Advertisement

ನಾಳೆಯಿಂದ ನಿತ್ಯವಚನೋತ್ಸವ

11:54 AM Jul 23, 2017 | Team Udayavani |

ಧಾರವಾಡ: ಬಸವ ಕೇಂದ್ರ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ನಿತ್ಯ ವಚನೋತ್ಸವ ಜು. 24ರಿಂದ ಆರಂಭಗೊಳ್ಳಲಿದ್ದು, ನಗರದ 15 ಬಡಾವಣೆಯಲ್ಲಿ ಆ. 20ರ ವರೆಗೆ ನಡೆಯಲಿದೆ ಎಂದು ಸಾಹಿತಿ ಡಾ| ವೀರಣ್ಣ ರಾಜೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  

Advertisement

24ರಂದು ಸಂಜೆ 5:00 ಗಂಟೆಗೆ ಮುರುಘಾಮಠದಲ್ಲಿ ನಿತ್ಯ ವಚನೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಚಾಲನೆ ನೀಡಲಿದ್ದು, ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಚನ ಚಿಂತನೆಗಾಗಿ ಆಯ್ದುಕೊಂಡ ವಚನ ಪರಿಮಳ ಭಾಗ-2 ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. 

ವಚನೋತ್ಸವ ಕಾರ್ಯಕ್ರಮದಲ್ಲಿ 95 ಸಂಚಾಲಕರ ನೇತೃತ್ವದಲ್ಲಿ 600ಕ್ಕೂ ಅಧಿಕ ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ಪ್ರತಿ ರವಿವಾರ ಸಾಮೂಹಿಕ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಈ ಬಾರಿ ಮಕ್ಕಳಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. 

ಮಕ್ಕಳಿಗೆ ವಚನ ಲೇಖನ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು. ಶಾಲಾ ಮಕ್ಕಳಿಗಾಗಿ ಬಸವಾದಿ ಶರಣ-ಶರಣೆಯರ ರೂಪಕ ಪ್ರದರ್ಶನ, ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. ಗ್ರಾಮಾಂತರ ಪ್ರದೇಶದಲ್ಲಿ ಇಷ್ಟಲಿಂಗ ಧಾರಣೆ ಹಾಗೂ ಬಸವತತ್ವ ಸಂದೇಶ ಸಾರುವ ಕಾರ್ಯಕ್ರಮ ನಡೆಯಲಿದೆ.

ಬಸವ ಪಂಚಮಿ ನಿಮಿತ್ತ ಜು. 27ರಂದು ಬೆಳಗ್ಗೆ 10:00 ಗಂಟೆಗೆ ಬುದ್ಧರಕ್ಕಿತ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು, ಉಂಡಿ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಜು. 30ರಂದು ಬೆಳಗ್ಗೆ 10:00 ಗಂಟೆಗೆ ನಗರದ ಆರ್‌ಎಲ್‌ಎಸ್‌ ಶಾಲೆಯಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಬರೆಯುವ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ನಡೆಯಲಿದೆ.

Advertisement

ಅಂದು ಬೆಳಗ್ಗೆ 10:30 ಗಂಟೆಗೆ ಚರಂತಿಮಠ ಗಾರ್ಡನ್‌ನ ಶ್ರೀ ಬನಶಂಕರಿ ಭವನದಲ್ಲಿ, ನಾರಾಯಣ ಹೃದಯಾಲಯದಲ್ಲಿ ವೈದ್ಯರಿಂದ ಸಾರ್ವಜನಿಕರಿಗೆ ಹೃದಯ ತಪಾಸಣೆ, ರಕ್ತದೊತ್ತಡ, ರಕ್ತ ತಪಾಸಣೆ, ಇಸಿಜಿ ಮತ್ತು ಇಕೋ ತಪಾಸಣೆ ಶಿಬಿರ ಜರುಗಲಿದೆ ಎಂದು ವಿವರಿಸಿದರು.

ಆ. 6ರಂದು ಮಧ್ಯಾಹ್ನ 3:30 ಗಂಟೆಗೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುತ್ಛಯ ಭವನದಲ್ಲಿ 1ರಿಂದ 7ನೇ ತರಗತಿಯ ಮಕ್ಕಳಿಗಾಗಿ ಬಸವಾದಿ ಶರಣ-ಶರಣೆಯರ ರೂಪಕಗಳು, ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಜು. 30 ರೊಳಗಾಗಿ ಹೆಸರು ನೋಂದಾಯಿಸಬೇಕು.

ಆ. 7ರಂದು ಬೆಳಗ್ಗೆ 10:00 ಗಂಟೆಗೆ ಹೆಬ್ಬಳ್ಳಿ ಗ್ರಾಮದ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ಇಷ್ಟಲಿಂಗ ದೀûಾ ಕಾರ್ಯಕ್ರಮ, ಸಹಜ ಶಿವಯೋಗ ಕಾರ್ಯಕ್ರಮ ಜರುಗಲಿದೆ. ಆ. 13ರಂದು ಸಂಜೆ 5:00 ಗಂಟೆಗೆ ಜಯನಗರದಲ್ಲಿ ಶರಣ ಸಂಗಮ ನಡೆಯಲಿದ್ದು, ವಿಶೇಷ ಉಪನ್ಯಾಸ ಹಾಗೂ ಅನುಭಾವಗೋಷ್ಠಿ ಜರುಗಲಿದೆ.

ಆ. 20ರಂದು ಸಂಜೆ 4:00 ಗಂಟೆಗೆ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಚನೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎಂದರು. ಹೆಚ್ಚಿನ ಮಾಹಿತಿಗೆ ಮಲ್ಲಿಕಾರ್ಜುನ ನಡಕಟ್ಟಿ (9480323411), ಶಂಕ್ರಪ್ಪ ಕೋರಿಶೆಟ್ಟಿ(8892789392), ಸುಲೋಚನಮ್ಮ ಲಕಮನಹಳ್ಳಿ(9611685027), ಶಾರದಾ ಕುಮಾರಮಠ (9741164699) ಅವರನ್ನು ಸಂಪರ್ಕಿಸಬಹುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಶಿವಣ್ಣ ಶರಣವರ, ಮಲ್ಲಿಕಾರ್ಜುನ ನಡಕಟ್ಟಿ, ಶಿವಶರಣ ಕಲಬಶೆಟ್ಟರ, ಉಮೇಶ ಕಟಗಿ, ಶಿವಾನಂದ ಲೋಲೆನವರ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next