Advertisement
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಗಳಿಗೆ ಬಂದಿರುವ ಅನುದಾನ ಹಿಂದಕ್ಕೆ ಹೋಗದಂತೆ ನಿಗದಿತ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಬಳಕೆ ಮಾಡಬೇಕು ಹಾಗೂ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚಿಸಿದರು.
Related Articles
Advertisement
ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದಾಗಲೂ ಈ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಯಾವುದೇ ಹಾಸ್ಟೆಲ್ ಗೆ ಕಟ್ಟಡವನ್ನು ಬಾಡಿಗೆ ಪಡೆಯುವಾಗ ಅಗತ್ಯ ಮೂಲಭೂತ ಸೌಲಭ್ಯ ಇರುವುದನ್ನ ಖಾತರಿ ಪಡಿಸಿಕೊಳ್ಳಬೇಕು. ಸ್ವಂತ ಕಟ್ಟಡ ಹೊಂದಿರುವ ಹಾಸ್ಟೆಲ್‌ಗಳಲ್ಲಿ ಸೌರ ವಿದ್ಯುತ್, ಇತರೆ ಸೌಲಭ್ಯ ಒದಗಿಸುವ ಮೂಲಕ ಮಾದರಿ ಹಾಸ್ಟೆಲ್ ಮಾಡಿ ಎಂದು ಉಪ ಕಾರ್ಯದರ್ಶಿ ಬಿ. ಆನಂದ್ ಸೂಚಿಸಿದರು.
ನಮಗೆ ತುರ್ತು ಮತ್ತು ಅನಿವಾರ್ಯವಾಗಿ ಬೇಕು ಎಂದು ಕಟ್ಟಡಗಳ ಬಾಡಿಗೆ ಪಡೆಯುತ್ತೇವೆ. ಅನೇಕ ಹಾಸ್ಟೆಲ್‌ಗಳು ಕಿಷ್ಕಿಂಧೆಯಂತೆ ಇರುತ್ತವೆ. ಮಕ್ಕಳನ್ನು ಜೈಲಿಗೆ ಹಾಕಿದಂತೆ ಇರುತ್ತದೆ. ಮಾಲೀಕರು ಸಹ ಹಾಸ್ಟೆಲ್‌ಗೆ ನೀಡಬೇಕು ಎಂದೇನು ಹೆಚ್ಚಾಗಿ ಶೌಚಾಲಯ ಇತರೆ ಮೂಲಭೂತ ಸೌಲಭ್ಯ ಒದಗಿಸಿರುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಬಚ್ಚಲು ಮನೆ ಇತರೆ ಅಗತ್ಯ ಮೂಲಭೂತ ಸೌಲಭ್ಯ ಮಾಡಿಕೊಟ್ಟರೆ ಬಾಡಿಗೆಗೆ ಹೋಗಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಲೋಕೇಶ್ವರ್ ಸೂಚಿಸಿದರು.
ಕೆಲವು ಕಡೆ ವಿದ್ಯಾರ್ಥಿನಿಯರು ರಾತ್ರಿ ವೇಳೆ ಊಟಕ್ಕೆ ದೂರ ಹೋಗುವುದು ಇದೆ. ವಿದ್ಯಾರ್ಥಿನಿಯರಿಗೆ ಏನಾದರೂ ಅವಘಡವಾದಲ್ಲಿ ಸಂಬಂಧಿತ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ. ಹಾಗಾಗಿ ವಸತಿ ಇರುವ ಕಡೆಯೇ ಅಡುಗೆ ವ್ಯವಸ್ಥೆ ಮಾಡಬೇಕು ಎಂದು ಉಪ ಕಾರ್ಯದರ್ಶಿ ಬಿ. ಆನಂದ್ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪಗೆ ಸೂಚಿಸಿದರು.
ಕೆಲವು ಹಾಸ್ಟೆಲ್‌ಗಳಲ್ಲಿ ಮಂಚ ನೀಡಿದ್ದರೆ, ಹಾಸಿಗೆ ನೀಡಿಲ್ಲ. ಕೆಲ ಹಾಸ್ಟೆಲ್‌ಗಳಲ್ಲಿ ಹಾಸಿಗೆ ನೀಡಿದ್ದರೆ ಮಂಚ ನೀಡಿಲ್ಲ ಏಕೆ ಎಂದು ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಪ್ರಶ್ನಿಸಿದರು. ಸ್ವಂತ ಕಟ್ಟಡ ಹೊಂದಿರುವ ಹಾಸ್ಟೆಲ್‌ಗಳಿಗೆ ಜೂನ್‌ಗೆ ಮಂಚ, ಹಾಸಿಗೆ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕುಂಬಾರ್ ತಿಳಿಸಿದರು.