Advertisement

ದಾವೂದ್‌ ಇಬ್ರಾಹಿಂ ಪಾಕ್‌ನಲ್ಲೇ ಇದ್ದಾನೆ

01:10 AM Jul 04, 2019 | mahesh |

ಲಂಡನ್‌: ಭಾರತದಲ್ಲಿ ಹಲವು ಘಾತಕ ಕೃತ್ಯಗಳಲ್ಲಿ ಭಾಗಿಯಾಗಿರುವ ಭೂತಕ ಪಾತಕಿ ದಾವೂದ್‌ ಇಬ್ರಾಹಿಂ ತನ್ನ ನೆಲದಲ್ಲಿ ಇಲ್ಲವೆಂದು ಹಲವು ಬಾರಿ ಪಾಕಿಸ್ತಾನ ಸುಳ್ಳು ಹೇಳಿದೆ. ಆತ ಅಲ್ಲಿಯೇ ಇದ್ದಾನೆ ಎನ್ನುವುದನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಪುಷ್ಟೀಕರಿಸಿದೆ. ಅಂತಾರಾಷ್ಟ್ರೀಯವಾಗಿ ಆತ ನಡೆಸುವ ಸರಣಿ ಅಪರಾಧ ಕೃತ್ಯಗಳು ಈಗ ಕರಾಚಿಯಿಂದಲೇ ನಿಯಂತ್ರಿಸಲ್ಪಡುತ್ತಿವೆ ಎಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ಗೆ ಅಮೆರಿಕದ ತನಿಖಾ ಸಂಸ್ಥೆ ವಿವರಿಸಿದೆ.

Advertisement

ಭೂಗತ ಪಾತಕಿಯ ನೇರ ಆಜ್ಞಾನುವರ್ತಿ ಜಬೀರ್‌ ಮೋತಿವಾಲನ ಗಡಿಪಾರು ವಿಚಾರಣೆ ಪ್ರಕ್ರಿಯೆ ವೇಳೆ ಈ ಅಂಶ ಪ್ರಸ್ತಾಪವಾಗಿದೆ. 1993ರಿಂದ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹೋದರ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾರೆ ಎಂದು ಎಫ್ಬಿಐ ಪರ ವಕೀಲ ಜಾನ್‌ ಹಾರ್ಡಿ ಹೇಳಿದ್ದಾರೆ. ಯುಎಇ ಮತ್ತು ಇತರ ಅಂತಾರಾಷ್ಟ್ರೀಯ ವಲಯಗಳಲ್ಲಿ ದಾವೂದ್‌ ಪರ ವಹಿವಾಟನ್ನು ಮೋತಿವಾಲನೇ ನಡೆಸುತ್ತಿದ್ದಾನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next