Advertisement

ಸನ್‌ರೈಸರ್ ಗೆ ವಾರ್ನರ್‌ ನಾಯಕ

10:25 AM Feb 29, 2020 | Team Udayavani |

ಹೊಸದಿಲ್ಲಿ: ಈ ವರ್ಷದ “ಇಂಡಿಯನ್‌ ಪ್ರೀಮಿಯರ್‌ ಲೀಗ್‌’
ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರಿಗೆ ಮರಳಿ ನಾಯಕತ್ವದ ಜವಾಬ್ದಾರಿ ವಹಿಸಿದೆ.

Advertisement

2020ರ ಐಪಿಎಲ್‌ ಟೂರ್ನಿಯಲ್ಲಿ “ಆರೆಂಜ್‌ ಆರ್ಮಿ’ಯನ್ನು ಡೇವಿಡ್‌ ವಾರ್ನರ್‌ ಅವರು ಮುನ್ನಡೆ ಸಲಿ¨ªಾರೆ ಎಂದು ಸನ್‌ರೈಸರ್ ತಂಡ ತನ್ನ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದೆ.

ಕಳೆದೆರಡು ಆವೃತ್ತಿಗಳಲ್ಲಿ ನ್ಯೂಜಿಲ್ಯಾಂಡ್‌ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದರು. ಕೆಲವು ಪಂದ್ಯಗಳಲ್ಲಿ ಭುವನೇಶ್ವರ್‌ ಕೂಡ ನಾಯಕತ್ವ ವಹಿಸಿದ್ದರು.

ಗರಿಷ್ಠ ಪ್ರಯತ್ನ: ವಾರ್ನರ್‌
“ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಮರಳಿ ತಂಡದ ನಾಯಕತ್ವ ಪಡೆದಿರುವುದಕ್ಕೆ ರೋಮಾಂಚನವಾಗಿದೆ. ಈ ಅವಕಾಶ ನೀಡಿರುವುದಕ್ಕೆ ಕೃತಜ್ಞತೆಗಳು. ಕಳೆದ ಬಾರಿ ತಂಡವನ್ನು ಮುನ್ನಡೆಸಿರುವ ವಿಲಿಯಮ್ಸನ್‌ ಮತ್ತು ಭುವನೇಶ್ವರ್‌ಅವರಿಗೆ ಧನ್ಯವಾದಗಳು. ಈ ಬಾರಿ ತಂಡ ಚಾಂಪಿಯನ್‌ ಪಟ್ಟ ಏರುವಂತೆ ಮಾಡಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇನೆ’ ಎಂದು ವಾರ್ನರ್‌ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next