Advertisement

ಪೈಪಲೈನ್‌ ಒಡೆದು ಚಿಮ್ಮಿದ ನೀರು

11:27 AM Jun 27, 2020 | Naveen |

ದಾವಣಗೆರೆ: ಜಿಲ್ಲೆಯ ಪೂರ್ವ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮುಖೇನ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿತ 22 ಕೆರೆಗಳ ಏತ ನೀರಾವರಿ ಯೋಜನೆಗೆ ದಶಕವೇ ಕಳೆದರೂ ವಿಘ್ನಗಳು ಮಾತ್ರ ತಪ್ಪುತ್ತಿಲ್ಲ.

Advertisement

ಹತ್ತು ವರ್ಷಗಳ ಹಿಂದೆ ಸ್ವತಃ ಮಠಾಧೀಶರರು 22 ಕೆರೆಗಳ ಏತ ನೀರಾವರಿ ಜಾರಿಗೆ ಒತ್ತಾಯಿಸಿ ರೈತರು, ಜನಸಾಮಾನ್ಯರು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಧಿಕಾರವಧಿಯಲ್ಲಿ ಯೋಜನೆಗೆ ಹಸಿರು ನಿಶಾನೆ ದೊರೆತು ಕಾಮಗಾರಿಯು ಪ್ರಾರಂಭವಾಗಿತ್ತು. ಆದರೆ, ಈವರೆಗೆ ಯೋಜನೆಯ ಮೂಲ ಉದ್ದೇಶ ಮಾತ್ರ ಈಡೇರಿಲ್ಲ. ಈಗ ಈಡೇರುವ ಲಕ್ಷಣಗಳು ಕಾಣುತ್ತಲೂ ಇಲ್ಲ. ಪೈಪ್‌ ಲೈನ್‌ ಒಡೆದು ಲಕ್ಷಾಂತರ ಲೀಟರ್‌ ನೀರು ಪೋಲಾಗುವುದು ಸಾಮಾನ್ಯ ಎನ್ನುವಂತಾಗಿದೆ.

ಕಳೆದ ಸೋಮವಾರ(ಜೂ.22) ರಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಇತರೆ ಜನಪ್ರತಿನಿಧಿಗಳು ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ದಿನವೇ ಕೆಲವು ಕಡೆ ಪೈಪ್‌ ಒಡೆದು ನೀರು ಪೋಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಶುಕ್ರವಾರ ಹರಿಹರ-ದಾವಣಗೆರೆ ಮಧ್ಯೆ ಮತ್ತೆ ಪೈಪ್‌ ಒಡೆದು ನೀರು ಪೋಲಾಯಿತು. ಕಾರಂಜಿಯಂತೆ ನೀರು ಚಿಮ್ಮುವುದನ್ನ ಜನರು ಬೆಕ್ಕಸ ಬೆರಗಾಗುವಂತೆ ನೋಡಿದರು. ಪೈಪ್‌ ಲೈನ್‌ ಒಡೆಯುವುದು, ನೀರು ಪೋಲಾಗುವುದು ತಪ್ಪುವುದು ಯಾವಾಗ ಎನ್ನುವುದೇ ಜನ ಸಾಮಾನ್ಯರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next