Advertisement
ಲಷ್ಕರ್ ಮತ್ತು ದಾವೂದ್ ಜತೆಯಾಗಿ ರೂಪಿಸುತ್ತಿರುವ ಈ ಸಂಚಿನ ಹಿಂದೆ ಪಾಕ್ ಗೂಢಚರ ಸಂಸ್ಥೆ ಐಎಸ್‌ಐ ಕೈವಾಡ ಇರುವ ಶಂಕೆಯನ್ನು ಗುಪ್ತಚರ ಮೂಲಗಳು ವ್ಯಕ್ತ ಪಡಿಸಿವೆ. ಇಸ್ಲಾಮಾಬಾದ್‌ನಲ್ಲಿರುವ ತನ್ನ ಫಾರ್ಮ್ ಹೌಸ್‌ಗೆ ಐಎಸ್‌ಐಯ ಕೆಲವು ಸದಸ್ಯರೊಂದಿಗೆ ದಾವೂದ್ ರವಿವಾರ ಬಂದು ಹೋಗಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಗುಪ್ತಚರ ಸಂಸ್ಥೆಗಳ ಅನುಮಾನ ಮತ್ತಷ್ಟು ಬಲವಾಗಿದೆ.
ಭಾರತದ ಭದ್ರತಾ ಪಡೆಗಳು ಕೋವಿಡ್-19 ಸೋಂಕಿನ ಪರಿಸ್ಥಿತಿ ನಿಭಾಯಿಸುವತ್ತ ಗಮನಹರಿಸಿರುವ ಈ ಸಂದರ್ಭದಲ್ಲಿ ಹಲವು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಐಎಸ್‌ಐಯ ಉದ್ದೇಶ. ದಾಳಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಮುದ್ರದ ಮೂಲಕ ಗುಜರಾತ್ ಯಾ ಮಹಾರಾಷ್ಟ್ರಕ್ಕೆ ಕಳುಹಿಸುವುದು ಲಷ್ಕರ್ ಮುಖಂಡರ ಯೋಜನೆ. ಲಷ್ಕರ್ ಮುಖಂಡ ಅಬ್ದುಲ್ ರೆಹಮಾನ್ ಮಕ್ಕಿ ಇತ್ತೀಚೆಗೆ ಕರಾಚಿಗೆ ಭೇಟಿ ನೀಡಿ ದಾವೂದ್‌ನನ್ನು ಭೇಟಿಯಾಗಿ ಮುಂದಿನ ನಡೆ, ಕ್ರಮಗಳ ಬಗ್ಗೆ ಚರ್ಚಿಸಿದ್ದಾನೆ ಎಂದು ತಿಳಿದುಬಂದಿದೆ. ಇದೇ ವೇಳೆ ಹಂದ್ವಾರದಲ್ಲಿ ಭಾರತೀಯ ಸೇನೆಯ ಮೇಜರ್ ಹುತಾತ್ಮರಾದ ಬಳಿಕ ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯದಿಂದ ಪಾಕಿಸ್ಥಾನವು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
Related Articles
ದಾಳಿಗೆ ಅಗತ್ಯ ಶಸ್ತ್ರಾಸ್ತ್ರ,ಸ್ಫೋಟಕಗಳನ್ನು ಲಷ್ಕರ್ ಸರಬರಾಜು ಮಾಡಲಿದ್ದು,ಭಾರತದಲ್ಲಿ ಇರುವ “ಡಿ ಕಂಪೆನಿ’ ಸದಸ್ಯರು ದಾಳಿ ನಡೆ ಯುವ ನಗರಗಳಿಗೆ ತಲುಪಿಸುವ ಜತೆಗೆ ದಾಳಿ ಕೂಡ ನಡೆಸಬೇಕು ಎಂಬುದು ಯೋಜನೆ.
Advertisement