Advertisement

ಪಾಕಿಸ್ಥಾನ ನೆಲದಲ್ಲಿ ಸರಣಿ ಗೆದ್ದ ಇಂಗ್ಲೆಂಡ್‌

10:42 PM Oct 03, 2022 | Team Udayavani |

ಲಾಹೋರ್‌: ಇಂಗ್ಲೆಂಡ್‌ ತಂಡ ಪಾಕಿಸ್ಥಾನದಲ್ಲಿ ಐತಿಹಾಸಿಕ ಟಿ20 ಸರಣಿ ಜಯಿಸಿದೆ. 7ನೇ ಹಾಗೂ ನಿರ್ಣಾಯಕ ಮುಖಾಮುಖಿಯನ್ನು 67 ರನ್ನುಗಳಿಂದ ಗೆದ್ದು ಸರಣಿಯನ್ನು 4-3ರಿಂದ ತನ್ನದಾಗಿಸಿಕೊಂಡಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 209 ರನ್‌ ಪೇರಿಸಿತು. ಜವಾಬಿತ್ತ ಪಾಕಿಸ್ಥಾನ 8 ವಿಕೆಟಿಗೆ 142 ರನ್‌ ಮಾಡಿ ಶರಣಾಯಿತು.

ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ ಅಜೇಯ 78, ಹ್ಯಾರಿ ಬ್ರೂಕ್‌ ಅಜೇಯ 46, ಡಕೆಟ್‌ 30 ರನ್‌ ಮಾಡಿದರು. ಪಾಕ್‌ ಸರದಿಯಲ್ಲಿ ಹೋರಾಟ ಸಂಘಟಿಸಿದ್ದು ಶಾನ್‌ ಮಸೂದ್‌ (56) ಮಾತ್ರ. ಕ್ರಿಸ್‌ ವೋಕ್ಸ್‌ 3, ಡೇವಿಡ್‌ ವಿಲ್ಲಿ 2 ವಿಕೆಟ್‌ ಕಿತ್ತರು. ಡೇವಿಡ್‌ ಮಲಾನ್‌ ಪಂದ್ಯಶ್ರೇಷ್ಠ, ಹ್ಯಾರಿ ಬ್ರೂಕ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next