Advertisement

ಡೇವಿಸ್‌ ಕಪ್‌: ಆಡುವ ಬಳಗದಲ್ಲಿ ಪೇಸ್‌

10:17 AM Feb 26, 2020 | sudhir |

ಹೊಸದಿಲ್ಲಿ: ಹಿರಿಯ ಟೆನಿಸಿಗ ಲಿಯಾಂಡರ್‌ ಪೇಸ್‌ ಅವರನ್ನು ಡೇವಿಸ್‌ ಕಪ್‌ ಸರಣಿಗಾಗಿ ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕ್ರೊವೇಶಿಯಾ ವಿರುದ್ಧ ಅವರದೇ ಅಂಗಳದಲ್ಲಿ ಮಾ. 6-7ರಂದು ಆಡಲಾಗುವ ಪಂದ್ಯಾವಳಿಗಾಗಿ ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ ಆಯ್ಕೆ ಸಮಿತಿ (ಎಐಟಿಎ) 5 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ದಿವಿಜ್‌ ಶರಣ್‌ ಮೀಸಲು ಆಟಗಾರನಾಗಿದ್ದಾರೆ.

Advertisement

ತಂಡದ ಉಳಿದ ಸದಸ್ಯರೆಂದರೆ ಸುಮಿತ್‌ ನಾಗಲ್‌, ಪ್ರಜ್ಞೆàಶ್‌ ಗುಣೇಶ್ವರನ್‌, ರಾಮ್‌ಕುಮಾರ್‌ ರಾಮನಾಥನ್‌ (ಸಿಂಗಲ್ಸ್‌) ಮತ್ತು ರೋಹನ್‌ ಬೋಪಣ್ಣ (ಡಬಲ್ಸ್‌). ರೋಹಿತ್‌ ರಾಜ್‌ಪಾಲ್‌ “ಆಡದ ನಾಯಕ’ರಾಗಿರುತ್ತಾರೆ. ಬೋಪಣ್ಣ ಗಾಯಾಳಾದ ಕಾರಣ ಪಾಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ಸ್ಪರ್ಧೆಯಿಂದ ಹೊರಗುಳಿದಿದ್ದರು. ದಿವಿಜ್‌ ಶರಣ್‌ ಮದುವೆಯ ಸಂಭ್ರಮದಲ್ಲಿದ್ದರು.

ಎಐಟಿಎ ಅಂತಿಮ ತಂಡವನ್ನು ಮಂಗಳವಾರದ ಒಳಗಾಗಿ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ಗೆ (ಐಟಿಎಫ್) ಕಳುಹಿಸಿಕೊಡಬೇಕಿತ್ತು.

ಎರಡನೇ ಮುಖಾಮುಖೀ
24 ತಂಡಗಳ ಅರ್ಹತಾ ಸುತ್ತಿನಲ್ಲಿ ಕ್ರೊವೇಶಿಯಾ ಅಗ್ರಮಾನ್ಯ ತಂಡವಾಗಿದೆ. ಬೋರ್ನ ಕೋರಿಕ್‌, ಮರಿನ್‌ ಸಿಲಿಕ್‌ ಸ್ಟಾರ್‌ ಆಟಗಾರರಾಗಿದ್ದಾರೆ.
ಡೇವಿಸ್‌ ಕಪ್‌ನಲ್ಲಿ ಭಾರತ-ಕ್ರೊವೇಶಿಯಾ ಮುಖಾಮುಖೀ ಆಗುತ್ತಿರುವುದು ಇದು 2ನೇ ಸಲ. 1995ರ ಹೊಸದಿಲ್ಲಿ ಸ್ಪರ್ಧೆಯಲ್ಲಿ ಭಾರತ 3-2 ಅಂತರದ ಗೆಲುವು ಸಾಧಿಸಿತ್ತು. ಅಂದು ಪೇಸ್‌ ಸಿಂಗಲ್ಸ್‌ ಹಾಗೂ ಡಬಲ್ಸ್‌ ಪಂದ್ಯಗಳೆರಡರಲ್ಲೂ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next