Advertisement

ಹಿಂದೂ ಶ್ರದ್ಧಾ ಕೇಂದ್ರಗಳ ಪುನರ್‌ ಪ್ರತಿಷ್ಠಾಪಿಸಲಿ

11:27 AM Dec 02, 2019 | Naveen |

ದಾವಣಗೆರೆ: ಅಯೋಧ್ಯೆ ಮಾತ್ರವಲ್ಲದೆ ಕಾಶಿ, ಮಥುರಾ ದೇವಸ್ಥಾನಗಳ ಪುನರ್‌ ಪ್ರತಿಷ್ಠಾಪನೆ ಸಂಬಂಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಒತ್ತಾಯಿಸಿದ್ದಾರೆ.

Advertisement

ನಗರದ ಹೋಟೆಲ್‌ ಶಾಂತಿ ಪಾರ್ಕ್‌ ರಾಯಲ್‌ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಶ್ರೀರಾಮಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲೇ ಆಗಿನ ಗೃಹಮಂತ್ರಿಯಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸಂಸತ್‌ ಒಪ್ಪಿಗೆ ಪಡೆದು ಗುಜರಾತಿನ ಸೋಮನಾಥ ಮಂದಿರ ಜೀರ್ಣೋದ್ಧಾರ ಮಾಡಿದ್ದರು. ಇದೇ ಮಾದರಿಯಲ್ಲಿ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಹ ಅಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಇತರೆ ಹಿಂದೂ ಶ್ರದ್ಧಾಕೇಂದ್ರಗಳನ್ನು ಪುನರ್‌ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿದರು.

ರಾಮ ಜನ್ಮಭೂಮಿ ಹೋರಾಟ ಇಂದು, ನಿನ್ನೆಯದಲ್ಲ. 500 ವರ್ಷಗಳ ಕಾಲ ನಡೆದಿರುವ ದೀರ್ಘಾವ ಧಿ ಹೋರಾಟದಲ್ಲಿ ಸುಮಾರು 36 ಲಕ್ಷ ಜನರ ಬಲಿದಾನವಾಗಿದೆ. ಬ್ರಿಟೀಷರ ಕಾಲದಿಂದಲೂ ಈ ಪ್ರಕರಣ ನ್ಯಾಯಾಲಯದಲ್ಲಿತ್ತು. ಆದರೆ, ನ್ಯಾಯದಾನ ವಿಳಂಬವಾಗಿದ್ದರಿಂದ ಜನಾಕ್ರೋಶಕ್ಕೆ ಸಿಲುಕಿ ಬಾಬರಿ ಮಸೀದಿ ಧ್ವಂಸವಾಯಿತು. 1992 ಡಿಸೆಂಬರ್‌ 6ರಂದು 7 ಲಕ್ಷ ಮಂದಿ ಕರಸೇವಕರು ನಾಲ್ಕು ಗಂಟೆಯಲ್ಲಿ 400 ವರ್ಷಗಳ ಕಳಂಕ ತೊಡೆದುಹಾಕಿದ್ದು ಐತಿಹಾಸಿಕ ಘಟನೆಯಾಗಿದೆ.

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದರೆ ಅದು ಲಕ್ಷಾಂತರ ಕರಸೇವಕರ ತ್ಯಾಗ-ಬಲಿದಾನದ ಫಲ ಎಂದು ಹೇಳಿದರು. 1997ರಿಂದಲೂ ಚಿಕ್ಕಮಗಳೂರಿನ ದತ್ತಪೀಠ ವಿಚಾರವಾಗಿ ಹಿಂದೂಗಳು ಹೋರಾಟ ನಡೆಸುತ್ತಿದ್ದರೂ ನ್ಯಾಯ ಸಿಕ್ಕಿಲ್ಲ. ದತ್ತಪೀಠವನ್ನು ಹಿಂದೂಗಳಿಗೆ ಮುಕ್ತಗೊಳಿಸುವ ಮೂಲಕ ಸರ್ಕಾರ ಹೋರಾಟಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಪಿಎಫ್‌ಐ ಕಾರ್ಯಕರ್ತರ ಮೇಲಿನ 300 ಕೇಸ್‌ ಹಿಂಪಡೆದ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನೂ ಹಿಂಪಡೆಯಬೇಕು ಎಂದರು. ಭಾರತೀಯ ಸಂಸ್ಕೃತಿಯಲ್ಲಿ ಗೋವನ್ನು ತಾಯಿ ಎಂಬುದಾಗಿ ಪೂಜಿಸುತ್ತೇವೆ. ಆದರೆ, ಇಂತಹ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವುದರಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಇದೊಂದು ದೊಡ್ಡ ಮಾಫಿಯಾ ಆಗಿದ್ದು, ಇದನ್ನು ತಡೆಯಲು ಹಿಂದೂ ಸಮಾಜ ಸಂಘಟಿತವಾಗಬೇಕು ಎಂದು ಅವರು ಮನವಿ ಮಾಡಿದರು.

ದಾವಣಗೆರೆಯ ಆಜಾದ್‌ ನಗರವೊಂದರಲ್ಲೇ 100ಕ್ಕೂ ಅಧಿಕ ಅನಧಿಕೃತ ಕಸಾಯಿಖಾನೆಗಳಿವೆ. ಇವುಗಳನ್ನು ತೆರವು ಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದರೆ, ನಮ್ಮ ವಿರುದ್ಧವೇ ಕೇಸ್‌ ಹಾಕುತ್ತಾರೆ. ಅನಧಿಕೃತ ಕಸಾಯಿಖಾನೆಗಳಿಂದ ಅಧಿಕಾರಿಗಳ ಜೇಬಿಗೆ ದುಡ್ಡು ಹೋಗುತ್ತಿದೆ ಎಂದು ಆರೋಪಿಸಿದರು.

Advertisement

ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಮಹೇಶಕುಮಾರ್‌ ಕಟ್ಟಿಮನಿ, ರಾಜ್ಯ ಸಂಘಟನಾ ಪ್ರಮುಖ್‌ ಪರಶುರಾಮ ನಡುಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಆರ್‌.ಆನಂದ್‌, ರಾಜ್ಯ ಕಾರ್ಯದರ್ಶಿ ಹರೀಶ್‌, ಗುತ್ತಿಗೆದಾರರಾದ ಹನುಮಂತ ನಾಯ್ಕ, ರವಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀರಾಮಸೇನೆಯ ಜಿಲ್ಲಾ ಘಟಕಕ್ಕೆ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next