Advertisement
ಇತ್ತೀಚೆಗಷ್ಟೇ ಹೊಸ ವರ್ಷಾರಣೆ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ನಿಟ್ಟಿನಲ್ಲಿ ಬೆಂಗಳೂರು ಸುರಕ್ಷಿತವಲ್ಲ ಎಂದು ವರದಿ ಪ್ರಸಾರ ಮಾಡಿದ್ದವು. ಈಗ ಡೇವಿಡ್ ಗುಟ್ಟಾರಂತಹ ನಂಬರ್ ವನ್ ಸಂಗೀತಗಾರನ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡದಿದ್ದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಪ್ರಕರಣಗಳು ನಡೆಯುವ ಸಂಭವದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿಲ್ಲ ಎಂದು ವರದಿ ವಿವರಿಸಿದೆ.
Related Articles
ಕಲಾವಿದನಾಗಿ ವೃತ್ತಿ ಆರಂಭಿಸಿ ನಂತರ ಸಂಗೀತದತ್ತ ಮುಖಮಾಡಿದ ನೆದರ್ಲ್ಯಾಂಡ್‌ನ ಲೇಯ್ಡ್ ಬ್ಯಾಕ್ ಲ್ಯೂಕ್ ಪ್ರಪಂಚದ ನಂಬರ್ ಒನ್ ಡಿಜೆ ಡೇವಿಡ್ ಗುಟ್ಟಾ. ಸ್ಟೀವ್ ಆಂಗೆಲೊ, ಸೆಬಾಸ್ಟಿನ್ ಇಂಗ್‌ರೊಸೊ, ಆಕ್ಸ್‌ವೆಲ್ ಮೊದಲಾದವರೊಂದಿಗೆ ಸೇರಿಕೊಂಡು ಯುರೋಪ್, ಉತ್ತರ ಅಮೆರಿಕೆಯ ದೇಶಗಳಲ್ಲೆಲ್ಲಾ ಸಂಗೀತ ರಸಧಾರೆ ಹರಿಸುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ.
Advertisement
ಆಯೋಜಕರು ಸುಳ್ಳು ಸುದ್ದಿ ಹಬ್ಬಿಸಿದ್ಯಾಕೆ?ಫ್ರೆಂಚ್ ಡಿಜೆ ಗುಟ್ಟಾ ಕಾರ್ಯಕ್ರಮಕ್ಕೆ ಭದ್ರತೆ ದೃಷ್ಟಿಯಿಂದ ಅನುಮತಿ ನೀಡಿಲ್ಲ ಎಂಬುದು ಸುಳ್ಳು. ಎಪಿಎಂಸಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಅನುಮತಿ ನೀಡಿಲ್ಲ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರಣ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ಧ ಎಂದು ಬೆಂಗಳೂರು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜನವರಿ 10ರಂದು ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ್ದರು. 15 ಸಾವಿರ ಜನ ಸೇರುವುದಾಗಿ ಸನ್ ಬರ್ನ್ ಹೇಳಿತ್ತು. ಆದರೆ ಆ ಸ್ಥಳದಲ್ಲಿ ಚುನಾವಣೆ ನಡೆಯುತ್ತಿರುವ ನಿಟ್ಟಿನಲ್ಲಿ ಬೇರೆ ದಿನ ಕಾರ್ಯಕ್ರಮ ಆಯೋಜಿಸಿ ಅನುಮತಿ ನೀಡುತ್ತೇವೆ ಎಂದು ಹೇಳಿರುವುದಾಗಿ ವಿವರಿಸಿದ್ದಾರೆ.