Advertisement
ಭಾನುವಾರ, ನಗರದ ಸರ್ಕಾರಿ ಹೈಸ್ಕೂಲ್ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಶರನ್ನವರಾತ್ರಿ ದಸರಾ ನಾಡಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯು ಶಕ್ತಿಯನ್ನು ಆರಾಧಿ ಸುವ ಬಹು ದೊಡ್ಡ ಹಬ್ಬ. ಜೀವನ ಮೌಲ್ಯಗಳ ಪುನರುತ್ಥಾನದಿಂದ ಶ್ರೇಯಸ್ಸು ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.
Related Articles
Advertisement
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಜಿ.ಎಂ.ಸಿದ್ಧೇಶ್ವರ್, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್, ಮಾಜಿ ಶಾಸಕರಾದ ಎಂ.ಬಸವರಾಜ ನಾಯ್ಕ,ಬಿ.ಪಿಹರೀಶ್, ಅ.ಭಾ.ವೀ.ಮ.ಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ ಇತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ವಿ.ಆರ್.ಎಲ್. ಛೇರ್ಮನ್ ಡಾ| ವಿಜಯ ಸಂಕೇಶ್ವರಗೆ ಕಾಯಕ ಕಲಾ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಗೌರವ ಶ್ರೀ ರಕ್ಷೆ ಹಾಗೂ ಡಾ| ಎನ್.ಎ. ಚರಂತಿಮಠ, ಕೆ.ಎಂ. ಇಮಾಂ, ರಾಜನಹಳ್ಳಿ ರಮೇಶ್‌ಬಾಬು, ದಿನೇಶ್ ಕೆ. ಶೆಟಿ,r ಡಾ| ಎಸ್.ಆರ್.ಹೆಗಡೆ, ರಾಹುಲ್ ಸಂಕನೂರು, ಬಿ.ಕೆ. ಸುಭಾಷ್‌ಚಂದ್ರ, ಜಯಪ್ರಕಾಶ್ ಅಂಬರಕರ್, ವಾಗೀಶ ವಿಶ್ವನಾಥಸ್ವಾಮಿ ಹಿರೇಮಠ, ಡಾ| ಡಿ.ಆರ್. ಮಂಜುನಾಥ, ನಂದಾ ಜಗದೀಶ್ ಉಪ್ಪಿನ್, ಅಂಬಿಕಾದೇವಿ ಬಂಕಾಪುರ ಶಿವಣ್ಣನವರ್, ವಾಣಿ ಡಾ| ಸೋಮಶೇಖರ್, ಶೈಲಾ ಮಹಾಬಲೇಶ್ ಘಟ್ಟದ, ಎಸ್.ವಿ.ನಾಗರಾಜಪ್ಪ, ಪಟೇಲ್ ಶಿವಕುಮಾರ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು.
ಲಕ್ಷ್ಮೇಶ್ವರದ ಡಾ| ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ನವರಾತ್ರಿಯಲ್ಲಿ ಶಕ್ತಿ ಆರಾಧನೆ ಮಹತ್ವ ಕುರಿತು ಉಪನ್ಯಾಸ ನೀಡಿದರು. ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ಹಾಸನದ ಗಾನವಿ ವೀರಭದ್ರಪ್ಪ ಇವರಿಂದ ಆಕರ್ಷಕ ಭರತ ನಾಟ್ಯ ಜರುಗಿತು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದವರಿಂದ ವೇದಘೋಷ ನಡೆಯಿತು. ಅ.ಭಾ. ವೀ.ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ್ ನಿರೂಪಿಸಿದರು. ಗಾನಭೂಷಣ ವೀರೇಶ ಕಿತ್ತೂರ ಸಂಗೀತ ನಡೆಸಿಕೊಟ್ಟರು. ಕೊನೆಯಲ್ಲಿ ನಜರ್ ಸಮರ್ಪಿಸಲಾಯಿತು.