Advertisement

ಪರಿಸರ ದಿನಾಚರಣೆ ನಿತ್ಯ ನಿರಂತರವಾಗಿರಲಿ: ವಚನಾನಂದ ಶ್ರೀ

05:00 PM Jun 13, 2020 | Naveen |

ದಾವಣಗೆರೆ: ಭೂಮಿ ಮೇಲಿರುವ ಜೀವಿಗಳಿಗೆ ಪರಿಸರವೇ ಜೀವಾಳ. ಆದ್ದರಿಂದ ಗಿಡ ನೆಡುವುದು ಪರಿಸರ ದಿನಕ್ಕೆ ನೇಮಿತವಾಗಬಾರದು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

Advertisement

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಆವರು, ವಿಶ್ವ ಪರಿಸರ ದಿನಾಚರಣೆ ಪ್ರತಿ ವರ್ಷ ಜೂ. 5 ರಂದು ಅಥವ ತಿಂಗಳೊಳಗೆ ಒಂದು ದಿನ ಆಚರಿಸುತ್ತೇವೆ. ಅದು ಪ್ರತಿ ನಿತ್ಯವೂ ಆಗಬೇಕು ಎಂದು ಆಶಿಸಿದರು.

ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಸಿಗಬೇಕೆಂದರೆ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಘೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಸುಭಾಸ್‌ಚಂದ್ರ ಬೋಸ್‌ ಮರಗಳು ನಮ್ಮವೇ ಪ್ರತಿರೂಪ ಎಂದು ಹೇಳಿದ್ದಾರೆ. ವಿಶ್ವ ಪರಿಸರ ದಿನ ಎಂದಾಕ್ಷಣ ನೆನಪಿಗೆ ಬರೋದು ಸಾಲುಮರದ ತಿಮ್ಮಕ್ಕ. ನೆಟ್ಟ ಗಿಡಗಳು 284, ಆಲದ ಮರಗಳು ಬಾಚಿದ ಪ್ರಶಸ್ತಿ ಅನೇಕ. ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ನಮಗೆ ಅದಕ್ಕಿಂತ ದುಪ್ಪಟ್ಟು ಪ್ರಕೃತಿ ಕೊಡುತ್ತದೆ ಎನ್ನುವುದಕ್ಕೆ ವೃಕ್ಷಮಾತೆಯೇ ಸಾಕ್ಷಿ ಎಂದು ಬಣ್ಣಿಸಿದರು.

ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ. ಲೋಕೇಶ್‌, ಪ್ರಧಾನ ಕಾರ್ಯದರ್ಶಿ ಎ.ಸಿ. ಕಾಶಿನಾಥ್‌, ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ನಾಗರಾಜ್‌ ಕುಂಕೋದ್‌, ವಾಣಿ ಗುರು, ಶಶಿಕಲಾ ಶಿವಲಿಂಗಪ್ಪ, ಯುವ ಘಟಕ ಅಧ್ಯಕ್ಷ ಕೆ. ಶಿವಕುಮಾರ್‌, ನಗರ ಘಟಕದ ಅಧ್ಯಕ್ಷ ಕೈದಾಳೆ ಶಿವಶಂಕರ್‌, ಗೌರಮ್ಮ ಐಗೂರು, ನಾಗವೇಣಿ, ಬಾದಾಮಿ ಜಯಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next