Advertisement
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಮತ್ತು ಜಿಲ್ಲಾ ಸವಿತಾ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಮತ್ತು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಮಹಾತ್ಮರ ಕಾಯಕ ಮತ್ತು ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ನಾವು ಆಚರಿಸುವ ಜಯಂತಿ ಅರ್ಥಪೂರ್ಣವಾಗುತ್ತವೆ ಎಂದರು.
Related Articles
Advertisement
ಬೀದರ್‌ನ ಬಸವ ಅನುಭವ ಮಂಟಪದಲ್ಲಿ ಎಲ್ಲಾ ಶರಣರ ತತ್ವ ಆದರ್ಶಗಳನ್ನು ಹಾಗೂ ಶರಣರ ಜೀವನವನ್ನು ಸಾರುವ ಕುಟೀರಗಳಿವೆ. ಪ್ರಸ್ತುತ ರಾಜ್ಯದಲ್ಲಿ 31 ಶರಣರ ಜಯಂತಿ ಆಚರಿಸಲಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಎಲ್ಲಾ ಶರಣರ ಜಯಂತಿಗಳನ್ನು ಒಂದೇ ಕಡೆ ಆಚರಿಸಿ, ಅವರ ತತ್ವ ಆದರ್ಶಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನವಾಗಬೇಕೆಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಅನಿತ ದೊಡ್ಡಗೌಡರ್, ಅರಸುತನ ಮೇಲಲ್ಲ, ಮಡಿವಾಳ ವೃತ್ತಿ ಕೀಳಲ್ಲ ಎನ್ನುವ ಮಾತಿನಂತೆ ಮಡಿವಾಳ ಮಾಚಿದೇವರು ತಮ್ಮ ಛಲ ಕಾಯಕವನ್ನು ಜಗತ್ತಿಗೆ ತೋರಿಸಿದ್ದಾರೆ. ಅವರು ಶಿವ ಶರಣರ ಬಟ್ಟೆ ಸ್ವಚ್ಚಗೊಸುವ ಕಾಯಕದ ಜೊತೆ ಕ್ಷತ್ರಿಯರೂ ಆಗಿದ್ದರು ಎಂದರು.
12ನೇ ಶತಮಾನದಲ್ಲಿ ಮಹಿಳೆಯರ, ಮಕ್ಕಳ ಸ್ಥಿತಿ ಶೋಚನೀಯವಾಗಿತ್ತು. ಮಹಿಳೆಯರು ಅಸಹಾಯಕರು ಮತ್ತು ಅಶಕ್ತರಾಗಿದ್ದರು. ಇತಹ ಕಾಲದಲ್ಲಿ ವಚನಗಳು ತುಂಬಾ ಪ್ರಭಾವ ಬೀರಿದ್ದವು ಎಂದ ಅವರು, ಮಡಿವಾಳ ಮಾಚಿದೇವರ ಹುಟ್ಟು ಮತ್ತು ಅವರ ಜೀವನದ ಬಗ್ಗೆ ಅವರ ವಚನಗಳ ಮೂಲಕ ತಿಳಿಸಿಕೊಟ್ಟರು.
ವಕೀಲ ಎನ್. ರಂಗಸ್ವಾಮಿ, ಸವಿತ ಸಮಾಜದ ಮೂಲ ಪುರುಷ ಶ್ರಿ ವಿಷ್ಣು ನಾಮದಿಂದ ಸೃಷ್ಟಿಯಾದವರು ಸವಿತಾ ಮಹರ್ಷಿ. ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೆ ಕ್ಷೌರಿಕರ ಅಗತ್ಯವಿದೆ. ಮನುಷ್ಯನ ಪಾಪ ತೊಳೆಯುವ ಕೆಲಸವನ್ನು ಕ್ಷೌ ರಿಕರು ಮಾಡುತ್ತಾರೆ. ಅಷ್ಟೇ ಅಲ್ಲದೆ ಸಂಗೀತ ವಾದ್ಯ ನುಡಿಸುವ ಕಾರ್ಯದಲ್ಲಿ ಹೆಚ್ಚು ಪ್ರಸಿದ್ದಿ ಹೊಂದಿದ ಸಮುದಾಯವಾಗಿದೆ. ಹಡಪದ ಅಣ್ಣಪ್ಪನವರು ತಮ್ಮ ನಿಷ್ಠೆಯ ಕಾಯಕ ಮಾಡುತ್ತಾ ಬಂದವರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಉಮೇಶ್. ಎಚ್.ಜಿ ನಿರೂಪಿಸಿದರು. ಮಡಿವಾಳ ಮಾಚಿದೇವ ಸಮುದಾಯದ ಜಿಲ್ಲಾಧ್ಯಕ್ಷ ಬಾಲರಾಜ್, ಮಡಿವಾಳ ಸಂಘದ ಕಾರ್ಯದರ್ಶಿ ಧನಂಜಯ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರ, ಹಾಗೂ ವಿವಿಧ ಸಮಾಜದ ಮುಖಂಡರು ಮತ್ತು ಸಮಾಜದ ಜನರು ಉಪಸ್ಥಿತರಿದ್ದರು.