Advertisement

ದಾವೂದ್‌ ಸೋದರ ಸೆರೆಯಾಗುವಾಗ ಟಿವಿಯಲ್ಲಿ ಕೆಬಿಸಿ ನೋಡುತ್ತಿದ್ದ

04:52 PM Sep 19, 2017 | udayavani editorial |

ಥಾಣೆ : ಪಾಕಿಸ್ಥಾನದ ಕರಾಚಿಯಲ್ಲಿ ಅಡಗಿಕೊಂಡಿರುವ ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂ ನ ಸಹೋದರ ಇಕ್ಬಾಲ್‌ ಇಬ್ರಾಹಿಂ ಕಸ್ಕರ್‌ ನನ್ನು  ದಕ್ಷಿಣ ಮುಂಬಯಿಯ ಆತನ ಸಹೋದರಿ ಮನೆಯಲ್ಲಿ ಸೋಮವಾರ ತಡ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಆತ ಟಿವಿಯಲ್ಲಿ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಬಿರಿಯಾನಿ ಸವಿಯುತ್ತಿದ್ದ ಎಂದು ಥಾಣೆ ಪೊಲೀಸ್‌ ಕಮಿಷನರ್‌ ಪರಮಬೀರ್‌ ಸಿಂಗ್‌ ಇಂದು ಮಂಗಳವಾರ ತಿಳಿಸಿದ್ದಾರೆ.

Advertisement

ಥಾಣೆಯ ಸುಲಿಗೆ ನಿಗ್ರಹ ಪೊಲೀಸ್‌ ದಳದವರು ದಾವೂದ್‌ ಸಹೋದರ ಕಸ್ಕರ್‌ನನ್ನು ಆತನ ಸಹೋದರಿ ಹಸೀನಾ ಪಾರ್ಕರ್‌ ಳ ಮನೆಯಲ್ಲಿ ವಶಕ್ಕೆ ತೆಗೆದುಕೊಂಡು ಅನಂತರ ಬಂಧನದಲ್ಲಿ ಇರಿಸಿದ್ದರು. ಆತನನ್ನು  ಬೇಗನೆ ಕೋರ್ಟ್‌ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಂಗ್‌ ತಿಳಿಸಿದ್ದಾರೆ. 

ದಾವೂದ್‌ ಸಹೋದರ ಇಕ್ಬಾಲ್‌ ಕಸ್ಕರ್‌ ಬಿಲ್ಡರ್‌ ಒಬ್ಬರಿಂದ ನಾಲ್ಕು ಫ್ಯಾಟುಗಳು ಮತ್ತು 30 ಲಕ್ಷ ರೂ. ನಗದನ್ನು ಸುಲಿಗೆ ಮೊತ್ತವಾಗಿ ಕೇಳಿದ್ದ. ಕಸ್ಕರ್‌ನನ್ನು ತನಿಖೆಗೆ ಒಳಪಡಿಸಿದಾಗ ಆತನಿಂದ ಇನ್ನೂ ಕೆಲವು ಬಿಲ್ಡರ್‌ಗಳು ಮತ್ತು ರಾಜಕಾರಣಿಗಳ ಹೆಸರು ಬಹಿರಂಗವಾಗಿದೆ ಎಂದು ಸಿಂಗ್‌ ಹೇಳಿದರು. 

ಇಕ್ಬಾಲ್‌ ಕಸ್ಕರ್‌ ಮತ್ತು ಪಾಕಿಸ್ಥಾನದ ಕರಾಚಿಯಲ್ಲಿ ಅಡಗಿಕೊಂಡಿರುವ ದಾವೂದ್‌ ಇಬ್ರಾಹಿಂನ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ ಕಾಯಿದೆ (ಮಕೋಕಾ) ಯನ್ನು ಅನ್ವಯಿಸಬಹುದೇ ಎಂಬುದನ್ನು ಪೊಲೀಸರೀಗ ಪರಿಶೀಲಿಸುತ್ತಿದ್ದಾರೆ ಎಂದು ಸಿಂಗ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next