ಇಂಧೋರ್: ಹೊಸದಿಲ್ಲಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಉಳಿದ ಕೂಟದಿಂದ ಹೊರಬಿದ್ದಿದ್ದಾರೆ.
36ರ ಹರೆಯದ ವಾರ್ನರ್ ಅವರು ನಡೆದ ಎರಡನೇ ಟೆಸ್ಟ್‌ನಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗಾಯಗಳಿಗೆ ಒಳಗಾದರು. ಮೊಹಮ್ಮದ್ ಸಿರಾಜ್ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿದಿತ್ತು. ಗಾಯಗೊಂಡ ಅವರ ಬದಲು ದಿಲ್ಲಿ ಪಂದ್ಯದಲ್ಲಿ ರೆನ್ಯ್ಶಾ ಆಡಿದ್ದರು.
ಡೇವಿಡ್ ವಾರ್ನರ್ ಭಾರತದ ಟೆಸ್ಟ್ ಪ್ರವಾಸದಿಂದ ಹೊರಗುಳಿದಿದ್ದು, ತವರಿಗೆ ಮರಳಲಿದ್ದಾರೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವಾರ್ನರ್ ಮೊಣಕೈಗೆ ಬಡಿದು ಹೇರ್ ಲೈನ್ ಫ್ರಾಕ್ಚರ್ ಗೆ ಒಳಗಾಗಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Watch:26/11 ಆರೋಪಿಗಳು ಮುಕ್ತವಾಗಿ ಓಡಾಡ್ತಿದ್ದಾರೆ…ಪಾಕ್ ನೆಲದಲ್ಲಿ ಜಾವೇದ್ ಅಖ್ತರ್ ಆಕ್ರೋಶ
ವಾರ್ನರ್ ಅವರು ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಟೆಸ್ಟ್ ಸರಣಿಯ ಬಳಿಕ ನಡೆಯಲಿರುವ ಏಕದಿನ ಸರಣಿಗಾಗಿ ತಂಡ ಸೇರಿಕೊಳ್ಳಬಹುದು ಎಂದು ವರದಿಯಾಗಿದೆ. ಮಾರ್ಚ್ 17ರಿಂದ 22ರವರೆಗೆ ಏಕದಿನ ಸರಣಿ ನಡೆಯಲಿದೆ.