Advertisement

ಡೇವಿಸ್‌ ಕಪ್‌: ಭಾರತ ತಂಡಕ್ಕೆ ಬಿಗಿ ಭದ್ರತೆ

02:29 AM Aug 02, 2019 | Sriram |

ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ನಡೆಯುವ ಡೇವಿಸ್‌ ಕಪ್‌ ಕೂಟದಲ್ಲಿ ಭಾರತ 55 ವರ್ಷಗಳ ಬಳಿಕ ಭಾಗವಹಿಸುತ್ತಿದ್ದು, ಪ್ರವಾಸಿ ತಂಡಕ್ಕೆ ಸಂಪೂರ್ಣ ಭದ್ರತೆ ನೀಡುವುದಾಗಿ ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ ಹೇಳಿದೆ.

Advertisement

ಪಾಕಿಸ್ಥಾನದ ಕೂಟದಲ್ಲಿ ಭಾರತ ಕೊನೆಯ ಸಲ ಭಾಗವಹಿಸಿದ್ದು 1964ರಲ್ಲಿ. ಅನಂತರದ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಭದ್ರತೆಯ ಕಾರಣ ಭಾರತ ತಂಡ ಪಾಕಿಸ್ಥಾನಕ್ಕೆ ಕಾಲಿಟ್ಟಿರಲಿಲ್ಲ. ಇದೀಗ 5 ದಶಕಗಳ ಬಳಿಕ ಭಾರತದ ಟೆನಿಸ್‌ ತಂಡವೊಂದು ಪಾಕ್‌ಗೆ ತೆರಳಿ ಆಡುತ್ತಿರುವುದು ವಿಶೇಷ.

ಕಳೆದ ವಾರವಷ್ಟೇ ಭಾರತ ಟೆನಿಸ್‌ ತಂಡದ ನಾಯಕ ಮಹೇಶ್‌ ಭೂಪತಿ ತಮಗೆ ಬಿಗಿ ಭದ್ರತೆ ನೀಡುವಂತೆ ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ಗೆ (ಎಐಟಿಎ) ಮನವಿ ಮಾಡಿದ್ದರು. ಇದೀಗ ಪಾಕಿಸ್ಥಾನವೇ ಭದ್ರತೆ ನೀಡುದಾಗಿ ಭರವಸೆ ನೀಡಿದ್ದರಿಂದ ಆಟಗಾರರಲ್ಲಿ ಧೈರ್ಯ ಮೂಡಿದೆ. ಈ ಪಂದ್ಯಾವಳಿ ಸೆ. 14, 15ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next