Advertisement

Davis Cup: ಸ್ವೀಡನ್‌ ವಿರುದ್ಧ ಭಾರತಕ್ಕೆ 6ನೇ ಸೋಲು

11:56 PM Sep 15, 2024 | Team Udayavani |

ಸ್ಟಾಕ್‌ಹೋಮ್‌ (ಸ್ವೀಡನ್‌): ಡೇವಿಸ್‌ ಕಪ್‌ ಗ್ರೂಪ್‌ ಒಂದರ ಪಂದ್ಯಾವಳಿಯಲ್ಲಿ ಭಾರತ ಆತಿಥೇಯ ಸ್ವೀಡನ್‌ಗೆ ಶರಣಾಗಿದೆ. ಇದರೊಂದಿಗೆ ಸ್ವೀಡನ್‌ ವಿರುದ್ಧ ಆಡಿದ ಎಲ್ಲ 6 ಪಂದ್ಯಗಳಲ್ಲೂ ಭಾರತ ಸೋತಂತಾಯಿತು.

Advertisement

ಶನಿವಾರದ ಎರಡೂ ಸಿಂಗಲ್ಸ್‌ ಪಂದ್ಯಗಳನ್ನು ಸೋತಿದ್ದ ಭಾರತ, ರವಿವಾರ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿತ್ತು. ಮೊದಲು ಆಡಲಾದ ಡಬಲ್ಸ್‌ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌-ಎನ್‌. ಶ್ರೀರಾಮ್‌ ಬಾಲಾಜಿ ಅವರನ್ನು ಆ್ಯಂಡ್ರೆ ಗೊರಾನ್ಸನ್‌-ಫಿಲಿಪ್‌ ಬಗೇìವಿ ಸೇರಿಕೊಂಡು 6-3, 6-4 ಅಂತರದಿಂದ ಮಣಿಸಿದರು.
ಸ್ವೀಡನ್‌ 3-0 ಲೀಡ್‌ ಪಡೆದ ಕಾರಣ ರಿವರ್ಸ್‌ ಸಿಂಗಲ್ಸ್‌ ಕೇವಲ ಔಪಚಾರಿಕವಾಗಿತ್ತು. ಇಲ್ಲಿ ನ್ಯಾಶನಲ್‌ ಚಾಂಪಿಯನ್‌ ಸಿದಾ§ರ್ಥ್ ಅವರನ್ನು ಪರೀಕ್ಷಿಸಲು ಕಣಕ್ಕಿಳಿಸಲಾಯಿತು. ಎದುರಾಳಿ ಎಲಿಯಾಸ್‌ ವೈಮರ್‌ 6-2, 6-2ರಿಂದ ಭಾರತೀಯನನ್ನು ಮಣಿಸಿದರು.

ಭಾರತವಿನ್ನು ಮುಂದಿನ ವರ್ಷ ವರ್ಲ್ಡ್ ಗ್ರೂಪ್‌ ಒಂದರಲ್ಲೇ ಉಳಿಯಲು ಪ್ಲೇ ಆಫ್ ಸುತ್ತಿನಲ್ಲಿ ಆಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next