ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಾರ್ನರ್ ಶತಕ ಸಿಡಿಸಿ ತಮ್ಮ ಐಕಾನಿಕ್ ಶೈಲಿಯಲ್ಲಿ ಸಂಭ್ರಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಾರ್ನರ್ 8,000 ಟೆಸ್ಟ್ ರನ್ ಗಳನ್ನೂ ಇದೇ ವೇಳೆ ಪೂರೈಸಿದರು.
ಮಂಗಳವಾರ ತಮ್ಮ 25ನೇ ಟೆಸ್ಟ್ ಶತಕ ಬಾರಿಸಿದ ವಾರ್ನರ್ ಮಾಜಿ ನಾಯಕ ರಿಕಿ ಪಾಂಟಿಂಗ್ ನಂತರ ನೂರನೇ ಪಂದ್ಯದಲ್ಲಿ ನೂರು ರನ್ ಗಳಿಸಿದ ಎರಡನೇ ಆಸ್ಟ್ರೇಲಿಯನ್ ಎಂಬ ಸಾಧನೆ ಮಾಡಿದ್ದಾರೆ. ಪಾಂಟಿಂಗ್ ಅವರು ತಮ್ಮ 100ನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಂಟಿಂಗ್ 120 ಮತ್ತು ಔಟಾಗದೆ 143 ರನ್ ಗಳಿಸಿದ್ದರು.
ವಾರ್ನರ್ ಅವರು ಸುಮಾರು ಮೂರು ವರ್ಷಗಳ ಬಳಿಕ ಟೆಸ್ಟ್ ಶತಕ ಬಾರಿಸಿದರು. ನೂರನೇ ಪಂದ್ಯದಲ್ಲಿ ಶಕತ ಗಳಿಸಿದ ವಿಶ್ವದ ಹತ್ತನೇ ಬ್ಯಾಟರ್ ಎಂಬ ದಾಖಲೆಗೂ ಪಾತ್ರರಾದರು.
ನೂರನೇ ಪಂದ್ಯದಲ್ಲಿ ಶತಕ ಗಳಿಸಿದರವರು.
- ಕಾಲಿನ್ ಕೌಡ್ರೆ (ಇಂಗ್ಲೆಂಡ್) 1968
- ಜಾವೇದ್ ಮಿಯಾಂದಾದ್ (ಪಾಕಿಸ್ತಾನ) 1989
- ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್) 1990
- ಅಲೆಕ್ ಸ್ಟೀವರ್ಟ್ (ಇಂಗ್ಲೆಂಡ್) 2000
- ಇಂಜಮಾಮ್-ಉಲ್-ಹಕ್ (ಪಾಕಿಸ್ತಾನ) 2005
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 2006
- ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ) 2012
- ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ) 2017
- ಜೋ ರೂಟ್ (ಇಂಗ್ಲೆಂಡ್) 2021
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 2022