Advertisement

ದಾವೂದ್‌ನ ಆಪ್ತ ಫಾರೂಕ್‌ ಹತ್ಯೆ

12:30 AM Jan 16, 2019 | |

ಮುಂಬಯಿ: ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ತಂಡದ ಎರಡನೇ ದಾವೂದ್‌ ಎಂದೇ ಗುರುತಿಸಲ್ಪಟ್ಟಿದ್ದ ಫಾರೂಕ್‌ ದೇವಿವಾಲಾ(41)ನನ್ನು ಪಾಕಿಸ್ಥಾನದ ಕರಾಚಿಯಲ್ಲಿ ದಾವೂದ್‌ನ ಸಹಚರರೇ ಗುಂಡಿಟ್ಟು ಹತ್ಯೆ ಗೈದಿದ್ದಾರೆ. ದಾವೂದ್‌ ವಿರುದ್ಧವೇ ಸಂಚೊಂದನ್ನು ರೂಪಿಸಿದ್ದ ಹಿನ್ನೆಲೆಯಲ್ಲಿ ತಂಡದ ಮತ್ತೂಬ್ಬ ಪಾತಕಿ ಛೋಟಾ ಶಕೀಲ್‌ನ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

Advertisement

ಫಾರೂಕ್‌ ದೇವಿವಾಲಾ ಮೂಲತಃ ಮುಂಬಯಿಯ ಜೋಗೇಶ್ವರಿ ಪ್ರಾಂತ್ಯದವನು. ಹಲವಾರು ಪ್ರಕರಣಗಳಲ್ಲಿ ಈತ ಭಾರತದ ತನಿಖಾ ಸಂಸ್ಥೆಗಳಿಗೂ ಬೇಕಾಗಿದ್ದ. ಕಳೆದ ವರ್ಷ ದುಬಾೖಯಲ್ಲಿ ಈತನ ಬಂಧನವಾದ ಸುದ್ದಿ ಹೊರ ಬೀಳುತ್ತಲೇ ತಮಗೆ ಹಸ್ತಾಂತರಿಸುವಂತೆ ಭಾರತವು ದುಬಾೖ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಇದಕ್ಕೆ ಅಡ್ಡಗಾಲು ಹಾಕಿದ್ದ ಪಾಕಿಸ್ಥಾನವು ಫಾರೂಕ್‌ ತನ್ನ ದೇಶದ ಪ್ರಜೆ ಎಂದು ತಗಾದೆ ತೆಗೆದಿತ್ತು. ಆ ಸಂದರ್ಭ ಆತನನ್ನು ವಿಚಾರಣೆಗೊಳ ಪಡಿಸಿದ್ದ ಭಾರತದ ತನಿಖಾಧಿಕಾರಿಗಳ ಮುಂದೆ ದಾವೂದ್‌ನನ್ನು ಹಿಡಿದು ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ. ಈ ವಿಚಾರ ದಾವೂದ್‌ ತಂಡಕ್ಕೆ ಗೊತ್ತಾಗಿ ಶಕೀಲ್‌ ಈ ಬಗ್ಗೆ ಕೇಳಿದ್ದ ಎನ್ನಲಾಗಿದೆ. ಶಕೀಲ್‌ ಮುಂದೆ ತಪ್ಪನ್ನು ಫಾರೂಕ್‌ ಒಪ್ಪಿ ಕೊಂಡ ಬಳಿಕ ಈತನನ್ನು ಮುಗಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ ಫಾರೂಕ್‌ ಹತ್ಯೆಯ ಸುದ್ದಿಯನ್ನು ಭಾರತದ ಯಾವುದೇ ತನಿಖಾಧಿಕಾರಿಗಳು ದೃಢಪಡಿಸಿಲ್ಲ. ಉಗ್ರಗಾಮಿ ಕೃತ್ಯ ಸಹಿತ ಭಾರತದಲ್ಲಿ ಈತನ ವಿರುದ್ಧ ಹಲವಾರು ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next