Advertisement

ಡೇವಿಸ್‌ ಕಪ್‌ : ಭಾರತಕ್ಕೆ ನ್ಯೂಜಿಲ್ಯಾಂಡ್‌ ಸವಾಲು

03:45 AM Feb 03, 2017 | Team Udayavani |

ಪುಣೆ: ಭಾರತವು ಶುಕ್ರವಾರದಿಂದ ಆರಂಭವಾಗುವ ಡೇವಿಸ್‌ ಕಪ್‌ ಏಶ್ಯ/ಓಶಿಯಾನಿಯಾ ಬಣ ಒಂದರ ಹೋರಾಟದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಆದರೆ ಈ ಹೋರಾಟದ ಮುಖ್ಯ ಆಕರ್ಷಣೆ ಲಿಯಾಂಡರ್‌ ಪೇಸ್‌ ಆಗಿದ್ದಾರೆ. ಬಹುತೇಕ ತನ್ನ ಕೊನೆಯ ಡೇವಿಸ್‌ ಕಪ್‌ನಲ್ಲಿ ಆಡುತ್ತಿರುವ ಹಿರಿಯ ಪೇಸ್‌ ಅವರಿಗೆ ಡಬಲ್ಸ್‌ನಲ್ಲಿ ವಿಶ್ವದಾಖಲೆ ಮಾಡುವ ಸುವರ್ಣಾಶಕಾಶವೊಂದು ಲಭಿಸಿದೆ. ಈ ಅವಕಾಶದಲ್ಲಿ ಅವರು ಯಶಸ್ಸು ಸಾಧಿಸುತ್ತಾರೆಯೇ ಎಂಬುದನ್ನು ಅಭಿಮಾನಿಗಳು ಕಾತರದಿಂದ ನೋಡುತ್ತಿದ್ದಾರೆ.

Advertisement

ತನ್ನ 55ನೇ ಡೇವಿಸ್‌ ಕಪ್‌ ಹೋರಾಟದಲ್ಲಿ ಆಡುತ್ತಿರುವ 18 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಪೇಸ್‌ ಡಬಲ್ಸ್‌ನಲ್ಲಿ 42  ಪಂದ್ಯಗಳಲ್ಲಿ ಜಯಿಸಿ ಇಟಲಿಯ ನಿಕೋಲ ಪೀಟ್ರಾಂಗೆಲಿ ಜತೆ ಸಮಬಲ ಸಾಧಿಸಿದ್ದಾರೆ. ಶನಿವಾರ ನಡೆಯುವ ಡಬಲ್ಸ್‌ನಲ್ಲಿ ಒಂದು ವೇಳೆ ಪೇಸ್‌ ಗೆಲುವು ದಾಖಲಿಸಿದರೆ ವಿಶ್ವದಾಖಲೆ ಮಾಡಲಿದ್ದಾರೆ ಮತ್ತು ಡೇವಿಸ್‌ ಕಪ್‌ ಇತಿಹಾಸದ ಅತ್ಯಂತ ಯಶಸ್ವಿ ಡಬಲ್ಸ್‌ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ.

ಪೇಸ್‌ ಇದೀಗ ಕೊನೆ ಕ್ಷಣದಲ್ಲಿ ತಂಡಕ್ಕೆ ಸೇರ್ಪಡೆಯಾದ ವಿಷ್ಣುವರ್ಧನ್‌ ಜತೆ ಡಬಲ್ಸ್‌ನಲ್ಲಿ ಆಡಬೇಕಾಗಿದೆ. ಆರಂಭದಲ್ಲಿ ಆಯ್ಕೆಯಾಗಿದ್ದ ಸಾಕೇತ್‌ ಮೈನೇನಿ ಪಾದದ ಗಾಯದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ಕೈಬಿಡಲಾಗಿದೆ. ಕಳೆದ ತಿಂಗಳು ನಡೆದ ಚೆನ್ನೈ ಓಪನ್‌ ವೇಳೆ ಅವರ ಪಾದಕ್ಕೆ ಗಾಯವಾಗಿತ್ತು.

ಮೈನೇನಿ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಂಡದ ಆಟವಾಡದ ನಾಯಕ ಆನಂದ್‌ ಅಮೃತ್‌ರಾಜ್‌ ತಿಳಿಸಿದರು. ಆನಂದ್‌ ಕೂಡ ಕೊನೆಯ ಬಾರಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಪೇಸ್‌ ಮತ್ತು ರಾಷ್ಟ್ರೀಯ ಹಾರ್ಡ್‌ಕೋರ್ಟ್‌ ಚಾಂಪಿಯನ್‌ ವಿಷ್ಣುವರ್ಧನ್‌ ಅವರು ಹೋರಾಟದ ದ್ವಿತೀಯ ದಿನ ನ್ಯೂಜಿಲ್ಯಾಂಡಿನ ಆರ್ಟೆಮ್‌ ಸಿತಾಕ್‌ ಮತ್ತು ಮೈಕಲ್‌ ವೀನಸ್‌ ಅವರನ್ನು ಎದುರಿಸಲಿದ್ದಾರೆ. ಪೇಸ್‌ ಅವರು ವಿಷ್ಣುವರ್ಧನ್‌ ಜತೆಗೂಡಿ ಲಂಡನ್‌ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಆಡಿದ್ದರು.

Advertisement

ಮೂವರು ವ್ಯಕ್ತಿಗಳು ರೋಹನ್‌ ಬೋಪಣ್ಣ ಜತೆ ಮಾತನಾಡಿದ ಬಳಿಕ ವಿಷ್ಣುವರ್ಧನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕರೆಯಲಾಯಿತು. ಮೂವರು ವ್ಯಕ್ತಿಗಳು ಮಾತನಾಡಿದರು. ಏನಾಯಿತು ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ ಎಂದು ಆನಂದ್‌ ಅಮೃತ್‌ರಾಜ್‌ ತಿಳಿಸಿದರು.

ಈ ವಿಷಯದ ಬಗ್ಗೆ ಮಾತನಾಡಿದ ಪೇಸ್‌ ಬೇಕಾದರೆ ಆನು ಬೋಪಣ್ಣ ಜತೆ ಮಾತನಾಡುವೆ ಎಂದಿದ್ದರು. ಆದರೆ ಮಾತನಾಡುವುದು ಬೇಡವೆಂದು ನಾನು ತಡೆದೆ ಎಂದರು ಅಮೃತ್‌ರಾಜ್‌. ಪೇಸ್‌ ಮತ್ತು ಬೋಪಣ್ಣ ರಿಯೋ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಜತೆಯಾಗಿ ಆಡಿದ್ದರು. ಆದರೆ ಮೊದಲ ಸುತ್ತಿನಲ್ಲಿ ಸೋತಿದ್ದರು.

368ನೇ ರ್‍ಯಾಂಕಿನ ಯೂಕಿ ಭಾಂಬ್ರಿ ಅವರು ನ್ಯೂಜಿಲ್ಯಾಂಡಿನ ನಂಬರ್‌ ವನ್‌ ಆಟಗಾರ ಫಿನ್‌ ಟಿಯರ್‌ನೆà ಅವರನ್ನು ಎದುರಿಸುವ ಮೂಲಕ ಭಾರತದ ಅಭಿಯಾನ ಆರಂಭಿಸಲಿದ್ದಾರೆ. ದ್ವಿತೀಯ ಸಿಂಗಲ್ಸ್‌ ಪಂದ್ಯದಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಅವರು ಜೋಸ್‌ ಸ್ಟಾಥಮ್‌ ಅವರನ್ನು ಎದುರಿಸಲಿದ್ದಾರೆ.

ಭಾರತ ಫೇವರಿಟ್‌
ಉನ್ನತ ರ್‍ಯಾಂಕಿಂಗ್‌ ಮತ್ತು ತವರಿನಲ್ಲಿ ಆಡುವ ಲಾಭ ಪಡೆದಿರುವ ಭಾರತ ಗೆಲ್ಲುವ ಫೇವರಿಟ್‌ ತಂಡವಾಗಿದೆ. ನ್ಯೂಜಿಲ್ಯಾಂಡ್‌ ವಿರುದ್ಧ 5 ಗೆಲುವು 3 ಸೋಲಿನ ದಾಖಲೆಯನ್ನು ಭಾರತ ಹೊಂದಿದೆ. ಮೂರು ಸೋಲು 1970ರ ದಶಕದಲ್ಲಿ ನಡೆದಿದೆ. 1978ರ ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಹೋರಾಟಗಳಲ್ಲಿ ಭಾರತ ಒಮ್ಮೆಯೂ ಸೋತದ್ದಿಲ್ಲ. 1978ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಈಸ್ಟರ್ನ್ ವಲಯ ಸೆಮಿಫೈನಲ್‌ನಲ್ಲಿ ಭಾರತವು ಓನ್ನಿ ಪರುಣ್‌ ನೇತೃತ್ವದ ನ್ಯೂಜಿಲ್ಯಾಂಡ್‌ ತಡವನ್ನು 4-1 ಅಂತರದಿಂದ ಸೋಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next