಕ್ಕೆ “ಎಸ್‌ಜಿ’ಪಿಂಕ್‌ ಬಾಲ್‌

10:00 AM Nov 01, 2019 | Sriram |

ಹೊಸದಿಲ್ಲಿ: ಕೋಲ್ಕತಾದಲ್ಲಿ ನಡೆಯಲಿರುವ ಭಾರತ- ಬಾಂಗ್ಲಾ ನಡುವಿನ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಎಸ್‌ಜಿ ಕಂಪೆನಿಯ 72 ಗುಲಾಲಿ ಚೆಂಡುಗಳನ್ನು ಖರೀದಿಸಲು ಬಿಸಿಸಿಐ ನಿರ್ಧರಿಸಿದೆ.

Advertisement

ಆದರೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಈ ವರೆಗೆ ಎಸ್‌ಜಿ ಕಂಪೆನಿಯ ಪಿಂಕ್‌ ಬಾಲ್‌ಗ‌ಳನ್ನು ಬಳಸಿಲ್ಲ. ಕಳೆದ 3 ಋತುಗಳ ದುಲೀಪ್‌ ಟ್ರೋಫಿ ಪಂದ್ಯಾವಳಿಯ ವೇಳೆ ಕೂಕಾಬುರ ಕಂಪೆನಿಯ ಗುಲಾಲಿ ಚೆಂಡುಗಳನ್ನು ಬಳಸಲಾಗಿತ್ತು. “ಬಿಸಿಸಿಐ 6 ಡಜನ್‌ ಪಿಂಕ್‌ ಬಾಲ್‌ಗ‌ಳಿಗೆ ಆದೇಶಿಸಿದೆ.

ಮುಂದಿನ ವಾರ ಇದನ್ನು ಪೂರೈಸಲಾಗುವುದು. ದ.ಆಫ್ರಿಕಾ ಸರಣಿ ವೇಳೆ ನಮ್ಮ ಕಂಪೆನಿಯ ಎಸ್‌ಜಿ ಟೆಸ್ಟ್‌ ಕೆಂಪು ಚೆಂಡುಗಳನ್ನು ಬಳಸಲಾಗಿತ್ತು. ಇದರಲ್ಲೇ ಇನ್ನಷ್ಟು ಸುಧಾರಣೆಯೊಂದಿಗೆ ಎಸ್‌ಜಿ ಪಿಂಕ್‌ ಬಾಲ್‌ಗ‌ಳನ್ನು ತಯಾರಿಸಲಾಗುವುದು’ ಎಂದು ಕಂಪೆನಿಯ ಎಂಡಿ ಪರಸ್‌ ಆನಂದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next