Advertisement

26/11ರ ಮುಂಬಯಿ ದಾಳಿ ಸೂತ್ರಧಾರ ಡೇವಿಡ್‌ ಹೆಡ್ಲಿ ಸಾವು ?

12:01 PM Jul 24, 2018 | udayavani editorial |

ಹೊಸದಿಲ್ಲಿ : ದೃಢಪಡದ ವರದಿಗಳ ಪ್ರಕಾರ ಅಮೆರಿಕದ ಜೈಲಿನಲ್ಲಿ ಸಹ ಕೈದಿಗಳ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ  26/11ರ ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಡೇವಿಡ್‌ ಕೋಲ್ಮನ್‌  ಹೆಡ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಹೆಡ್ಲಿ ಸಾವಿನ ಬಗ್ಗೆ ತಮಗೇನೂ ಮಾಹಿತಿ ಇಲ್ಲ  ಎಂದು ಹೇಳಿದ್ದಾರೆ. 

Advertisement

ಜೈಲಿನಲ್ಲಿ ಮಾರಣಾಂತಿಕ ಹಲ್ಲೆಗೆ ಗುರಿಯಾದ ಬಳಿಕ ಜು.9ರಂದು ಹೆಡ್ಲಿ ಮೃತಪಟ್ಟನೆಂಬ ಮಾಹಿತಿಯನ್ನು ಉಲ್ಲೇಖೀಸಿ ವರದಿಗಳು ತಿಳಿಸಿವೆ. 

ಡೇವಿಡ್‌ ಹೆಡ್ಲಿ ಮೇಲೆ ಕಳೆದ ಮೇ 19ರಂದು ಜೈಲಿನ ಸಹ ಕೈದಿಗಳು ಹಲ್ಲೆ ನಡೆಸಿದ್ದರು. ಈ ಸಹ ಕೈದಿಗಳು ಪೊಲೀಸರ ಮೇಲೆ ನಡೆಸಿದ್ದ ದಾಳಿಗೆ ಸಂಬಂಧಪಟ್ಟು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 

ಮಾಹಿತಿಗಳ ಪ್ರಕಾರ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ಹೆಡ್ಲಿಯನ್ನು ವಿಮಾನದ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದಾಖಲಾದ ಒಡನೆಯೇ ಆತನನ್ನು ಐಸಿಯು ಗೆ ಸೇರಿಸಲಾಗಿತ್ತು. ಆತನ ಸ್ಥಿತಿ ಗಂಭೀರವಾಗಿತ್ತು. 

ಜುಲೈ 8ರಂದು ಹೆಡ್ಲಿ ಮೃತಪಟ್ಟನೆಂದು ವೈದ್ಯರು ಘೋಷಿಸಿದ್ದರು. ಅದೇ ವೇಳೆ ಆತನ ಸಾವಿನ ಕುರಿತ ತನಿಖೆ ಕೈಗೊಳ್ಳುವಂತೆ ಎಫ್ ಬಿ ಐಗೆ ಆದೇಶಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next