Advertisement

ದೇವದಾಸಿ ಪದ್ಧತಿ ನಿರ್ಮೂಲನೆಗೆ ಯೋಜನೆ

06:06 PM Jan 21, 2021 | Team Udayavani |

ದಾವಣಗೆರೆ: ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹಾಗೂ ಮಾಜಿ ದೇವದಾಸಿಯರ ಮಕ್ಕಳ ಸ್ವಾವಲಂಬನೆಗಾಗಿ ಹೊಸ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ತಿಳಿಸಿದ್ದಾರೆ.

Advertisement

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ 2-3 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬಂದಿದೆ. ದೇವಸ್ಥಾನಗಳ ಆವರಣದಲ್ಲಿ  ತರಬೇತಿ ಕೇಂದ್ರ ತೆರೆಯುವುದು. ಮಾಜಿ ದೇವದಾಸಿಯರ ಮಕ್ಕಳಿಗೆ ಹೊಲಿಗೆ ಮತ್ತು·ಕಂಪ್ಯೂಟರ್‌ ತರಬೇತಿ ನೀಡಲಾಗುವುದು.ದಾವಣಗೆರೆ ಜಿಲ್ಲೆಯಲ್ಲೂ ಮಾಜಿದೇವದಾಸಿಯರು ಆಸಕ್ತಿ ತೋರಿದಲ್ಲಿ ತರಬೇತಿ ಕೇಂದ್ರವನ್ನು ನಿಗಮದ ವತಿಯಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಅಭಿವೃದ್ಧಿಗಾಗಿ ಜೀವ ವೈವಿಧ್ಯಕ್ಕೆ ಧಕ್ಕೆ ಬೇಡ

ದೇವದಾಸಿ ಪದ್ಧ ತಿ ನಿರ್ಮೂಲನೆಗಾಗಿ ಈಗಾಗಲೇ ಕಿತ್ತೂರು ರಾಣಿ ಚೆನ್ನಮ್ಮ  ಪ್ರಶಸ್ತಿ, ಸ್ವ ಉದ್ಯೋಗ ಕೈಗೊಳ್ಳಲು 50 ಸಾವಿರ ಸಾಲ, 50 ಸಾವಿರ ಸಬ್ಸಿಡಿ ಸೌಲಭ್ಯ ನೀಡಲಾಗುತ್ತಿದೆ. 1985ರ ಕಾಯ್ದೆ ಪ್ರಕಾರ ಮುತ್ತು ಕಟ್ಟುವುದು, ದೇವರಿಗೆ ಬಿಡುವುದು ಕಾನೂನಿನ ಉಲ್ಲಂಘನೆ ಮಾಡುವರ ವಿರುದ್ದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್‌ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಏ. 1 ರಿಂದ ಮಹಿಳಾ ಒಕ್ಕೂಟದಿಂದ ಶೇಂಗಾ ಚಿಕ್ಕಿ ಘಟಕ ಆರಂಭಿಸಲು ಯೋಜಿಸಲಾಗಿದೆ ಎಂದರು. ಲಿಂಗತ್ವ ಅಲ್ಪಸಂಖ್ಯಾತರ ಸಂಘದ ವ್ಯವಸ್ಥಾಪಕ ಕಾರ್ಯದರ್ಶಿ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯೆಯರಾದ ಉಮಾ ಪ್ರಕಾಶ್‌, ಎಚ್‌.ಸಿ. ಜಯಮ್ಮ, ದಿಶಾ ವಿಚಕ್ಷಣಾ ಸಮಿತಿ ಸದಸ್ಯೆ ಚೇತನಾ ಶಿವಕುಮಾರ್‌, ಜಿ.ಪಂ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮೀ ಇತರರು ಇದ್ದರು.

ಪುನರ್‌ ಸಮೀಕ್ಷೆ ಇಲ್ಲ..

Advertisement

2007-08 ರಿಂದ ಮಾಜಿ ದೇವದಾಸಿ ಸರ್ವೇ ನಿಲ್ಲಿಸಲಾಗಿದೆ. ದೇವದಾಸಿ ಪದ್ಧತಿ ನಿರ್ಮೂಲನೆ ಆಗಬೇಕೆಂಬ ಉದ್ದೇಶದಿಂದ ಪುನರ್‌ ಸರ್ವೇ ನಿಲ್ಲಿಸಲಾಗಿದೆ. ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ 44,660 ಮಾಜಿ ದೇವದಾಸಿಯರಿದ್ದು, 24,184 ಜನರಿಗೆ ವಸತಿ ಒದಗಿಸಲಾಗಿದೆ. ಈ ಅನಿಷ್ಟ ಪದ್ಧತಿ ಮುಂದಿನ ಪೀಳಿಗೆಗೆ ಮುಂದುವರೆಯಬಾರದು ಎಂದು ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಮನವಿ ಮಾಡಿದರು.

 ರಾಜ್ಯದಲ್ಲೇ ಮೊದಲು..

ಉದ್ಯೋಗಿನಿ ಯೋಜನೆಯಡಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಕೆನರಾ ಬ್ಯಾಂಕಿನಿಂದ 5 ಲಕ್ಷ ರೂಪಾಯಿ ಸಾಲಸೌಲಭ್ಯವನ್ನು ಪಡೆದ ನಿಟುವಳ್ಳಿಯಲ್ಲಿ ಬ್ಯೂಟಿಪಾರ್ಲರ್‌ ನಡೆಸುತ್ತಿರುವ ಫಲಾನುಭವಿ ಕವಿತಾ ಆವರಿಗೆ ಸಾಂಕೇತಿಕವಾಗಿ ಚೆಕ್‌ ವಿತರಣೆ ಮಾಡಲಾಯಿತು.

 

ಇದನ್ನೂ ಓದಿ : ಫ್ಯಾಂಟಮ್ ಈಗ “ವಿಕ್ರಾಂತ್ ರೋಣ”: ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದೆ ಕಿಚ್ಚನ ಕಟೌಟ್

 

Advertisement

Udayavani is now on Telegram. Click here to join our channel and stay updated with the latest news.

Next