Advertisement

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯಕ್ಕೂ ವಾರ್ನರ್‌, ಅಬೋಟ್‌ ಇಲ್ಲ

07:53 AM Dec 24, 2020 | keerthan |

ಮೆಲ್ಬರ್ನ್: ಶನಿವಾರದಿಂದ ಇಲ್ಲಿ ಆರಂಭವಾಗಲಿರುವ ಭಾರತದೆದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಿಂದಲೂ ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಮತ್ತು ಪೇಸ್‌ ಬೌಲರ್‌ ಸೀನ್‌ ಅಬೋಟ್‌ ಹೊರಬಿದ್ದಿದ್ದಾರೆ.

Advertisement

ಇಬ್ಬರೂ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಮೂರನೇ ಟೆಸ್ಟ್‌ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ ಎಂಬುದಾಗಿ “ಕ್ರಿಕೆಟ್‌ ಆಸ್ಟ್ರೇಲಿಯ’ (ಸಿಎ) ತಿಳಿಸಿದೆ. ಇವರಿಬ್ಬರಿಗೆ ಬದಲಿಯಾಗಿ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯ ಬೀಳದು ಎಂದೂ “ಸಿಎ’ ಹೇಳಿದೆ.

ಇವರಿಬ್ಬರ ಗೈರಲ್ಲೂ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಭಾರತವನ್ನು ಹೀನಾಯವಾಗಿ ಸೋಲಿಸಿದ ಕಾರಣ ಆಸೀಸ್‌ ತಂಡಕ್ಕೆ ಬದಲಿ ಆಟಗಾರರ ಅನಿವಾರ್ಯತೆ ಇಲ್ಲ ಎಂಬುದು ಸದ್ಯದ ಲೆಕ್ಕಾಚಾರ.

ವಾರ್ನರ್‌ ಮತ್ತು ಅಬೋಟ್‌ ಸಿಡ್ನಿಯಲ್ಲಿ ವಿಶ್ರಾಂತಿಯಲ್ಲಿದ್ದರು. ಆದರೆ ಅಲ್ಲೀಗ ಮತ್ತೆ ಕೋವಿಡ್‌ ಕೇಸ್‌ ಕಂಡುಬಂದ ಕಾರಣ ಇಬ್ಬರೂ ಮೆಲ್ಬರ್ನ್ಗೆ ಆಗಮಿಸಿದ್ದಾರೆ.

ಬಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ

Advertisement

ಅಡಿಲೇಡ್‌ನ‌ಲ್ಲಿ ನಡೆದ ಪಿಂಕ್‌ ಟೆಸ್ಟ್‌ ಪಂದ್ಯದಲ್ಲಿ 36 ರನ್ನಿಗೆ ಕುಸಿದು ಹೀನಾಯ ಸೋಲಿಗೆ ತುತ್ತಾದ ಕಾರಣ, ದ್ವಿತೀಯ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಬಹಳಷ್ಟು ಬದಲಾವಣೆ ಗೋಚರಿಸುವ ಸಾಧ್ಯತೆ ಇದೆ. ಗಿಲ್‌, ಜಡೇಜ ಅವರ ಸೇರ್ಪಡೆ ಬಹುತೇಕ ಖಚಿತವಾಗಿದೆ. ಕೀಪರ್‌ ಸಾಹಾ ಬದಲು ರಿಷಭ್‌ ಪಂತ್‌ ಆಡಲೂಬಹುದು. ಅವರು ಸಾಹಾಗಿಂತ ಮೊದಲು ಅಭ್ಯಾಸಕ್ಕೆ ಇಳಿದರು.

ಇದನ್ನೂ ಓದಿ:ಐಪಿಎಲ್‌ ತಂಡಗಳ ಸಂಖ್ಯೆ; ಇಂದಿನ ಬಿಸಿಸಿಐ ಸಭೆಯಲ್ಲಿ ಇತ್ಯರ್ಥ

ಫಾರ್ಮ್ನಲ್ಲಿಲ್ಲದ ಪೃಥ್ವಿ ಶಾ ಬದಲು ಶುಭಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಶಾ ಅವರಿಗೆ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಠೊಡ್‌ ಪಾಠ ಹೇಳಿಕೊಡುತ್ತಿದ್ದುದು ಕಂಡುಬಂತು. ರವೀಂದ್ರ ಜಡೇಜ ಆಗಮಿಸಿದರೆ ತಂಡಕ್ಕೆ ಸಮರ್ಥ ಆಲ್‌ರೌಂಡರ್‌ ಓರ್ವ ಲಭಿಸಿದಂತಾಗುತ್ತದೆ.

ಗಾಯಾಳಾಗಿ ಹೊರಬಿದ್ದಿರುವ ಮೊಹಮ್ಮದ್‌ ಶಮಿ ಸ್ಥಾನಕ್ಕಾಗಿ ಮೊಹಮ್ಮದ್‌ ಸಿರಾಜ್‌, ನವದೀಪ್‌ ಸೈನಿ ರೇಸ್‌ನಲ್ಲಿದ್ದಾರೆ. ಇವರಿಬ್ಬರೂ ರಹಾನೆಗೆ ಬಹಳ ಹೊತ್ತು ಬೌಲಿಂಗ್‌ ನಡೆಸಿದರು

Advertisement

Udayavani is now on Telegram. Click here to join our channel and stay updated with the latest news.

Next