Advertisement

ದಾವೂದ್‌ ಆಪ್ತನ ಹೊಸ ವರಸೆ

09:26 AM Nov 06, 2019 | Team Udayavani |

ಲಂಡನ್‌: ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯದಲ್ಲಿ ತನ್ನ ಗಡಿಪಾರು ಮನವಿಯ ವಿರುದ್ಧ ಹೋರಾಡುತ್ತಿರುವ ದಾವೂದ್‌ ಇಬ್ರಾಹಿಂ ಗುಂಪಿನ ಪ್ರಮುಖ ನಾಯಕ ಜಬೀರ್‌ ಮೋತಿ, ತನ್ನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡದಿರುವಂತೆ ತಾನು ಮಂಡಿಸಿರುವ ವಾದಕ್ಕೆ ಪುಷ್ಟಿ ನೀಡುವ ಪ್ರಕರಣವೊಂದನ್ನು ನ್ಯಾಯಾಲಯದ ಮುಂದಿಟ್ಟಿದ್ದಾನೆ.

Advertisement

ಇತ್ತೀಚೆಗೆ, ಅಮೆರಿಕದಲ್ಲಿ ಲೈಂಗಿಕ ಹಗರಣದವೊಂದರಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದ ಆ ದೇಶದ ಜೆಫ್ರಿ ಎಪ್ಸ್ಟೇನ್‌ ಎಂಬ ಉದ್ಯಮಿ, ತನ್ನ ಸೆಲ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ತನ್ನ ವಾದದಲ್ಲಿ ಪ್ರಸ್ತಾಪಿಸಿರುವ ಜಬೀರ್‌, ಅಮೆರಿಕದಲ್ಲಿನ ಜೈಲುಗಳ ಪರಿಸ್ಥಿತಿ ಉತ್ತಮವಾಗಿಲ್ಲ. ತನ್ನನ್ನು ಅಮೆರಿಕ ಜೈಲಿಗೆ ಕಳುಹಿಸಿದರೆ ತಾನೂ ಜೆಫ್ರಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಅಲವತ್ತುಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next