ಸ್ಪರ್ಧಿಯಾಗಲು ಬಯಸುತ್ತಿದ್ದಾರೆ ಹೊರತು, ಬೇರೆಯವರ ಜೊತೆ ಸ್ಪರ್ಧೆಯಿಂದ ೂರವಂತೆ. ಬೆರಳೆಣಿಕೆ ವರ್ಷದಲ್ಲೇ ಅದಿತಿ ಸಾಲು ಚಿತ್ರಗಳಿಗೆ ನಾಯಕಿಯಾಗಿರುವುದು
ಗೊತ್ತೇ ಇದೆ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅದಿತಿ, ತಮ್ಮ ಕಲರ್‌ಫುಲ್ ಜರ್ನಿ ಕುರಿತು ಮಾತನಾಡಿದ್ದಾರೆ.
Advertisement
ನೋಡ ನೋಡುತ್ತಿದ್ದಂತೆಯೇ ಬೆಣ್ಣೆದೋಸೆ ಊರಿನ ಹುಡುಗಿ ಅದಿತಿ ಬೇಡಿಕೆ ನಟಿಯಾಗಿದ್ದಂತೂ ಹೌದು. ಅವರ ಕೈಯಲ್ಲೀಗ ಒಂದಲ್ಲ, ಎರಡಲ್ಲ, ಬರೋಬ್ಬರಿಆರು ಚಿತ್ರಗಳಿವೆ. ಆ ಪೈಕಿ ನಾಲ್ಕು ಸಿನಿಮಾಗಳನ್ನು ಮುಗಿಸಿದ್ದು, ಈ ವಾರ “ಆಪರೇಷನ್ ನಕ್ಷತ್ರ ‘ ಬಿಡುಗಡೆಯಾದರೆ, ಮುಂದಿನವಾರ “ಚಿತ್ರ ಬಿಡುಗಡೆಯಾಗುತ್ತಿದೆ. ಇದುವರೆಗೆ ಒಪ್ಪಿಕೊಂಡಿರುವ ಚಿತ್ರಗಳಲ್ಲಿನ ಕಥೆ, ಪಾತ್ರ ಎಲ್ಲವೂ ಹೊಸದಾಗಿವೆಯಾ ಅಥವಾ ರೆಗ್ಯುಲರ್ ಎನಿಸಿ ದೆಯಾ? ಇದಕ್ಕೆ ಉತ್ತರಿಸುವ ಅದಿತಿ, “ನಾನು ಈವರೆಗೆ ಮಾಡಿದ ಚಿತ್ರಗಳಲ್ಲಿ ಎಲ್ಲವೂ ವಿಭಿನ್ನ. ಕಥೆ, ಪಾತ್ರ ಯಾವುದೂ ರೆಗ್ಯುಲರ್ ಆಗಿಲ್ಲ. ಅದು ನನ್ನ ಅದೃಷ್ಟ. ನನ್ನ ಆಯ್ಕೆ ಕೂಡ ವಿಭಿನ್ನವಾಗಿರುತ್ತೆ.
ನಂತರ ನಾಯಕಿಯರಿಗೆ ು ಭಯ ಇದ್ದೇ ಇರುತ್ತೆ. ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಬಹುದಾ? ಎಂಬುದೇ ಆ ಭಯದ ಪ್ರಶ್ನೆ. ಕ್ಕೆ ಉತ್ತರ ಕೊಡುವತಿ,”ನನಗೆ “ನಾಗಕನ್ನಿಕೆ’ ೊಡ್ಡ ಅವಕಾಶ ಕಲ್ಪಿಸಿತು. ಬಳಿಕ ಸುನಿ ಸರ್, ಮೇಲೆ ನಂಬಿಕೆ ಇಟ್ಟು
ಬಜಾರ್’ ಕೊಟ್ಟರು. ಶುರುವಾದ ರ್ನಿಯಲ್ಲಿ ಸಿನಿಮಾ ಬಜಾರ್ ಜೋರಾಗಿಯೇ
ನಡೆಯುತ್ತಿದೆ. ಯಾವುದೇ ಸಿನಿಮಾ ಮಾಡಿದರೂ, ತನ್ನ ಪಾಡಿಗೆ ತಾನು ಕೆಲಸ ಮಾಡಿ ಹೋಗುತ್ತಾಳೆ ಎಂಬ ಮಾತಿಗೆ ಕಾರಣವಾಗಿದ್ದೇನೆ. ಎಲ್ಲರ ನಂಬಿಕೆ ಉಳಿಸಿಕೊಂಡಿದ್ದೇನೆ. ಬಹುಶಃ ಇಲ್ಲಿ ಗಟ್ಟಿ ನೆಲೆ ಕಾಣೋಕೆ ಅದು ಪ್ರಮುಖ ಕಾರಣ ಎನ್ನಬಹುದು. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ಚಿತ್ರ ಒಪ್ಪಿದರೂ, ಯಾವಾಗ ಶುರು ಆಗುತ್ತೆ ಅಂತ ಕೇಳಿ ಕೇರ್‌ಫುಲ್ ಆಗಿ
ಕೆಲಸ ಮಾಡ್ತೀನಿ. ಯಾಕೆಂದರೆ, ಬೇರೆಯವರಿಗೆ ತೊಂದರೆ ಕೊಡಲು ಇಷ್ಟವಿಲ್ಲ. ಕೈಲಾದಷ್ಟು ಎಚ್ಚರಿಕೆ ವಹಿಸುತ್ತೇನೆ. ಕೆಲವೊಮ್ಮೆ ಅದು ಮೀರಿದರೆ ಏನೂ ಮಾಡೋಕ್ಕಾಗಲ್ಲ. ಸದ್ಯಕ್ಕೀಗ ನನ್ನ ಕೈಯಲ್ಲಿ “ತೋತಾಪುರಿ’, “ಬ್ರಹ್ಮಚಾರಿ’,
“ರಂಗನಾಯಕಿ’, “ಗಾಳಿಪಟ-2 ‘ ಚಿತ್ರಗಳಿವೆ. ಈ ವಾರ “ಆಪರೇಷನ್ ನಕ್ಷತ್ರ’ ರಿಲೀಸ್ ಆಗುತ್ತಿದೆ. ಮುಂದಿನವಾರ “ಸಿಂಗ’ ಬಿಡುಗಡೆಯಾಗುತ್ತಿದೆ.
Related Articles
Advertisement
ನಾನು ಆ ಚಿತ್ರದಲ್ಲಿ ಎರಡು ಶೇಡ್ ಪಾತ್ರ ನಿರ್ವಹಿಸಿದ್ದೇನೆ. ಇದೇ ಮೊದಲ ಸಲ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿ ದ್ದೇನೆ. ಪೋಸ್ಟರ್, ಟ್ರೇಲರ್ ನೋಡಿದರೆ, ಕುತೂಹಲ ಕೆರಳಿಸುತ್ತೆ. ಅಲ್ಲಿ ನಾಲ್ಕು ಪಾತ್ರಗಳು ಹೈಲೈಟ್. ಅಲ್ಲಿ ಎಲ್ಲರೂ ಕಳ್ಳರೇನಾ? ಅಲ್ಲಿ ವಿಲನ್ ಯಾರು? ಎಂಬ ಪ್ರಶ್ನೆ ಕಾಡದೇ ಇರದು. ಅದಕ್ಕೆ ಉತ್ತರ ಸಿನ್ಮಾ ನೋಡಬೇಕು. ಇನ್ನು, “ಸಿಂಗ’ ಚಿತ್ರದಲ್ಲಿ ಮುದ್ದಾಗಿರುವ ಪಾತ್ರ ಸಿಕ್ಕಿದೆ. “ಬ್ರಹ್ಮಚಾರಿ’ಯಲ್ಲಿ ಫುಲ್‌ಲೆಂಥ್ ಕಾಮಿಡಿ ಇದೆ. ಅದರಲ್ಲಿ ನುಲಿಯೋದು, ವೈಯ್ನಾರವಾಗಿರುವ ಪಾತ್ರ. ಹೀಗೆ ಒಂದೊಂದು ಚಿತ್ರದಲ್ಲೂ ಹೊಸತನ ತುಂಬಿರುವ ಪಾತ್ರವಿದೆ. ಎಲ್ಲಾ ರೀತಿಯ ಪಾತ್ರ ನಿಭಾಯಿಸುವ ಕೆಪಾಸಿಟಿ ಅದಿತಿಗೆ ಇದೆ ಅನ್ನೋದು ಗೊತ್ತಾಗಬೇಕಷ್ಟೇ. ನಾನು ನನ್ನ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡ್ತೀನಿ. ಸೆಟ್‌ಗೆ ಹೋದರೆ, ಸೀನ್ ಪೇಪರ್ ಜೊತೆ ಮಾತ್ರ ನನ್ನ ಕೆಲಸ.
ಯಾವುದೇ ಕಾರಣಕ್ಕೂ ಪ್ಯಾಕಪ್ ಆಗುವವರೆಗೂ ನಾನು ಮೊಬೈಲ್ ಬಳಸಲ್ಲ. ಅದನ್ನು ಎಲ್ಲಾ ಚಿತ್ರಗಳಲ್ಲೂ ಮುಂದುವರೆಸಿಕೊಂಡು ಹೋಗುವ ಆಸೆ ನನ್ನದು’ ಎಂಬುದು ಅದಿತಿ ಮಾತು. ಚಿತ್ರರಂಗದ ಸ್ಪರ್ಧೆಯ ಬಗ್ಗೆ ಮಾತನಾಡುವ ಅದಿತಿ, ‘ಎಲ್ಲೆಡೆ ಇದ್ದಂತೆ, ಸಿನಿಮಾರಂಗದಲ್ಲೂ ಕಾಂಪಿಟೇಷನ್ ಇದೆ. ಹಾಗಂತ, ನಾನು ಯಾರ ಜೊತೆಯಲ್ಲೂ ಕಾಂಪಿಟೇಷನ್‌ಗೆ ಇಳಿಯಲ್ಲ. ನನಗೆ ನಾನೇ ಕಾಂಪೀಟ್ ಮಾಡ್ತೀನಿ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಬದಲಾವಣೆ ಬಯಸುತ್ತೇನೆ. ಭಟ್ಟರ ‘ಗಾಳಿಪಟ-2′ ಚಿತ್ರಕ್ಕೆ ಸುಮಾರು 45 ನಿಮಿಷ ಆಡಿಷನ್ ಆಯ್ತು. ಒಂದು ಮುಗ್ಧ ಹುಡುಗಿ ಪಾತ್ರ, ಇನ್ನೊಂದು ರಗಡ್ ಪಾತ್ರ. ಅದಕ್ಕೆ ಭಟ್ಟರು ಸ್ಪಾಟ್‌ನಲ್ಲೇ ಆಡಿಷನ್ ಕೊಟ್ಟು, ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿ, ಭಾಷೆಯ ಹಿಡಿತ ಬಗ್ಗೆ ಗಮನಿಸಿ, ಆಯ್ಕೆ ಮಾಡಿದರು. ಎಲ್ಲಾ ಹೀರೋ, ನಿರ್ದೇಶಕರ ಜೊತೆ ಕೆಲಸ ಮಾಡುವಾಗ, ಒಬ್ಬೊಬ್ಬ ಅದಿತಿ ಕಾಣಿಸಿಕೊಳ್ಳುತ್ತಾಳೆ’ ಎನ್ನುವ ಅದಿತಿ, ಕನ್ನಡದಲ್ಲೇ ಒಳ್ಳೆಯ ವೇದಿಕೆ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಆಸೆ ನನ್ನದು’ ಎಂದು ಮಾತು ಮುಗಿಸುತ್ತಾರೆ.
ವಿಜಯ್ ಭರಮಸಾಗರ