Advertisement

ಡೇವಿಡ್‌ ವಾರ್ನರ್‌ ಸೂಪರ್‌ ಶೋ

09:13 AM Jun 22, 2019 | Sriram |

ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯದ ಬೃಹತ್‌ ಮೊತ್ತದ ಸವಾಲಿಗೆ ದಿಟ್ಟ ಜವಾಬು ನೀಡಿದ ಬಾಂಗ್ಲಾದೇಶ ಗುರುವಾರದ ವಿಶ್ವಕಪ್‌ ಪಂದ್ಯದಲ್ಲಿ 48 ರನ್ನುಗಳ ವೀರೋಚಿತ ಸೋಲನುಭವಿಸಿದೆ.


Advertisement

ಡೇವಿಡ್‌ ವಾರ್ನರ್‌ ಪ್ರಸಕ್ತ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎರಡನೇ ಶತಕ ಬಾರಿಸುವುದರೊಂದಿಗೆ ಆಸ್ಟ್ರೇಲಿಯ 5 ವಿಕೆಟಿಗೆ 381 ರನ್‌ ಪೇರಿಸಿತು. ಅಮೋಘ ಚೇಸಿಂಗ್‌ ನಡೆಸಿದ ಬಾಂಗ್ಲಾ 50 ಓವರ್‌ಗಳಲ್ಲಿ 8 ವಿಕೆಟಿಗೆ 333 ರನ್‌ ಗಳಿಸಿತು.

ಆಸೀಸ್‌ ಪರ ಡೇವಿಡ್‌ ವಾರ್ನರ್‌ 166, ನಾಯಕ ಆರನ್‌ ಫಿಂಚ್‌ 53, ಉಸ್ಮಾನ್‌ ಖ್ವಾಜಾ 89, ಗ್ಲೆನ್‌ ಮ್ಯಾಕ್ಸ್‌ ವೆಲ್‌ ಬರೀ 10 ಎಸೆತಗಳಲ್ಲಿ 32 ರನ್‌ ಸಿಡಿಸಿ ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಬಾಂಗ್ಲಾ ಈ ಬೃಹತ್‌ ಮೊತ್ತಕ್ಕೆ ಬೆದರದೆ ಚೇಸಿಂಗ್‌ ನಡೆಸಿತು. ತಮಿಮ್‌ ಇಕ್ಬಾಲ್‌, ಮುಶ್ಫಿಕರ್‌ ರಹೀಂ, ಮಹಮದುಲ್ಲ ಕಾಂಗರೂ ದಾಳಿಯನ್ನು ಚೆಂಡಾಡಿದರು. ಆದರೆ ಗೆಲುವು ದೂರವೇ ಉಳಿಯಿತು. ರಹೀಂ ವಿಶ್ವಕಪ್‌ನಲ್ಲಿ ಮೊದಲ ಶತಕ ಹೊಡೆದರು (ಅಜೇಯ 102)ರನ್‌ ಗಳಿಸಿದರು.

ಇದೇ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ 121 ರನ್‌ ಬಾರಿಸಿದ್ದ ಡೇವಿಡ್‌ ವಾರ್ನರ್‌, ಇಲ್ಲಿ ಇನ್ನೂ ಮೇಲ್ಮಟ್ಟದ ಪ್ರದರ್ಶನವಿತ್ತರು. ಇದು ಅವರ 16ನೇ ಏಕದಿನ ಶತಕವಾದರೆ, 6ನೇ 150 ಪ್ಲಸ್‌ ಗಳಿಕೆ. 45ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ವಾರ್ನರ್‌ ಮುಂದೆ ದ್ವಿಶತಕದ ಅವಕಾಶವೊಂದು ತೆರೆಯಲ್ಪಟ್ಟಿತ್ತು. ಆದರೆ ಪಾರ್ಟ್‌ಟೈಮ್‌ ಬೌಲರ್‌ ಸೌಮ್ಯ ಸರ್ಕಾರ್‌ ಇದಕ್ಕೆ ಅವಕಾಶ ಕೊಡಲಿಲ್ಲ.

Advertisement

ಒಟ್ಟು 147 ಎಸೆತ ಎದುರಿಸಿದ ವಾರ್ನರ್‌ 14 ಬೌಂಡರಿ ಜತೆಗೆ 5 ಸಿಕ್ಸರ್‌ ಸಿಡಿಸಿ ಮೆರೆದರು. ಫಿಂಚ್‌ ಜತೆಗೂಡಿ 20.5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 121 ರನ್‌ ಪೇರಿಸಿದರು. ಫಿಂಚ್‌ 53 ರನ್ನಿಗೆ ಎದುರಿಸಿದ್ದು 51 ಎಸೆತ. ಇದರಲ್ಲಿ 5 ಬೌಂಡರಿ, 2 ಸಿಕ್ಸರ್‌ ಸೇರಿತ್ತು.

ದ್ವಿತೀಯ ವಿಕೆಟಿಗೆ 192 ರನ್‌
ವಾರ್ನರ್‌-ಖ್ವಾಜಾ ಜೋಡಿಯ ಆಟ ಇನ್ನೂ ರಂಜನೀಯವಾಗಿತ್ತು. ಇವರಿಂದ 2ನೇ ವಿಕೆಟಿಗೆ 192 ರನ್‌ ಹರಿದು ಬಂತು. 45ನೇ ಓವರ್‌ ವೇಳೆ ಆಸೀಸ್‌ ಕೇವಲ ಒಂದು ವಿಕೆಟಿಗೆ 313 ರನ್‌ ರಾಶಿ ಹಾಕಿತ್ತು. ಶತಕದ ನಿರೀಕ್ಷೆಯಲ್ಲಿದ್ದ ಖ್ವಾಜಾ 89 ರನ್ನಿಗೆ ನಿರ್ಗಮಿಸಿದರು (72 ಎಸೆತ, 10 ಬೌಂಡರಿ).

ಬಡ್ತಿ ಪಡೆದು ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಎಂದಿನ ಆಕ್ರಮಣಕಾರಿ ಆಟಕ್ಕಿಳಿದರು. ಕೇವಲ 10 ಎಸೆತಗಳಲ್ಲಿ 3 ಸಿಕ್ಸರ್‌, 2 ಬೌಂಡರಿ ನೆರವಿನಿಂದ 32 ರನ್‌ ಮಾಡಿ ರನೌಟಾದರು. ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದು 6ನೇ ಕ್ರಮಾಂಕದಲ್ಲಿ ಬಂದ ಸ್ಮಿತ್‌ ಮಾತ್ರ (1).

ಸ್ಕೋರ್‌ ಪಟ್ಟಿ
ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಸಿ ರುಬೆಲ್‌ ಬಿ ಸರ್ಕಾರ್‌ 166
ಆರನ್‌ ಫಿಂಚ್‌ ಸಿ ರುಬೆಲ್‌ ಬಿ ಸರ್ಕಾರ್‌ 53
ಉಸ್ಮಾನ್‌ ಖ್ವಾಜಾ ಸಿ ರಹೀಂ ಬಿ ಸರ್ಕಾರ್‌ 89
ಗ್ಲೆನ್‌ ಮ್ಯಾಕ್ಸ್‌ವೆಲ್‌ ರನೌಟ್‌ 32
ಸ್ಟೋಯಿನಿಸ್‌ ಔಟಾಗದೆ 17
ಸ್ಟೀವನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಮುಸ್ತಫಿಜುರ್‌ 1
ಅಲೆಕ್ಸ್‌ ಕ್ಯಾರಿ ಔಟಾಗದೆ 11
ಇತರ 12
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 381
ವಿಕೆಟ್‌ ಪತನ: 1-121, 2-313, 3-352, 4-353, 5-354.
ಬೌಲಿಂಗ್‌: ಮಶ್ರಫೆ ಮೊರ್ತಜ 8-0-56-0
ಮುಸ್ತಫಿಜುರ್‌ ರಹಮಾನ್‌ 9-0-69-1
ಶಕಿಬ್‌ ಅಲ್‌ ಹಸನ್‌ 6-0-50-0
ರುಬೆಲ್‌ ಹೊಸೈನ್‌ 9-0-83-0
ಮೆಹಿದಿ ಹಸನ್‌ 10-0-59-0
ಸೌಮ್ಯ ಸರ್ಕಾರ್‌ 8-0-58-3
ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌ ಬಿ ಸ್ಟಾರ್ಕ್‌ 62
ಸೌಮ್ಯ ಸರ್ಕಾರ್‌ ರನೌಟ್‌ 10
ಶಕಿಬ್‌ ಅಲ್‌ ಹಸನ್‌ ಸಿ ವಾರ್ನರ್‌ ಬಿ ಸ್ಟೋಯಿನಿಸ್‌ 41
ಮುಶ್ಫಿಕರ್‌ ರಹೀಂ ಔಟಾಗದೆ 102
ಲಿಟನ್‌ ದಾಸ್‌ ಎಲ್‌ಬಿಡಬ್ಲ್ಯು ಝಂಪ 20
ಮಹಮದುಲ್ಲ ಸಿ ಕಮಿನ್ಸ್‌ ಬಿ ನೈಲ್‌ 69
ಶಬ್ಬೀರ್‌ ರಹಮಾನ್‌ ಬಿ ನೈಲ್‌ 0
ಮೆಹಿದಿ ಹಸನ್‌ ಸಿ ವಾರ್ನರ್‌ ಬಿ ಸ್ಟಾರ್ಕ್‌ 6
ಮಶ್ರಫೆ ಮೊರ್ತಜ ಸಿ ಮ್ಯಾಕ್ಸ್‌ವೆಲ್‌ ಬಿ ಸ್ಟೋಯಿನಿಸ್‌ 6
ಇತರ 17
ಒಟ್ಟು (50 ಓವರ್‌ಗಳಲ್ಲಿ 8ವಿಕೆಟಿಗೆ) 333
ವಿಕೆಟ್‌ ಪತನ: 1-23, 2-102, 3-144, 4-175, 5-302, 6-302, 7-323, 8-333.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 10-0-55-2
ಪ್ಯಾಟ್‌ ಕಮಿನ್ಸ್‌ 10-1-65-0
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-25-0
ನಥನ್‌ ಕೋಲ್ಟರ್‌ ನೈಲ್‌ 10-0-58-2
ಮಾರ್ಕಸ್‌ ಸ್ಟೋಯಿನಿಸ್‌ 8-0-54-2
ಆ್ಯಡಂ ಝಂಪ 9-0-68-1

ಮ್ಯಾಚ್‌ ಹೈಲೈಟ್ಸ್‌
– ಡೇವಿಡ್‌ ವಾರ್ನರ್‌ ವಿಶ್ವಕಪ್‌ನಲ್ಲಿ 2 ಸಲ 150 ಪ್ಲಸ್‌ ರನ್‌ ಬಾರಿಸಿದ ಮೊದಲ ಕ್ರಿಕೆಟಿಗ. ಕಳೆದ ಸಲ ಅಫ್ಘಾನ್‌ ವಿರುದ್ಧ 178 ರನ್‌ ಹೊಡೆದಿದ್ದರು.
– ಆಸ್ಟ್ರೇಲಿಯ ಮೊದಲೆರಡು ವಿಕೆಟ್‌ಗಳಿಗೆ ಶತಕದ ಜತೆಯಾಟ ನಡೆಸಿತು. ಇದು ವಿಶ್ವಕಪ್‌ ಚರಿತ್ರೆಯ 4ನೇ ನಿದರ್ಶನ. 2011ರಲ್ಲಿ ಭಾರತ, 2015ರಲ್ಲಿ ಶ್ರೀಲಂಕಾ 2 ಸಲ ಈ ಸಾಧನೆಗೈದಿದೆ.
– ವಾರ್ನರ್‌ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು 8ನೇ 150 ಪ್ಲಸ್‌ ರನ್‌ ಬಾರಿಸಿದರು. 7 ಸಲ ಈ ಸಾಧನೆ ಮಾಡಿದ ರೋಹಿತ್‌ ಶರ್ಮ ದಾಖಲೆ ಪತನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next