Advertisement

‘ಡೇವಿಡ್‌ ವಾರ್ನರ್‌ ಆಯ್ಕೆಗಾರರಲ್ಲ’: ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್‌

11:25 PM Dec 31, 2023 | Team Udayavani |

ಮೆಲ್ಬರ್ನ್: ತನ್ನ ಉತ್ತರಾಧಿಕಾರಿಯನ್ನು ಹೆಸರಿಸಲು ಡೇವಿಡ್‌ ವಾರ್ನರ್‌ ಅವರೇನೂ ಆಯ್ಕೆಗಾರರಲ್ಲ ಎಂಬುದಾಗಿ ಆಸ್ಟ್ರೇಲಿಯ ತಂಡದ ಕೋಚ್‌ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್‌ ಪ್ರತಿಕ್ರಿಯಿಸಿದ್ದಾರೆ.

Advertisement

ಡೇವಿಡ್‌ ವಾರ್ನರ್‌ ನಾಡಿದ್ದು ಸಿಡ್ನಿಯಲ್ಲಿ ತಮ್ಮ ಟೆಸ್ಟ್‌ ಬಾಳ್ವೆಯ ಅಂತಿಮ ಪಂದ್ಯ ಆಡಲಿದ್ದಾರೆ. ತನ್ನಿಂದ ತೆರವಾಗುವ ಸ್ಥಾನಕ್ಕೆ ಮಾರ್ಕಸ್‌ ಹ್ಯಾರಿಸ್‌ ಉತ್ತಮ ಆಯ್ಕೆಯಾಗಬಲ್ಲರು ಎಂಬುದಾಗಿ ವಾರ್ನರ್‌ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋಚ್‌ ಮೆಕ್‌ಡೊನಾಲ್ಡ್‌, “ವಾರ್ನರ್‌ ಆಯ್ಕೆಗಾರರಲ್ಲ, ಇಲ್ಲಿ ಇನ್ನೂ ಅನೇಕ ಆಯ್ಕೆಗಳಿವೆ. ಹಿಂದೊಮ್ಮೆ ಅವರು ಮ್ಯಾಟ್‌ ರೆನ್‌ಶಾ ಹೆಸರನ್ನು ಸೂಚಿಸಿದ ನೆನಪಿದೆ. ನನ್ನ ಪ್ರಕಾರ ಕಾಮ್‌ ಬಾನ್‌ಕ್ರಾಫ್ಟ್ ಉತ್ತಮ ಆಯ್ಕೆ ಆಗಬಲ್ಲರು. ಕ್ಯಾಮರಾನ್‌ ಗ್ರೀನ್‌ ಕೂಡ ಇದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next