Advertisement

ಕಾಂಗ್ರೆಸ್‌ನ 50 ಕೋಟಿ ರೂ. ಆರೋಪ ಸುಳ್ಳು

01:10 PM Apr 10, 2019 | Naveen |

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಚುನಾವಣೆಯಲ್ಲಿ ಹಂಚುವುದಕ್ಕೆ ಅಲ್ಲಲ್ಲಿ 50 ಕೋಟಿ ಡಂಪ್‌ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು ಬಿಜೆಪಿ ವಕ್ತಾರ ಕೊಂಡಜ್ಜಿ ಜಯಪ್ರಕಾಶ್‌ ಹೇಳಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಹಣ ಡಂಪ್‌ ಮಾಡಿದ್ದಾರೆ ಎಂಬ ಸಣ್ಣತನದ ಆರೋಪ ಮಾಡಿರುವ ಡಿ. ಬಸವರಾಜ್‌ ಅವರಿಗೆ ಎಲ್ಲದ್ದಕ್ಕೂ ವಿರೋಧ ಮಾಡಬೇಕು ಎಂಬ ಕಾಯಿಲೆ ಇದೆ. ವಿರೋಧ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿರುವ ಅವರು ಅಂತಹ ಹೇಳಿಕೆ ಬಿಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ
ಒತ್ತಾಯಿಸಿದರು.

ರಾಜ್ಯದಲ್ಲಿ ಅವರದ್ದೇ ಪಕ್ಷದ ಬೆಂಬಲದ ಸರ್ಕಾರ ಇದೆ. ಇಲಾಖೆಗಳು ಇವೆ. ಅವುಗಳಿಂದಲೇ ತನಿಖೆ ನಡೆಸಲಿ, ಬೇಡ ಎನ್ನುವುದೇ ಇಲ್ಲ. ಬಿಜೆಪಿ ಅಭ್ಯರ್ಥಿಗೆ ಹಣ ಹಂಚಿ ಮತ ಪಡೆಯುವಂತಹ ಸನ್ನಿವೇಶವೇ ಇಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಕೈ ಮುಗಿದುಕೊಂಡು ಹೋಗಿ ಮತಯಾಚನೆ
ಮಾಡುತ್ತಿದ್ದಾರೆ. ಅವರ ಪಕ್ಷದ ಮುಖಂಡರು ಮೂರು ಚುನಾವಣೆಯಲ್ಲಿ ಹಣ ಹಂಚಿ ಈಗ ಮನೆ ಸೇರಿಕೊಂಡಿದ್ದಾರೆ. ಹಣ ಹಂಚಿ ಮತ ಪಡೆಯುವುದೇ ಆಗಿದ್ದರೆ ನಾಲ್ಕು ಚುನಾವಣೆಯಲ್ಲಿ ಅವರ ನಾಯಕ ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್‌ ಕ್ಷೇತ್ರಕ್ಕೆ 10 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.

ಅವರ ಸಾಧನೆ ಶೂನ್ಯ ಎಂದು ಆರೋಪ ಮಾಡಿರುವ ಡಿ. ಬಸವರಾಜ್‌ ಪಕ್ಷದವರ ಸಾಧನೆ ಏನು? ಅವರ ಪಕ್ಷದ ಅಭ್ಯರ್ಥಿಯಾಗಿರುವ ಎಚ್‌.ಬಿ. ಮಂಜಪ್ಪ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಏನು ಕೆಲಸ ಮಾಡಿಸಿದ್ದಾರೆ ಎಂದು ಪ್ರಶ್ನಿಸಿದರು.

ರೈತ ಕುಟುಂಬದಿಂದ ಬಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ್‌ ವ್ಯಾಪಾರ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆಯುವ ಅವರು ಯಾರೇ ಆಗಲಿ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಸ್ವೀಕರಿಸುತ್ತಾರೆ. ಜನತೆಗೆ ಸ್ಪಂದಿಸುತ್ತಾರೆ.

Advertisement

ಆ ಕಾರಣದಿಂದಾಗಿಯೇ ಅವರಿಗೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಆಶೀರ್ವಾದ ಮಾಡಲಿದ್ದಾರೆ. ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸುವರು ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಸಹ ಸಂಸದರಾಗಿದ್ದರು. ಯಾವುದೇ ಅಭಿವೃದ್ಧಿ ಮಾಡಲೇ ಇಲ್ಲ. ಜನರೊಂದಿಗೆ ಬೆರೆಯಲಿಲ್ಲ. ಬರೀ ದಾವಣಗೆರೆಗೆ
ಸೀಮಿತವಾಗಿದ್ದವರಿಗೆ ನಮ್ಮ ಬಗ್ಗೆ ಮಾತನಾಡುವ ಅಧಿಕಾರ, ನೈತಿಕತೆಯೇ ಇಲ್ಲ ಎಂದರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸ್ವಾಗತಾರ್ಹ. ಕಾಂಗ್ರೆಸ್‌ನವರು 70 ವರ್ಷದ ನಂತರ ಈಗ ನ್ಯಾಯ ಕೊಡಿಸುತ್ತೇವೆ ಎಂದು ಹೊರಟಿದ್ದಾರೆ. ಗರೀಬಿ ಹಠಾವೋ ಎಂದರು. ಆದರೆ ಬಡತನ ನಿರ್ಮೂಲನೆ ಆಗಲಿಲ್ಲ. 20 ಅಂಶ ಜಾರಿಯಾಗಲೇ ಇಲ್ಲ.
ಅಲ್ಪಸಂಖ್ಯಾತರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ನಮ್ಮದು ಕನಸನ್ನ ನನಸು ಮಾಡುವಂತಹ, ಸಶಕ್ತ ಭಾರತ ನಿರ್ಮಾಣದ ಪ್ರಣಾಳಿಕೆ ಎಂದು ಹೇಳಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ಭಟ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌, ಬಿ.ಎಸ್‌. ಜಗದೀಶ್‌, ಬಿ.ಎಂ. ಸತೀಶ್‌, ಪ್ರಸನ್ನಕುಮಾರ್‌, ಧನುಷ್‌ ರೆಡ್ಡಿ, ಶಶಿಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

ಡಿ. ಬಸವರಾಜ್‌ ಅವರಿಗೆ ಎಲ್ಲದ್ದಕ್ಕೂ ವಿರೋಧ ಮಾಡಬೇಕು ಎಂಬ ಕಾಯಿಲೆ ಇದೆ. ವಿರೋಧ ಮಾಡುವುದನ್ನೇ ಹವ್ಯಾಸ
ಮಾಡಿಕೊಂಡಿರುವ ಅವರು ಅಂತಹ ಹೇಳಿಕೆ ಬಿಡಬೇಕು.
ಕೊಂಡಜ್ಜಿ ಜಯಪ್ರಕಾಶ್‌, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next