Advertisement

ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ ಸೌಲಭ್ಯ

11:11 AM Mar 10, 2017 | Harsha Rao |

ಚಿತ್ರದುರ್ಗ: ರಾಜ್ಯದ ಬರಪೀಡಿತ ಪ್ರದೇಶಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ
ಸರ್ವೋತ್ಛ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ರಾಜ್ಯದ 30 ಜಿಲ್ಲೆಗಳ 160 ತಾಲೂಕುಗಳಲ್ಲಿ ತೀವ್ರ ಬರವಿರುವ ಕಾರಣ ಜನರು ಗುಳೆ ಹೋಗುವುದನ್ನು ತಪ್ಪಿಸುವ ಭಾಗವಾಗಿ ಈ ಕ್ರಮವನ್ನು ಜರುಗಿಸಲಾಗಿದೆ.

Advertisement

ಏ.11 ರಿಂದ ಮೇ.28ರವರೆಗೆ ಇರುವ ಬೇಸಿಗೆ ರಜೆಯ ಅವಧಿಯಲ್ಲಿ ಬಿಸಿಯೂಟ ನೀಡುವಂತೆ ಮಾ.7ರಂದು ಸುತೋ¤ಲೆ ಹೊರಡಿಸಿ ಆದೇಶಿಸಿದೆ. ಬರಪೀಡಿತ ತಾಲೂಕುಗಳ ಜನರು ಗುಳೆ ಹೋಗದಂತೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ಶಾಲಾ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ
ನೋಡಿಕೊಳ್ಳಲು ಈ ಕ್ರಮ ಕೈಗೊಂಡಿದೆ. ಮಧ್ಯಾಹ್ನದ ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯ ಮಾಹಿತಿಯ ಸಂದೇಶವನ್ನು ಪ್ರತಿ ನಿತ್ಯ ಟೋಲ್‌ μÅà ಸಂಖ್ಯೆ 15544ರ ಮೂಲಕ ಕಳುಹಿಸಬೇಕು. ಬಿಸಿಯೂಟ ಮಾಡುವ ಮಕ್ಕಳ
ಮಾಹಿತಿಯನ್ನು ಕಡ್ಡಾಯವಾಗಿ ಎಂಐಎಸ್‌ ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಸೂಚಿಸಲಾಗಿದೆ. ಪ್ರತಿ ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚಿನ ಶಾಲೆಗಳಿದ್ದರೆ ಯಾವ ಶಾಲೆಯಲ್ಲಿ ಹೆಚ್ಚಿನ ಮಕ್ಕಳಿರುತ್ತಾರೋ ಅಲ್ಲಿಯೇ
ಬಿಸಿಯೂಟ ನೀಡಿ ಹಾಜರಾತಿ ಪಡೆಯುವಂತೆ ಸೂಚಿಸಲಾಗಿದೆ.

ಮಕ್ಕಳ ಸಂಖ್ಯೆಗನುಗುಣವಾಗಿ ಮುಖ್ಯ ಶಿಕ್ಷಕರು ಅಡುಗೆ ತಯಾರಿಸುವವರನ್ನು ಕೆಲಸಕ್ಕೆ ಪಡೆದು, ಅವರು ಕೆಲಸ ಮಾಡಿದ ದಿನಗಳಿಗೆ ಮಾತ್ರ ಸಂಭಾವನೆಯನ್ನು ಅಡುಗೆ ಸಿಬ್ಬಂದಿ ಖಾತೆಗೆ ರವಾನಿಸಬೇಕೆಂದು ಸೂಚಿಸಲಾಗಿದೆ.

ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಬೇಡಿಕೆ, ಸಿಬ್ಬಂದಿ ವೇತನ, ನಿರ್ವಹಣಾ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಪಟ್ಟಿ ನೀಡಬೇಕಾಗುತ್ತದೆ. ಬೇಸಿಗೆ ಮುಗಿಯುವವರೆಗೆ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸಲು ಸರ್ಕಾರ ನಿರ್ದೇಶನ ನೀಡಿದೆ.

ಬಿಸಿಯೂಟದ ಮೆನು ಇದು: ಪ್ರತಿ ದಿನ ಶಾಲಾ ಮಕ್ಕಳಿಗೆ ಚಿತ್ರಾನ್ನ, ಪುಳಿಯೋಗರೆ, ಉಪ್ಪಿಟ್ಟು, ಮೊಸರನ್ನ, ವೆಜಿಟಬಲ್‌ ಪಲಾವ್‌, ಬಾಳೆಹಣ್ಣು ನೀಡುವಂತೆ ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮುಗಿದ ಬಳಿಕ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಬರ ಎದುರಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಈ
ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿಯೂಟದ ಹೊಣೆಯನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾರು ವಹಿಸಲಿದ್ದು, ಶಿಕ್ಷಕರ ಹಾಜರಾತಿ, ಬಿಸಿಯೂಟದ ಉಸ್ತುವಾರಿ ಕಡ್ಡಾಯ ಮಾಡಲಾಗಿದೆ. ಗೈರು ಹಾಜರಿಗೆ ಅವಕಾಶವಿಲ್ಲ. ಒಂದು ವೇಳೆ ಯಾರಾದರೂ ಗೈರುಹಾಜರಾದರೆ ಅಂತಹ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next