Advertisement
28 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವು ಫೈನಲ್‌ನಲ್ಲಿ 9 ಬಾರಿಯ ವಿಜೇತ ಫ್ರಾನ್ಸ್ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಫ್ರಾನ್ಸ್ ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ಸರ್ಬಿಯಾ ವಿರುದ್ಧ 2-1 ಮುನ್ನಡೆ ಸಾಧಿಸಿದೆ. ನಿಕೋಲಾಸ್ ಮಾಹುಟ್ ಮತ್ತು ಫೀರ್ರ ಹ್ಯೂಗ್ಸ್ ಹೆರ್ಬರ್ಟ್ ಅವರು ಸರ್ಬಿಯಾದ ನೆನಾದ್ ಜಿಮೊಂಜಿಕ್ ಮತ್ತು ಫಿಲಿಪ್ ಕ್ರ್ಯಾಜಿನೋವಿಕ್ ಅವರನ್ನು 6-1, 6-2, 7-6 (7-3) ನೇರ ಸೆಟ್‌ಗಳಿಂದ ಸೋಲಿಸಿದ್ದರಿಂದ ಫ್ರಾನ್ಸ್ 2-1 ಮುನ್ನಡೆ ಸಾಧಿಸುವಂತಾಯಿತು.
ಮೊದಲ ಮರು ಸಿಂಗಲ್ಸ್‌ನಲ್ಲಿ ನಿಕ್ ಕಿರ್ಗಿಯೋಸ್ ಅವರು ಡೇವಿಡ್ ಗೊಫಿನ್ ವಿರುದ್ಧ ಗೆದ್ದರೆ ಆಸ್ಟ್ರೇಲಿಯ ಫೈನಲಿಗೇರಲಿದೆ. ಕಿರ್ಗಿಯೋಸ್ ಶುಕ್ರವಾರ ನಡೆದ ಮೊದಲ ಸಿಂಗಲ್ಸ್‌ನಲ್ಲಿ ಸ್ಟೀವ್ ಡಾರ್ಸಿಸ್ ಅವರನ್ನು 6-3, 3-6, 6-7 (5-7), 6-1, 6-2 ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯಕ್ಕೆ 1-0 ಮುನ್ನಡೆ ಒದಗಿಸಿದ್ದರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಗೊಫಿನ್ ಅವರು ಜಾನ್ ಮಿಲ್ಮನ್ ಅವರನ್ನು 6-7 (4-7), 6-4, 6-3, 7-5 ಸೆಟ್‌ಗಳಿಂದ ಸೋಲಿಸಿದ್ದರಿಂದ ಹೋರಾಟ 1-1 ಸಮಬಲಗೊಂಡಿತ್ತು.