Advertisement

ಆಧ್ಯಾತ್ಮದತ್ತ ಮಗನ ಒಲವು, ಡಿಪ್ರೆಷನ್ ನತ್ತ ಪಾತಕಿ ದಾವೂದ್!

06:55 AM Nov 26, 2017 | Team Udayavani |

ಥಾಣೆ: ದೇಶವನ್ನೇ ತನ್ನ ದುಷ್ಕೃತ್ಯಗಳಿಂದ ನಡುಗಿಸಿದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಈಗ ಕೌಟುಂಬಿಕ ಸಮಸ್ಯೆ ಕಾಡುತ್ತಿದೆ. ತನ್ನ ಏಕೈಕ ಪುತ್ರ ಮೊಯಿನ್‌ ನವಾಜ್‌ ಮೌಲ್ವಿಯಾಗಲು ಹೊರಟಿರುವುದು ಮಾನಸಿಕ ಖನ್ನತೆಗೆ ಕಾರಣವಾಗಿದೆಯಂತೆ. ದಾವೂದ್‌ ಆಪ್ತ ಇಕ್ಬಾಲ್‌ ಕಸ್ಕರ್‌ ವಿಚಾರಣೆಯ ವೇಳೆ ಈ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕೌಟುಂಬಿಕ ಸಮಸ್ಯೆ ನಿವಾರಿಸಲಾಗದ ಅಸಹಾಯಕ ಸ್ಥಿತಿಯನ್ನು ದಾವೂದ್‌ ತಲು ಪಿದ್ದಾನೆ. ತಂದೆಯ ಕುಕೃತ್ಯದ ಬಗ್ಗೆ ಮಗನಿಗೆ ದ್ವೇಷ ಭಾವವಿದೆ. ಇಡೀ ಜಗತ್ತಿನಲ್ಲೇ ನಮ್ಮ ಕುಟುಂಬ ತಲೆತಗ್ಗಿಸುವಂತಾಗಿದೆ ಎಂದು ಮೊಯಿನ್‌ ಭಾವಿಸಿದ್ದಾನೆ. ದಾವೂದ್‌ ಅಪಾರ ಆಸ್ತಿಯ ವಾರಸುದಾರನಾಗಲೂ ಆತ ಒಪ್ಪುತ್ತಿಲ್ಲ ಎನ್ನಲಾಗಿದೆ. ದಾವೂದ್‌ ಸೋದರ ಅನೀಸ್‌ ಕಸ್ಕರ್‌ ಆರೋಗ್ಯ ಕ್ಷೀಣಿ ಸುತ್ತಿದ್ದು, ದಾವೂದ್‌ ವಹಿವಾಟುಗಳನ್ನು ನೋಡಿಕೊಳ್ಳಲು ಶಕ್ತನಾಗಿಲ್ಲ.

Advertisement

ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ವ್ಯಾಸಂಗ ಮಾಡಿರುವ ಮೊಯಿನ್‌, ಆರಂಭದಲ್ಲಿ ದಾವೂದ್‌ ವಹಿ ವಾಟುಗಳನ್ನು ನೋಡಿಕೊಳ್ಳು ತ್ತಿದ್ದ. ಆದರೆ ಕಾಲಕ್ರಮೇಣ ಧಾರ್ಮಿಕ ಚಟುವಟಿಕೆಗಳತ್ತ ಹೆಚ್ಚು ವಾಲಿದ್ದಾನೆ. ಈಗ ತಂದೆ, ಮಗನ ಮಧ್ಯೆ ಮಾತುಕತೆ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ. ಆದರೆ ತಂದೆಯ ಐಶ್ವರ್ಯಯುತ ಜೀವನವನ್ನು ತೊರೆದು ಕರಾಚಿಯಲ್ಲಿನ ಮಸಿದಿ ಯೊಂದರಲ್ಲಿ ಮೌಲ್ವಿಯಾಗಿ, ಮಸೀದಿಯ ಆಡಳಿತ ಮಂಡಳಿ ನೀಡಿದ ಸಣ್ಣ ನಿವಾಸದಲ್ಲಿ ಪತ್ನಿ ಸಾನಿಯಾ ಹಾಗೂ ಮಕ್ಕಳ ಜತೆ ವಾಸವಿದ್ದಾನೆ. ಮಸೀದಿಯಲ್ಲಿ ವಿದ್ಯಾರ್ಥಿಗಳಿಗೆ ಕುರಾನ್‌ ಬೋಧನೆ ಹಾಗೂ ಇತರ ಧಾರ್ಮಿಕ ಕಾರ್ಯಗಳಲ್ಲೇ ಮೊಯಿನ್‌ ತೊಡಗಿಸಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next