Advertisement

ಈ ಆಟಗಾರ ಐಪಿಎಲ್ ನಲ್ಲಿ ದ್ವಿಶತಕ ಬಾರಿಸಬಲ್ಲ: ಕೆಕೆಆರ್ ಆಟಗಾರನ ಕೊಂಡಾಡಿದ ಡೇವಿಡ್ ಹಸ್ಸಿ

01:12 PM Sep 07, 2020 | keerthan |

ದುಬೈ: ಸುಮಾರು ಐದು ತಿಂಗಳ ವಿರಾಮದ ನಂತರ ಭಾರತೀಯ ಆಟಗಾರರು ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಐಪಿಎಲ್ ಗಾಗಿ ಅರಬ್ ನಾಡಿನಲ್ಲಿ ಕಠಿಣ ತಾಲೀಮಿನಲ್ಲಿ ತೊಡಗಿದ್ದಾರೆ. ವಿದೇಶಿ ಆಟಗಾರರು ಸಹ ತಂಡ ಸೇರುತ್ತಿದ್ದಾರೆ. ಐಪಿಎಲ್ ಕಾವು ಏರತೊಡಗಿದೆ.

Advertisement

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಡೇವಿಡ್ ಹಸ್ಸಿ, ತಂಡದ ಆಲ್ ರೌಂಡರ್ ಆಂದ್ರೆ ರಸ್ಸೆಲ್ ರನ್ನು ಹಾಡಿ ಹೊಗಳಿದ್ದಾರೆ.

ಟಿ20 ಪಂದ್ಯದಲ್ಲಿ ರಸ್ಸೆಲ್ ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ಆಡಿ ಕನಿಷ್ಠ 60 ಎಸೆತ ಆಡುವ ಅವಕಾಶ ಪಡೆದರೆ ಖಂಡಿತ ದ್ವಿಶತಕ ಬಾರಿಸಬಲ್ಲರು ಎಂದಿದ್ದಾರೆ.

ರಸ್ಸೆಲ್ ಒಬ್ಬ ಅದ್ಭುತ ಆಟಗಾರ. ಆತ ಕೆಕೆಆರ್ ತಂಡದ ಹೃದಯ ಬಡಿತ ಇದ್ದಂತೆ. ರಸ್ಸೆಲ್ ನಿಂದ ಯಾವುದೂ ಕೂಡಾ ಅಸಾಧ್ಯವಲ್ಲ ಎಂದು ಡೇವಿಡ್ ಹಸ್ಸಿ ಹೇಳಿದ್ದಾರೆ.

ಇದನ್ನೂ ಓದಿ: ಲೈನ್ ಅಂಪೈರ್ ಗೆ ಚೆಂಡಿನಿಂದ ಬಾರಿಸಿದ ಜೋಕೋವಿಕ್! ಯುಎಸ್ ಓಪನ್ ಕೂಟದಿಂದಲೇ ಔಟ್

Advertisement

2019ರ ಐಪಿಎಲ್ ನಲ್ಲಿ ಆಂದ್ರೆ ರಸ್ಸೆಲ್ 510 ರನ್ ಗಳಿಸಿದ್ದರು. ಸ್ಫೋಟಕವಾಗಿ ಬ್ಯಾಟ್ ಬೀಸುವ ರಸ್ಸೆಲ್ ಹಲವಾರು ಪಂದ್ಯಗಳನ್ನು ಕೆಕೆಆರ್ ತಂಡಕ್ಕಾಗಿ ಗೆಲ್ಲಿಸಿದ್ದರು. ಇದರೊಂದಿಗೆ 11 ವಿಕೆಟ್ ಗಳನ್ನೂ ಕಬಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next