Advertisement

ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ

08:48 AM Feb 20, 2020 | Mithun PG |

ದಾವಣಗೆರೆ: ತೀವ್ರ ಕುತೂಹಲ ಕೆರಳಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್‌ ಚುನಾವಣೆಯಲ್ಲಿ  ಕಾಂಗ್ರೆಸ್‌ ಪಕ್ಷದ ಸದಸ್ಯರು  ಸಭೆ ಬಹಿಷ್ಕರಿಸಿದ್ದರಿಂದ ಬಿಜೆಪಿಗೆ ಅಧಿಕಾರ ಚುಕ್ಕಾಣಿ ನಿರಾಯಾಸವಾಗಿ ದಕ್ಕಿದೆ.

Advertisement

ಮೇಯರ್ ಆಗಿ ಭಾರತೀಯ ಜನತಾ ಪಕ್ಷದ ಬಿ.ಜೆ.ಅಜಯ್ ಕುಮಾರ್ ಹಾಗೂ ಉಪ ಮೇಯರ್ ಆಗಿ ಸೌಮ್ಯ ಎಸ್.ನರೇಂದ್ರ ಕುಮಾರ್ ಆಯ್ಕೆಯಾದರು.

ಒಟ್ಟು 62 ಮತದಾರರಲ್ಲಿ ಒಟ್ಟು  ಸದಸ್ಯರಲ್ಲಿ 59  ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರಾದರೂ ಕೊನೆಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಚುನಾವಣೆ ಬಹಿಷ್ಕರಿಸಿದ್ದರಿಂದ ಬಿಜೆಪಿಗೆ ಗೆಲುವು ಅನಾಯಾಸವಾಗಿ ಲಭಿಸಿತು.

ಕಾಂಗ್ರೆಸ್ ಪಕ್ಷದ ಮೂರು ಸದಸ್ಯರು ಗೈರುಹಾಜರಾಗಿದ್ದರು.. ಜೆ.ಎನ್. ಶ್ರೀನಿವಾಸ್, 37ನೇ ವಾರ್ಡ್ ನ ಶ್ವೇತಾ ಶ್ರೀನಿವಾಸ್, ಯಶೋಧ ಉಮೇಶ್ ಗೈರಾದ ಕಾಂಗ್ರೆಸ್ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next